Gyanvapi Case: ಹಿಂದುಗಳಿಗೆ ಭಾರಿ ಜಯ, ಮಸೀದಿ ಸಮಿತಿಯ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಕೋರ್ಟ್!
ವಾರಣಾಸಿಯ ಜ್ಞಾನವಾಪಿಯಲ್ಲಿರುವ ಶೃಂಗಾರ ಗೌರಿಯ ನಿತ್ಯ ಪೂಜೆಯ ಹಕ್ಕಿನ ವಿಚಾರದಲ್ಲಿ ಹಿಂದೂಗಳ ಪರವಾದ ನಿರ್ಧಾರ ಬಂದಿದೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಜೆಜೆ ಮುನೀರ್ ಅವರು ಈ ಆದೇಶ ನೀಡಿದ್ದಾರೆ.
ವಾರಣಾಸಿ (ಮೇ.31): ಜ್ಞಾನವಾಪಿ ಮಸೀದಿ ಕುರಿತಾಗಿ ಹಿಂದುಗಳ ಪರವಾಗಿ ತೀರ್ಪು ಬಂದಿದೆ. ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿಯ ನಿತ್ಯ ಪೂಜೆಯ ಹಕ್ಕಿನ ವಿಚಾರದಲ್ಲಿ ವಾರಣಾಸಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯ ವೇಳೆ ಹಿಂದು ಕಡೆಯಿಂದ ಶೃಂಗಾರ ಗೌರಿಯಲ್ಲಿ ನಿತ್ಯ ಪೂಜೆಯ ಹಕ್ಕಿನ ಕುರಿತಾಗಿ ಮಾತ್ರವೇ ಕೋರ್ಟ್ ವಿಚಾರಣೆ ನಡೆಸಿದೆ ಎಂದು ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು. ಆದರೆ, ಮಸೀದಿ ಸಮಿತಿಯ ಅರ್ಜಿ ವಿಚಾರಣೆಗೆ ಯೋಗ್ಯವೇ ಎನ್ನುವುದನ್ನು ಪರಿಶೀಲಿಸಿದ ಪೀಠದ ಮುಖ್ಯ ನ್ಯಾಯಮೂರ್ತಿಗಳಾದ ಜೆಜೆ ಮುನೀರ್, ಈ ಅರ್ಜಿಯನ್ನು ತಿರಸ್ಕರಿಸಿದ್ದು, ವಿಚಾರಣೆಗೆ ಯೋಗ್ಯವಿಲ್ಲ ಎಂದಿದ್ದಾರೆ. ಅದರೊಂದಿಗೆ ಪ್ರಕರಣದ ವಿಚಾರಣೆಯನ್ನು ಕೆಳ ನ್ಯಾಯಾಲಯಕ್ಕೆ ವಿಸ್ತರಿಸಲು ಹೈಕೋರ್ಟ್ ಅನುಮತಿ ನೀಡಿದೆ. ವಾರಣಾಸಿಯ ಜ್ಞಾನವಾಪಿ ಕ್ಯಾಂಪಸ್‌ನಲ್ಲಿರುವ ಶೃಂಗಾರ್ ಗೌರಿಯ ನಿತ್ಯ ಪೂಜೆಯ ಹಕ್ಕನ್ನು ಕೋರಿ ರಾಖಿ ಸಿಂಗ್ ಮತ್ತು ಇತರ ಒಂಬತ್ತು ಮಹಿಳೆಯರು ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದರು. ಈ ಕುರಿತು ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯು 1991ರ ಪೂಜಾ ಸ್ಥಳಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾವೆಯನ್ನು ಆಲಿಸುವ ಹಕ್ಕು ನ್ಯಾಯಾಲಯಕ್ಕೆ ಇಲ್ಲ ಎಂದು ದಾವೆಯ ನಿರ್ವಹಣೆಯನ್ನು ವಿರೋಧಿಸಿ ಅರ್ಜಿ ಸಲ್ಲಿಸಿತ್ತು.
ಆದರೆ, ಜಿಲ್ಲಾ ನ್ಯಾಯಾಲಯ ಸಮಿತಿಯ ಅರ್ಜಿಯನ್ನು ತಿರಸ್ಕರಿಸಿ ಡಿಸೆಂಬರ್‌ನಲ್ಲಿ ನಿರ್ಧಾರವನ್ನು ಕಾಯ್ದಿರಿಸಿತ್ತು. ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ ನಂತರ, ಸಮಿತಿಯು ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಅರ್ಜಿಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಹೈಕೋರ್ಟ್‌ನಲ್ಲೂ ಕೆಲವು ಪ್ರಕರಣಗಳು ಬಾಕಿ ಇವೆ. ಮಾ ಶೃಂಗಾರ್ ಗೌರಿ ಪ್ರಕರಣದ ಮೇಲೂ ಸುಪ್ರೀಂಕೋರ್ಟ್ ನಿಗಾ ಇಡುತ್ತಿದೆ.
ಮುಂದೇನು: ಶೃಂಗಾರ್ ಗೌರಿ ನಿತ್ಯ ಪೂಜೆಯ ಕುರಿತಾಗಿ ಹಿಂದುಗಳು ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಇದರ ವಿಚಾರಣೆ ಮಾತ್ರ ಕೆಳ ಹಂತದ ನ್ಯಾಯಾಲಯದಲ್ಲಿ ನಡೆಯಬೇಕು ಎಂದು ಹೇಳಿದೆ. ಅದರೊಂದಿಗೆ ಈಗ ವಿವಿಧ ಪಕ್ಷಗಳನ್ನು ವಿಚಾರಿಸಿ ವಾರಣಾಸಿ ಕೋರ್ಟ್ ಇದರ ವಿಚಾರಣೆ ನಡೆಸಲಿದ್ದು, ಹಿಂದುಗಳು ಸಲ್ಲಿಸಿರುವ ನಿತ್ಯಪೂಜೆಗೆ ಅವಕಾಶ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ನಿರ್ಧಾರವಾಗಲಿದೆ.
ಔರಂಗಜೇಬ್ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ
2022ರ ಸೆಪ್ಟೆಂಬರ್ 12 ರಂದು ತೀರ್ಪು ನೀಡಿದ್ದ ವಾರಣಾಸಿ ಕೋರ್ಟ್ ಹಿಂದುಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ಹೇಳಿತ್ತು. ಇದರ ಕುರಿತಾಗಿ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಜ್ಞಾನವಾಪಿ ಕುರಿತಾದ ಎಲ್ಲಾ ಕೇಸ್‌ಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ವಾರಣಾಸಿ ಕೋರ್ಟ್ ನಿರ್ಧಾರ!