Asianet Suvarna News Asianet Suvarna News

ಸೈನ್ಸ್ ಕಲಿಯಲು ಬೇರೆ ಕಾಲೇಜಿಗೆ ಹೋದ ಗೆಳೆಯರು.. ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡ 11ನೇ ಕ್ಲಾಸ್ ವಿದ್ಯಾರ್ಥಿ

ತನ್ನ ಅತ್ಯಾಪ್ತ ಸ್ನೇಹಿತರು ದೂರವಾಗಿದ್ದಕ್ಕೆ ಕುನಾಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಎಂದು ತಿಳಿದು ಬಂದಿದೆ. ಕುನಾಲ್‌ಗೆ ಕಲಾ ವಿಭಾಗದಲ್ಲಿಯೇ ಓದುವಂತೆ ತಂದೆ ಸಲಹೆ ನೀಡಿದ್ದರು.

11 class student hanging himself feelings of loneliness and frustration mrq
Author
First Published Jul 28, 2024, 3:01 PM IST | Last Updated Jul 28, 2024, 3:00 PM IST

ದೆಹಲಿ: ದೆಹಲಿಯ ಖಾಸಗಿ ವಸತಿ ಶಾಲೆಯಲ್ಲಿ 16 ವರ್ಷದ 11ನೇ ಕ್ಲಾಸ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಸಹಪಾಠಿಗಳು ತನ್ನಿಂದ ದೂರು ಆಗಿದ್ದಕ್ಕೆ ನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮೃತ ವಿದ್ಯಾರ್ಥಿಯನ್ನು ಕುನಾಲ್ ರೈ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ವಸತಿ ಶಾಲೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುನಾಲ್ ರೈ ದೆಹಲಿಯ ನಾಗ್ಲೊಯಿ ನಿವಾಸಿ ಎಂದು ವರದಿಯಾಗಿದೆ.

ಕುನಾಲ್ ರೈ ಸ್ನೇಹಿತರು ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಮುಂದುವರಿಸುವ ಉದ್ದೇಶದಿಂದ ಬೇರೆ ಶಾಲೆಗೆ ದಾಖಲಾತಿ ಪಡೆದುಕೊಂಡಿದ್ದರು. ತನ್ನ ಅತ್ಯಾಪ್ತ ಸ್ನೇಹಿತರು ದೂರವಾಗಿದ್ದಕ್ಕೆ ಕುನಾಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಎಂದು ತಿಳಿದು ಬಂದಿದೆ. ಕುನಾಲ್‌ಗೆ ಕಲಾ ವಿಭಾಗದಲ್ಲಿಯೇ ಓದುವಂತೆ ತಂದೆ ಸಲಹೆ ನೀಡಿದ್ದರು. ತಂದೆಯ ಸಲಹೆಯಂತೆ ಅದೇ ಶಾಲೆಯಲ್ಲಿ ಕುನಾಲ್ ಶಿಕ್ಷಣ ಮುಂದುವರಿಸಿದ್ದನು. ಆದ್ರೆ ಗೆಳೆಯರು ದೂರವಾಗಿದ್ದರಿಂದ ಕುನಾಲ್‌ಗೆ ಒಂಟಿತನ ಕಾಡಿತ್ತು ಎಂದು ಪೊಲೀಸರು ಹೇಳುತ್ತಾರೆ.

ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಇದ್ದಕ್ಕಿದ್ದಂತೆ ನೀರು ತುಂಬಿಕೊಂಡಿದ್ದೇಗೆ? ಮೂವರ ಸಾವಿಗೆ ಕಾರಣವಾಯ್ತಾ AAP?

ಒಂಟಿತನದಿಂದನ ಖಿನ್ನತೆಗೊಳಗಾದ ಕುನಾಲ್ ರೈ, ಜುಲೈ 25ರ ಶುಕ್ರವಾರ ಬೆಳಗ್ಗೆ ಸುಮಾರು 6 ಗಂಟೆಗೆ ಬೆಡ್‌ಶೀಟ್ ಕತ್ತರಿಸಿ ಅದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ನೀಡಲಾಗಿದೆ. ಘಟನೆ ಸಂಬಂಧ ಪೊಲೀಸರು ಬಿಎನ್‌ಎಸ್‌ಎಸ್   ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಸತಿ ಶಾಲೆಯ ಆಡಳಿತ ಮಂಡಳಿ ಬಾಲಕನ ಸಾವಿಗೆ ಸಂತಾಪ ಸೂಚಿಸಿದ್ದು, ಘಟನೆ ಕುರಿತು ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಸಿಕ್ ಲೀವ್‌ಗೆ 7 ದಿನ ಮೊದಲೇ ತಿಳಿಸಬೇಕು, ಬಾಸ್ ಮೆಸೇಜ್‌ಗೆ ನೆಟ್ಟಿಗರ ಕ್ಲಾಸ್!

Latest Videos
Follow Us:
Download App:
  • android
  • ios