ಭೋಪಾಲ್(ಅ. 20)  ಎಲ್ಲಾ ಉವ್ರಗಾಮಿಗಳು ಮತ್ತು ಭಯೋತ್ಪಾದಕರು ಮದರಸಾಗಳಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಮಧ್ಯ ಪ್ರದೇಶದ  ಸಂಸ್ಕೃತಿ ಸಚಿವೆ ಮತ್ತು ಇಂದೋರ್‌ ಭಾರತೀಯ ಜನತಾ ಪಕ್ಷದ ಶಾಸಕಿ ಉಷಾ ಠಾಕೂರ್ ಮಂಗಳವಾರ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಠಾಕೂರ್, ಎಲ್ಲಾ ಮಕ್ಕಳಿಗೆ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನೀಡಬೇಕು, ಧರ್ಮ ಆಧಾರಿತ ಶಿಕ್ಷಣವು ಇಂಥ ವಿರೋಧಗಳನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಡಿಯಲ್ಲಿ ಉಗ್ರರರನ್ನು ಹೊಡೆದುರುಳಿಸಿದ ಸೇನೆ

ಉಗ್ರಗಾಮಿಗಳು ಮದರಸಾದಲ್ಲಿಯೇ ಅಧ್ಯಯನ ಮಾಡಿ ಹೊರಬಂದವರಾಗಿರುತ್ತಾರೆ.  ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರ ಫ್ಯಾಕ್ಟರಿಯಾಗಿದೆ ಎಂದು ಹಿಂದೊಮ್ಮೆ ಮುಸ್ಲಿಂ ಯುವಕರ ಪ್ರವೇಶವ ನಿಷೇಧಿಸಬೇಕೆಂದು ಹೇಳಿದ್ದ ಠಾಕೂರ್ ಅಭಿಪ್ರಾಯ ಮುಂದಿಟ್ಟಿದ್ದಾರೆ.

ಮದರಸಾಗಳು ಮಕ್ಕಳಲ್ಲಿ ರಾಷ್ಟ್ರೀಯತೆ ಮೂಡಿಸುತ್ತಿಲ್ಲ. ಇಂಥ ಸಂಸ್ಥೆಗಳನ್ನು ಬಂದ್ ಮಾಡಿ ಸರ್ಕಾರ ಎಲ್ಲರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಒತ್ತಾಯ ಮಾಡಿದ್ದಾರೆ.

ಸ್ವತಃ ವಕ್ಫ್ ಮಂಡಳಿಯು ಸಮರ್ಥ ಸಂಸ್ಥೆಯಾಗಿದ್ದು ತೀರ್ಮಾನ ತೆಗೆದುಕೊಳ್ಳಬಹುದು ಎಂದಿದ್ದಾರೆ. ಇದಕ್ಕೆ ಕೌಂಟರ್ ನೀಡಿರುವ  ಕಾಂಗ್ರೆಸ್ ಮಾಧ್ಯಮ ಸಂಯೋಜಕ ನರೇಂದ್ರ ಸಲೂಜಾ. ಬಿಜೆಪಿ ಪ್ರತಿ ವಿಚಾರದಲ್ಲಿಯೂ ಕೋಮು ಬಣ್ಣ ಎಳೆದು ತರುತ್ತಿದ್ದು ಶಾಂತಿ ಕದಡುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.