Asianet Suvarna News Asianet Suvarna News

ಇನ್ಮುಂದೆ ಇಂತಹ ಹೆಲ್ಮೆಟ್‌ ನಿಷೇಧ : ಬೀಳುತ್ತೆ ಭಾರೀ ದಂಡ

ಇನ್ಮುಂದೆ ಇಂತಹ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ಭಾರಿ ದಂಡ. ಜೊತೆಗೆ ಈ ಹೆಲ್ಮೆಟ್ ಮಾರಾಟ ಮಾಡುವಂತೆಯೂ ಇಲ್ಲ... ವಾಹನ ಸವಾರರೇ ಎಚ್ಚರ

All two-wheeler helmets must have ISI mark from June 1 snr
Author
Bengaluru, First Published Nov 29, 2020, 8:29 AM IST

 ನವದೆಹಲಿ (ನ.29): ಮುಂಬರುವ ಜೂನ್‌ 1 ರಿಂದ ಐಎಸ್‌ಐ ಗುರುತಿರುವ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ಪ್ರಮಾಣಿತ ಹೆಲ್ಮೆಟ್‌ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಹೆಲ್ಮೆಟ್‌ಗಳ ಮೇಲೆ ಐಎಸ್‌ಐ ಗುರತು ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ರಸ್ತೆ ಅಪಘಾತಗಳ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರ ಸಾವಿಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಪ್ರಮುಖ ಕಾರಣವೆನಿಸಿದೆ. ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಬಲಿಯಾದ 56000 ಜನರ ಪೈಕಿ 43600 ಜನರ ಸಾವಿಗೆ ಅವರು ಹೆಲ್ಮೆಟ್‌ ಧರಿಸದೇ ಇರುವುದೇ ಕಾರಣವಾಗಿತ್ತು.

ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್‌ಗೆ ಎಷ್ಟು ಸ್ಟಾರ್‌ ಗೊತ್ತಾ?

ಮತ್ತೊಂದೆಡೆ ಭಾರತದಲ್ಲಿ ದಿನನಿತ್ಯ ಮಾರಾಟವಾಗುತ್ತಿರುವ 2 ಲಕ್ಷ ಹೆಲ್ಮೆಟ್‌ಗಳ ಪೈಕಿ ಶೇ.40ರಷ್ಟುಹೆಲ್ಮೆಟ್‌ಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಹೆಚ್ಚಿನ ಸಂದರ್ಭಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ಲಾಸ್ಟಿಕ್‌ ಕ್ಯಾಪ್‌ಗಳನ್ನು ಧರಿಸುತ್ತಿದ್ದಾರೆ. ಐಎಸ್‌ಐ ಪ್ರಮಾಣಿತ ಹೆಲ್ಮೆಟ್‌ಗಳ ಬಳಕೆಯಿಂದ ನೂರಾರು ಜನರು ಜನರ ಪ್ರಾಣ ಉಳಿಸಲು ಸಾಧ್ಯವಾಗಲಿದೆ ಎಂದು ದ್ವಿಚಕ್ರ ವಾಹನ ಹೆಲ್ಮೆಟ್‌ ತಯಾರಿಕಾ ಸಂಘಟನೆಯ ಅಧ್ಯಕ್ಷ ರಾಜೀವ್‌ ಕಪೂರ್‌ ತಿಳಿಸಿದ್ದಾರೆ.

Follow Us:
Download App:
  • android
  • ios