ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂಗಳ ಪೂಜೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಮುಸ್ಲಿಮ್ ಸಮಿತಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲ, ಮುಸ್ಲಿಮ್ ಸಮಿತಿಗೆ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿದೆ. ಆದರೆ ಎಲ್ಲದ್ದಕ್ಕೂ ನಾವು ಸಿದ್ಧ ಎಂದಿದ್ದಾರೆ.

ವಾರಣಾಸಿ(ಫೆ.26) ಜ್ಞಾನವಾಪಿ ಮಸಿದಿ ಪ್ರಕರಣದಲ್ಲಿ ಮತ್ತೆ ಹಿಂದೂಗಳಿಗೆ ಅತೀ ದೊಡ್ಡ ಗೆಲುವು ಸಿಕ್ಕಿದೆ. 1993ರ ಬಳಿಕ ಜ್ಞಾನವಾಪಿ ಮಸಿದಿಯ ತಳಮಹಡಿಯಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಮ್ ಸಮಿತಿಗೆ ಹಿನ್ನಡೆಯಾಗಿದೆ. ಮುಸ್ಲಿಮ್ ಸಮಿತಿ ಅರ್ಜಿ ತಿರಸ್ಕಿರಸಿದ ಅಲಹಾಬಾದ್ ಹೈಕೋರ್ಟ್, ಹಿಂದೂಗಳ ಪೂಜೆಗೆ ತಡೆ ನೀಡಲು ನಿರಾಕರಿಸಿದೆ. ಈ ತೀರ್ಪಿನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹಿಂದೂ ಪರ ವಕೀಲ, ಹರಿ ಶಂಕರ್ ಜೈನ್, ಮುಸ್ಲಿಮ್ ಸಮಿತಿಗೆ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿದೆ. ಆದರೆ ಎಲ್ಲೇ ಹೋದರೂ ಪೂಜೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲಹಬಾದ್ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಹಿಂದೂಗಳ ಪೂಜೆಯ ಹಕ್ಕನ್ನು ಹೈಕೋರ್ಟ್ ಗೌರವಿಸಿದೆ. ಸತ್ಯವನ್ನೂ ಮುಚ್ಚಿಡಲು ಸಾಧ್ಯವಿಲ್ಲ. ವಾರಣಾಸಿ ಕೋರ್ಟ್ ನೀಡಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜ್ಞಾನವಾಪಿಯ ವ್ಯಾಸ್ ತೆಹಕಾನದಲ್ಲಿ ಹಿಂದೂಗಳು 1993ರ ವರೆಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಕಾನೂನುಬಾಹಿರವಾಗಿ ಈ ಹಕ್ಕನ್ನು ಹಿಂದೂಗಳಿಂದ ಕಸಿದುಕೊಳ್ಳಲಾಗಿದೆ. ಇದೀಗ ಮತ್ತೆ ಮರಳಿ ಪಡೆದಿದ್ದೇವೆ. ಮುಸ್ಲಿಮ್ ಸಮಿತಿಗೆ ಕೋರ್ಟ್‌ಗೆ ಹೋಗುವ ಅವಕಾಶವಿದೆ. ಅವರು ಸುಪ್ರೀಂ ಕೋರ್ಟ್‌ಗೆ ಕಾನೂನು ಹೋರಾಟಕ್ಕೆ ಮುಂದಾಗುವುದಾದರೆ ಸ್ವಾಗತ. ಕಾನೂನು ಹೋರಾಟಕ್ಕೂ ನಾವು ಕೂಡ ಸಿದ್ಧರಾಗಿದ್ದೇವೆ ಎಂದು ಹರಿಶಂಕರ್ ಜೈನ್ ಹೇಳಿದ್ದಾರೆ.

ಜ್ಞಾನವಾಪಿ ಹೋರಾಟಕ್ಕೆ ವಿಶ್ವನಾಥನ ಅಭಯ, ಪೂಜೆ ಪ್ರಶ್ನಿಸಿದ ಮುಸ್ಲಿಮ್ ಸಮಿತಿಗೆ ಹೈಕೋರ್ಟ್‌ನಲ್ಲೂ ಹಿನ್ನಡೆ!

ಜನವರಿ 31ರಂದು ವಾರಣಾಸಿ ಜಿಲ್ಲಾ ನ್ಯಾಯಲಯ ನೀಡಿದ ತೀರ್ಪು ಕಾಶಿ ವಿಶ್ವನಾಥನ ಮಂದಿರ ಹೋರಾಟದಲ್ಲಿ ಹಿಂದೂಗಳಿಗೆ ಸಿಕ್ಕ ಮಹತ್ವದ ಗೆಲುವಾಗಿತ್ತು. ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ಶೃಂಗಾರ ಗೌರಿ ಸೇರಿದಂತೆ ಹಿಂದೂ ಮೂರ್ತಿಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಮಹತ್ವದ ತೀರ್ಪು ನೀಡಿತ್ತು. ಹಿಂದೂಗಳ ವಾದ, ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿತ್ತು.

Scroll to load tweet…

7 ದಿನಗಳ ಒಳಗೆ ಪೂಜೆಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ವಾರಣಾಸಿ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಸ್ಥಳೀಯ ಜಿಲ್ಲಾಡಳಿತ ತೀರ್ಪು ನೀಡಿದ ಮಧ್ಯರಾತ್ರಿ ಒಳಗೆ ಎಲ್ಲಾ ವ್ಯವಸ್ಥೆ ಮಾಡಿ ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು. 1993ರ ವರೆಗೆ ಇಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಅವಕಾಶವನ್ನೂ ಕಾನೂನು ಬಾಹಿರವಾಗಿ ಕಸಿದುಕೊಳ್ಳಲಾಗಿತ್ತು ಅನ್ನೋದು ಹರಿಶಂಕರ್ ಜೈನ್ ಅವರ ಆರೋಪವಾಗಿದೆ.

ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌!