ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಸಿಕ್ಕೆ ಸಿಗುತ್ತದೆ; ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ
* ಲಸಿಕೆ ಹಂಚಿಕೆ ಹೇಗೆ ಆಗುತ್ತಿದೆ? ಎಂದು ಕೇಂದ್ರ ಸರ್ಕಾರವನ್ನು ಕೇಳಿದ್ದ ಸುಪ್ರೀಂ ಕೋರ್ಟ್
* ಸುಪ್ರೀಂ ಕೋರ್ಟ್ ಗೆ ಎಲ್ಲ ವಿವರಣೆ ನೀಡಿದ ಕೇಂದ್ರ ಸರ್ಕಾರ
* ದೇಶದ ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆ ನೀಡುವುದು ಜವಾಬ್ದಾರಿ
* ರಾಜ್ಯಗಳ ಅಗತ್ಯವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ
ನವದೆಹಲಿ(ಮೇ 10) ದೇಶದ ಎಲ್ಲ ನಾಗರಿಕರಿಗೆ ಲಸಿಕೆ ನೀಡಬೇಕು ಎನ್ನುವುದು ಜನರ ತೀರ್ಮಾನ.. ಜತೆಗೆ ಸರ್ಕಾರದ ತೀರ್ಮಾನ ಆಕ್ಸಿಜನ್ ಲಭ್ಯತೆ ಹೇಗಿದೆ? ಲಸಿಕೆ ಸರಿಯಾದ ಹಂಚಿಕೆ ಆಗುತ್ತಿದೆಯಾ? ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿತ್ತು. ಇದೆಕ್ಕೆ ಕೇಂದ್ರ ಅಫಿಡವಿಟ್ ಮೂಲಕ ಉತ್ತರ ನೀಡಿದೆ. ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂಬ ಸ್ಪಷ್ಟನೆಯನ್ನು ನೀಡಿತು.
ಅತಿಯಾದ ನ್ಯಾಯಾಂಗ ಹಸ್ತಕ್ಷೇಪವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಈಗಿನ ಕೊರೋನಾ ಪರಿಸ್ಥಿತಿಯಲ್ಲಿ ಒಂದೇ ಹಂತದಲ್ಲಿ ದೇಶಾದ್ಯಂತ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಕೊರೋನಾ ಲಸಿಕೆ ಡೋಸ್ ಗಳ ಪೂರೈಕೆಯಲ್ಲಿ ವ್ಯತ್ಯಯವಿದೆ. ಲಭ್ಯ ಮಾಡಿಕೊಳ್ಳುವಂತಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಯಾರಿಗೆ ಆಕ್ಸಿಜನ್ ಬೆಡ್ ಬೇಕಾಗುತ್ತದೆ? ಧೈರ್ಯ ಕಳೆದುಕೊಳ್ಳದಿರಿ
ಕೊರೋನಾ ಲಸಿಕೆ ದರದಲ್ಲಿ ಏಕರೂಪತೆ ಇರಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಲಸಿಕೆ ಉತ್ಪತ್ತಿ ಮಾಡುತ್ತಿರುವ ಭಾರತ್ ಬಯೋಟೆಕ್ ಮತ್ತು ಸೆರುಮ್ ಇಸ್ಟಿಟ್ಯೂಟ್ ಸಂಸ್ಥೆಯ ದರವನ್ನು ಹೇಳಿವೆ. ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಬೇಕಿದ್ದು ರಾಜ್ಯಗಳ ಅಗತ್ಯವನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ.
50% - 50% ಸೂತ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಸದ್ಯ ಕೇಂದ್ರ ಸರ್ಕಾರವೇ ಮುಂದೆ ನಿಂತು ನೋಡಿಕೊಳ್ಳುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆ ನೀಡುವ ಜವಾಬ್ದಾರಿ ನಮ್ಮದು ಎಂದು ಸ್ಪಷ್ಟಪಡಿಸಿದೆ.
"