ನವದೆಹಲಿ[ಫೆ.03]: ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿಯ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ. 

ಶಹಜಾನ್ಪುರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಾಜಿ ಸಚಿವನ ವಿರುದ್ಧ ಅತ್ಯಾಚಾರವೆಸಗಿರುವ ಆರೋಪ ಮಾಡಿದ್ದಳು. ತನಿಖೆ ನಡೆಸಿದ್ದ ಪೊಲೀಸರು 2019ರ ಸಪ್ಟೆಂಬರ್ 20ರಂದು ಚಿನ್ಮಯಾನಂದರನ್ನು ಬಂಧಿಸಿತ್ತು. ಇದಾದ ಬಳಿಕ ನಡೆದ ಕಾನೂನು ಸಮರದಲ್ಲಿ ಬಿಜೆಪಿ ನಾಯಕ ಜಾಮೀನು ಪಡೆಯಲು ಯತ್ನಿಸಿದ್ದರಾದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೀಗ ಅರೆಸ್ಟ್ ಆದ 4 ತಿಂಗಳ ಬಳಿಕ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. 

ಬಿಜೆಪಿ ಮಾಜಿ ಸಚಿವನಿಂದ ರೇಪ್‌ ಎಂದು ಆರೋಪಿಸಿದವಳು ಸುಲಿಗೆ ಕೇಸಲ್ಲಿ ಜೈಲಿಗೆ!

ಏನಿದು ಪ್ರಕರಣ?

ಸ್ವಾಮಿ ಚಿನ್ಮಯಾನಂದಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಚಿನ್ಮಯಾನಂದ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿ, ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ದೆಹಲಿ ಪೊಲೀಸರಿಗೆ ಹಿಂದೆ ದೂರು ನೀಡಿದ್ದಳು. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ವಿರುದ್ಧ ಪ್ರತಿದೂರು ಸಲ್ಲಿಸಿದ್ದ ಬಿಜೆಪಿ ನಾಯಕನ ಬೆಂಬಲಿಗರು ವಿದ್ಯಾರ್ಥಿನಿ ಸುಲಿಗೆ ಮಾಡಲು ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ ಎಂದಿದ್ದರು. ಈ ಕುರಿತಂತೆ ವಿದ್ಯಾರ್ಥಿನಿಗೆ ಪರಿಚಿತರಿದ್ದ ಮೂವರನ್ನು ಪೊಲೀಸರು ಬಂಧಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.

ಬಿಜೆಪಿ ನಾಯಕನ ಬೆತ್ತಲೆ ಮಸಾಜ್ ವಿಡಿಯೋ ವೈರಲ್.. ಯುವತಿಯಿಂದ ರೇಪ್ ಆರೋಪ