ನವದೆಹಲಿ(ಜು.25): ಭಾರತದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಕುರಿತು ಗೌಪ್ಯ ಮಾಹಿತಿ ಕಲೆ ಹಾಕಿದ ಸಂಯುಕ್ತ ರಾಷ್ಟ್ರ ಒಕ್ಕೂಟ ಇದೀಗ ಮಹತ್ವದ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕರಾ ಕರ್ನಾಟಕ ಹಾಗೂ ಕೇರಳದಲ್ಲಿ ಐಸಿಸಿ ಉಗ್ರರ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ನೀಡಿದೆ. ಈ ಗುಂಪು ಬಳಸಿಕೊಂಡು ಆಲ್ ಖೈದಾ ದಾಳಿ ನಡೆಸಲು ಸಂಚು ರೂಪಿಸಿರುವ ಕುರಿತು UN ವರದಿ ಹೇಳಿದೆ.

"

ಕರ್ನಾಟಕ ಸ್ಫೋಟಕ್ಕೆ ಬೆಂಗಳೂರಿನಿಂದಲೇ ಸಂಚು!.

ಭಾರತ, ಬಾಂಗ್ಲಾದೇಶ, ಮಯನ್ಮಾರ್ ರಾಷ್ಟ್ರಗಳಿಂದ 150 ರಿಂದ 200 ಉಗ್ರರನ್ನು ಹೊಂದಿರುವ ಅಲ್ ಖೈದಾ ಇದೀಗ ಐಸಿಸಿ ಉಗ್ರರ ಸಹಾಯದಿಂದ ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿದೆ. ತಾಲಿಬಾನ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿರುವ ಅಲ್ ಖೈದಾ ಉಗ್ರರ ಸಂಘಟನೆಗೆ ಒಸಾಮಾ ಮೆಮೂದ್ ಮುಖ್ಯಸ್ಥನಾಗಿದ್ದಾನೆ. 

ಐಸಿಸ್ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾಗಿ ಭಾರತಲ್ಲಿ ISISL(ಇಂಡಿಯನ್ ಅಫಿಲಿಯೇಟ್) ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. 2019ರಲ್ಲಿ ಈ ಸಂಘಟನೆ ಭಾರತದಲಲ್ಲಿ 180 ರಿಂದ 200 ಉಗ್ರರೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದೆ. ಇದೀಗ ಈ ಸಂಘಟನೆಯನ್ನು ಬಳಸಿಕೊಂಡು ಅಲ್ ಖೈದಾ ದಾಳಿಗೆ ಸಂಚು ರೂಪಿಸಿರುವುದು UN ವರದಿಯಲ್ಲಿ ಬಹಿರಂಗವಾಗಿದೆ.

2019ರಲ್ಲಿ ಭಾರತದಲ್ಲಿ ಐಸಿಸ್ ಸಂಘಟನೆ ಶಾಖೆ ತೆರೆದಿರುವುದಾಗಿ ಹೇಳಿಕೊಂಡಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸಕ್ರಿಯಾಗಿದ್ದ ಐಸಿಸ್, ಸೇನೆ ಜೊತೆಗಿನ ಕಾಳಗದಲ್ಲಿ ಉಗ್ರ ಸಂಘಟೆ ಕಮಾಂಡರ್ ಹತನಾಗಿದ್ದ. ಈ ವೇಳೆ ಭಾರತದಲ್ಲಿ ಉಗ್ರ ಚಟುವಟಿಕೆ ಮತ್ತಷ್ಟು ಬಲಪಡಿಸುವುದಾಗಿ ಹೇಳಿಕೊಂಡಿತ್ತು.