ಮಹಿಳಾ ನ್ಯಾಯಮೂರ್ತಿ, ವಕೀಲನನ್ನು ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ ಬೆನ್ನಲ್ಲಿಯೇ, ಆಕೆಯಿದ್ದ ಕೋರ್ಟ್ ಹಾಲ್‌ಗೆ ಆಗಮಿಸಿದ ವಕೀಲ ಜಡ್ಜ್‌ಗೆ ಗುರಾಯಿಸುತ್ತಿದ್ದ ಎಂದು ವರದಿಯಾಗಿದೆ.
ನವದೆಹಲಿ (ಏ.18): ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ವಕೀಲರೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ, ಫೇಸ್ ಬುಕ್‌ನಲ್ಲಿ ಮಹಿಳಾ ನ್ಯಾಯಮೂರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿದ, ಜಾತಿ ನಿಂದನೆ, ಅಸಹ್ಯಕರ ಟೀಕೆಗಳನ್ನು ಕಳುಹಿಸಿದ್ದ ಕಾರಣಕ್ಕೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ವಿನೋದ್ ದಿವಾಕರ್ ಅವರ ಪೀಠವು ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದೆ. "ನ್ಯಾಯಾಲಯಗಳ ನಿಂದನೆ ಕಾಯಿದೆ, 1971 ರ ಸೆಕ್ಷನ್ 2 (ಸಿ) ಅಡಿಯಲ್ಲಿ ಆಧಾರರಹಿತ ಅವಮಾನಕರ ಆರೋಪ, ಹಗರಣ ಮತ್ತು ಅಧಿಕಾರವನ್ನು ದುರ್ಬಲಗೊಳಿಸುವುದಕ್ಕಾಗಿ ನಿಮ್ಮ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದು ಎಂಬ ಕಾರಣವನ್ನು ತಿಳಿಸಲು ವಕೀಲರಾದ ಅಭಯ ಪ್ರತಾಪ್ ಅವರಿಗೆ ನೋಟಿಸ್ ನೀಡಿ. ಆ ಮೂಲಕ ಕೋರ್ಟ್‌ನ ಘನತೆ ಎತ್ತಿ ಹಿಡಿಯಿರಿ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ವಕೀಲ ಅಭಯ್ ಪ್ರತಾಪ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಹಿಳಾ ನ್ಯಾಯಮೂರ್ತಿಗೆ ಅಸಹ್ಯಕರ, ಕೆಟ್ಟ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಕಾರಣಕ್ಕೆ ಆತನನ್ನು ಬ್ಲಾಕ್ ಕೂಡ ಮಾಡಿದ್ದರು. ಆದರೆ, ಆ ನಂತರ ವಕೀಲ ತನಗೇನೂ ಕೆಲಸವಿಲ್ಲದೆ ಇದ್ದರೂ, ಮಹಿಳಾ ನ್ಯಾಯಮೂರ್ತಿಯಿದ್ದ ಕೋರ್ಟ್ ಹಾಲ್‌ಗೆ ತೆರಳಿ ಅವರನ್ನು ಗುರಾಯಿಸುವ ಕೆಲಸ ಮಾಡುತ್ತಿದ್ದ. ನಿರಂತರವಾಗಿ ಆತ ತನ್ನನ್ನು ಗುರಾಯಿಸುತ್ತಿದ್ದ. ಇದರಿಂದಾಗಿ ನನಗೆ ಕೆಲಸ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಹಿಳಾ ನ್ಯಾಯಮೂರ್ತಿ ಹೇಳಿದ್ದಾರೆ.
'ನನ್ನ ಚಪ್ಪಲಿ ಎತ್ತೋಕೆ ಲಾಯಕ್ಕಿಲ್ಲದವರೆಲ್ಲ ಇಂದು ಸಚಿವರಾಗಿದ್ದಾರೆ..' ಸಂಸದ ವರುಣ್ ಗಾಂಧಿ ಮಾತು!
ಬೇರೆ ಯಾವ ಮಾರ್ಗಗಳೂ ತೋಚದ ಕಾರಣಕ್ಕೆ, ವಕೀಲನ ವಿರುದ್ಧ ದೂರು ದಾಖಲು ಮಾಡಿದ್ದೆ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ವಕೀಲನ ವಿರುದ್ಧ ಎಫ್‌ಐಆರ್ ಕೂಡ ದಾಖಲು ಮಾಡಲಾಗಿದೆ. ಈ ಕೇಸ್‌ನಲ್ಲಿ ಕೋರ್ಟ್‌ನ ಇನ್ನೊಂದು ಪೀಠವು ಜಾಮೀನು ಆದೇಶವನ್ನು ರದ್ದು ಮಾಡಿದ್ದನ್ನು ಗಮನಿಸಿದ ಕೋರ್ಟ್, ನ್ಯಾಯಾಲಯದ ನಿಂದನೆ ಕಾಯಿದೆ, 1971 ರ ಸೆಕ್ಷನ್ 2 (ಸಿ) ಅಡಿಯಲ್ಲಿ ಅವರ ಕ್ರಮಗಳು ಪ್ರಾಥಮಿಕವಾಗಿ ಕ್ರಿಮಿನಲ್ ಅವಹೇಳನಕ್ಕೆ ಸಮನಾಗಿರುತ್ತದೆ ಎಂದು ತಿಳಿಸಿದೆ.
ರಬ್ಬರ್ ಮ್ಯಾಟ್‌ಗೆ ಬಡಿದ ತಲೆ, ಕಬಡ್ಡಿ ಆಡುವಾಗಲೇ 16 ವರ್ಷದ ಹುಡುಗನ ಸಾವು!
ಒಂದು ವಾರದ ಒಳಗಾಗಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಬೇಕು. 22023ರ ಮಾರ್ಚ್ 20 ರಂದು ನ್ಯಾಯಾಲಯವು ಕ್ರಿಮಿನಲ್ ಪ್ರಕರಣದಲ್ಲಿ ಜಾರಿಗೊಳಿಸಿದ ಆದೇಶದ ಪ್ರತಿಯನ್ನು, ಜಾಮೀನು ರದ್ದುಗಳಿಸಿದ ಪ್ರತಿಯೊಂದಿಗೆ ನೋಟಿಸ್‌ನಲ್ಲಿ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.
