ಕರ್ನಾಟಕ ಸ್ಫೋಟಕ್ಕೆ ಬೆಂಗಳೂರಿನಿಂದಲೇ ಸಂಚು!
ರಾಜ್ಯದ ಮೇಲೆ ಐಸಿಸ್ ಗಳ ಕಣ್ಣು, ಸದ್ದಿಲ್ಲದೆ ನಡೆದಿತ್ತು ಸ್ಫೋಟಕ್ಕೆ ಸಂಚು/ ರಾಜ್ಯವನ್ನೆ ಟಾರ್ಗೆಟ್ ಮಾಡ್ಕೊಂಡಿದ್ದ ಶಂಕಿತ ಉಗ್ರರು/ ರಾಜ್ಯದಲ್ಲಿ ಸ್ಫೋಟ ನಡೆಸಲು ನಡೆದಿತ್ತು ತಯಾರಿ/ ಕಚ್ಚಾವಸ್ತುಗಳ ಮೂಲಕ ಸ್ಪೋಟಕ ತಯಾರಿಸಲು ಮುಂದಾಗಿದ್ದ ಶಂಕಿತರು/
ಬೆಂಗಳೂರು(ಜು. 14) ಕರ್ನಾಟಕ ರಾಜ್ಯದ ಮೇಲೆ ಐಸಿಸ್ ಗಳ ಕಣ್ಣು ಬಿದ್ದಿದ್ದು ಸದ್ದಿಲ್ಲದೆ ಸ್ಫೋಟಕ್ಕೆ ಸಂಚು ನಡೆದಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ರಾಜ್ಯವನ್ನೆ ಟಾರ್ಗೆಟ್ ಮಾಡ್ಕೊಂಡಿದ್ದ ಶಂಕಿತ ಉಗ್ರರು ಸ್ಫೋಟ ನಡೆಸಲು ತಯಾರಿ ಮಾಡಿಕೊಂಡಿದ್ದರು. ಕಚ್ಚಾವಸ್ತುಗಳ ಮೂಲಕ ಸ್ಫೋಟಕ ತಯಾರಿಸಲು ಮುಂದಾಗಿದ್ದರು.
ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಹಲವು ಆಘಾತಕಾರಿ ಅಂಶವನ್ನು ಬಿಚ್ಚಿಟ್ಟಿದೆ. ಗುರಪ್ಪನಪಾಳ್ಯದಲ್ಲಿ ಮೆಹಬೂಬ್ ಪಾಷ ಮತ್ತು ತಂಡವನ್ನು ಎನ್ಐಎ ಬಂಧಿಸಿತ್ತು.
ಆರ್‌ಎಸ್‌ಎಸ್ ಮೋಹನ್ ಭಾಗವತ್ ಹತ್ಯೆಗೆ ಸಂಚು!
ಪ್ರಕರಣದ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 17 ಜನ ಶಂಕಿತ ಉಗ್ರರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
2020 ಜನವರಿಯಲ್ಲಿ ಗುರಪ್ಪನಪಾಳ್ಯದಲ್ಲಿ ಮೆಹಬೂಬ್ ಪಾಷ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಮನೆಯಲ್ಲಿ ಕೆಲವು ಕಚ್ಚಾವಸ್ತುಗಳನ್ನು ಪತ್ತೆ ಮಾಡಿತ್ತು. ಕಚ್ಚಾವಸ್ತುಗಳ ಮೂಲಕ LED ತಯಾರಿಸುತ್ತಿದ್ದ ಶಂಕಿತರ ಬಂಧನವಾಗಿತ್ತು. ಮೆಹಬೂಬ್ ಪಾಷಗೆ ಸಂಪರ್ಕದಲ್ಲಿದ್ದ 16 ಜನರನ್ನು ವಶಕ್ಕೆ ಪಡೆಯಲಾಗಿತ್ತು.
ತಮಿಳುನಾಡಿನ ಖ್ವಾಜಾ ಮೊಹೀನುದ್ದೀನ್, ಸಾದಿಕ್ ಬಾಷಾ ಖ್ವಾಜಾ ಮೊಹೀನುದ್ದೀನ್ ಸೂಚನೆಯಂತೆ ಸ್ಫೋಟಕ ತಯಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿತ್ತು.
ಬೆಂಗಳೂರು ಸ್ಫೋಟಕ್ಕೆ ಸಂಚು ರೂಪಿಸಿದ್ದವರಿಗೆ ಸೂಚನೆ ಬರ್ತಾ ಇದ್ದಿದ್ದು ಎಲ್ಲಿಂದ
ಇಲ್ಲಿ ತಯಾರು ಮಾಡಿ ನಂತ್ರ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸ್ಫೋಟ ನಡೆಸಲು ಸಂಚು ಸಿದ್ಧವಾಗಿತ್ತು. ಬಂಧಿತ ಶಂಕಿತ ಉಗ್ರರಿಗೆ ತರಬೇತಿ ಸಹ ನೀಡಲಾಗಿತ್ತು. ಶಿವನಸಮುದ್ರ ಹಾಗೂ ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡಲಾಗಿತ್ತು.
ಕೆಲವು ವಿದೇಶಿ ಐಸಿಸ್ ಗಳ ಸಂಪರ್ಕವನ್ನು ಇವರು ಹೊಂದಿದ್ದರು. ಡಾರ್ಕ್ ವೆಬ್ ಮೂಲಕ ಸಂಪರ್ಕ ಸಾಧಿಸಿದ್ದ ಶಂಕಿತರು ರಾಜ್ಯ ಹಾಗೂ ದೇಶದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸಲು ತಯಾರಿ ನಡೆಸಿದ್ದರು.
ಬಂಧಿತ ಶಂಕಿತರ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಎನ್ಐಎ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದದೆ. ಐಪಿಸಿ 120b, 17,18,18b,19,20,38,39, UAPA ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಬೆಂಗಳೂರಿನ ಮೆಹಬೂಬ್ ಪಾಷ, ಮಂಡ್ಯದ ಇಮ್ರಾನ್ ಖಾನ್,ಮಹಮ್ಮದ್ ಹನೀಪ್, ಮಹಮ್ಮದ್ ಮನ್ಸೂರ್ ಅಲಿಖಾನ್, ಕೋಲಾರದ ಸಲೀಂ ಖಾನ್, ಹುಸೇನ್ ಷರೀಫ್ ಸೇರಿ 17 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.