Asianet Suvarna News Asianet Suvarna News

ಯುಪಿ ಮದರಸಾ ಶಿಕ್ಷಣ ಕಾಯ್ದೆ ಅಸಂವಿಧಾನಿಕ, ರದ್ದುಗೊಳಿಸಿ ಹೈಕೋರ್ಟ್ ಆದೇಶ!

ಉತ್ತರ ಪ್ರದೇಶ ಮದರಸಾ ಶಿಕ್ಷಣ ಕಾಯ್ದೆ 2004 ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಇಷ್ಟೇ ಅಲ್ಲ ಈ ಕಾಯ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
 

Allahabad high court order Struck Down up madarsa board Education act 2004 says unconstitutional ckm
Author
First Published Mar 22, 2024, 3:52 PM IST

ಅಲಹಾಬಾದ್(ಮಾ.22) ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2004ರ ಉತ್ತರ ಪ್ರದೇಶ ಮದರಸಾ ಕಾಯ್ದೆ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಇದೇ ವೇಳೆ ಕಾಯ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಯುಪಿ ಮದರಾಸ ಕಾಯ್ದೆ ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಉತ್ತರ ಪ್ರದೇಶ ಮದರಾಸ ಮೇಲೆ ಬೃಹತ್ ತನಿಖೆ ನಡೆಸಿದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದೆ.

ಜಸ್ಟೀಸ್ ವಿವೇಕ್ ಚೌಧರಿ, ಜಸ್ಚೀಸ್ ಸುಭಾಷ್ ವಿದ್ಯಾರ್ಥಿ ಒಳಗೊಂಡ ಅಲಹಾಬಾದ್ ಹೈಕೋರ್ಟ್ ಪೀಠ ವಿಚಾರಣೆ ನಡೆಸಿ ಮಹತ್ವದ ಆದೇಶ ನೀಡಿದೆ. ಮದರಸಾದಲ್ಲಿರುವ ಈ ವಿದ್ಯಾರ್ಥಿಗಳು ಇತರ ಸಾಮಾನ್ಯ ಶಾಲೆಗೆ ಪ್ರವೇಶಾತಿ ಪಡೆಯಬಹುದು ಎಂದು ಕೋರ್ಟ್ ಹೇಳಿದೆ.  ಈ ತೀರ್ಪು ಇದೀಗ ಇತರ ರಾಜ್ಯದ ಮದರಸಾ ಶಿಕ್ಷಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. 

ಜ್ಞಾನವಾಪಿ ಪೂಜೆ ವಿರುದ್ದ ಸುಪ್ರೀಂಗೆ ಹೋದರೂ ಮರಳಿ ಪಡೆಯಲು ಸಿದ್ಧ; ವಕೀಲ ಹರಿಶಂಕರ್ ಜೈನ್!

2023ರ ಅಕ್ಟೋಬರ್ ತಿಂಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ, ಉತ್ತರ ಪ್ರದೇಶದ ಮದರಸಗಳ ಮೇಲೆ ತನಿಖೆ ಘೋಷಿಸಿತ್ತು. ಇದಕ್ಕಾಗಿ ಎಸ್‌ಐಟಿ ರಚನೆ ಮಾಡಿತ್ತು. ಪ್ರಮುಖವಾಗಿ ಮದರಸಾಗೆ ಬರುತ್ತಿರುವ ವಿದೇಶಿ ಬಂಡವಾಳ ಕುರಿತು ತನಿಖೆ ನಡೆಸಲಾಗಿತ್ತು. ಉತ್ತರ ಪ್ರದೇಶ ಮದರಸಾಗಳ ನಡೆಸಲು ಆರ್ಥಿಕ ನೆರವವನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒದಗಿಸುತ್ತಿದೆ. ಸರ್ಕಾರಿ ದುಡ್ಡಿನಲ್ಲಿ ನಡೆಯುತ್ತಿರುವ ಮದರಸದಲ್ಲಿ ಒಂದು ಧರ್ಮದ ಕುರಿತು ಬೋಧನೆ ಮಾಡಲಾಗುತ್ತಿದೆ? ಮದರಸಾಗಳ ಆಡಳಿತ ಸೇರಿದಂತೆ ಇತರ ಕೆಲ ಪ್ರಮುಖ ವಿಚಾರಗಳ ಕುರಿತು  ಆಯುಷ್ಮಾನ್ ಸಿಂಗ್ ರಾಥೋರ್ ರಿಟ್ ಪಿಟೀಶ್ ಸಲ್ಲಿಸಿದ್ದರು.

ಡಿಸೆಂಬರ್ 2023ರಲ್ಲಿ ಕೋರ್ಟ್ ಈ ಕುರಿತು ಮದರಸಾ ಆಡಳಿತದಲ್ಲಿ ಪಾರದರ್ಶಕತೆ ಅವಶ್ಯಕತೆಯನ್ನು ಒತ್ತಿ ಹೇಳಿತ್ತು. ಶಿಕ್ಷಣ ಸಂಸ್ಥೆಗಳು ಜಾತ್ಯಾತೀತ ತತ್ವದಡಿ ನಡೆಯಬೇಕು. ಇಲ್ಲಿ ಮದರಸಾಗಳು ಸರ್ಕಾರದ ಅನುದಾನದಲ್ಲಿ ನಡೆಯತ್ತಿದೆ. ಹೀಗಾಗಿ ಆಡಳಿತದ ಪಾರದರ್ಶಕತೆ, ಜಾತ್ಯಾತೀತ ತತ್ವಕ್ಕೆ ಅನುಗುಣವಾಗಿ ನಡೆಯಬೇಕು ಅನ್ನೋದನ್ನು ಕೋರ್ಟ್ ಹೇಳಿತ್ತು.

ಗೃಹಿಣಿಯಾಗಿರುವ ಪತ್ನಿ ಹೆಸರಿನಲ್ಲಿ ಪುರುಷ ಖರೀದಿಸಿದ ಆಸ್ತಿ, ಕುಟುಂಬದ ಆಸ್ತಿ: ಹೈಕೋರ್ಟ್

ಇದೀಗ ಅಲಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ಉತ್ತರ ಪ್ರದೇಶ ಮದರಾಸ ಕಾಯ್ದೆ 2004ನ್ನು ರದ್ದುಗೊಳಿಸಿದೆ. 
 

Follow Us:
Download App:
  • android
  • ios