ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರ ದಿಲ್ಲಿ ಮೂಲದ ಪ್ರತಿಷ್ಠಾನಕ್ಕೆ ನಟ ಅಕ್ಷಯ್‌ ಕುಮಾರ್‌ 1 ಕೋಟಿ ರು. ದೇಣಿಗೆ ನೀಡಿದ್ದಾರೆ.  ಕೋವಿಡ್ ಸ್ಥಿತಿ ನಿರ್ವಹಣೆಗೆ ದೇಣಿಗೆ ನೀಡಿದ್ದಾರೆ. 

ನವದೆಹಲಿ (ಏ.26): ಕೊರೋನಾ ಸೃಷ್ಟಿಸಿದ ಬಿಕ್ಕಟ್ಟಿನ ಅವಧಿಯಲ್ಲಿ ಸೋಂಕಿತರಿಗೆ ನೆರವಿನ ಹಸ್ತ ಚಾಚಿದ ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರ ದಿಲ್ಲಿ ಮೂಲದ ಪ್ರತಿಷ್ಠಾನಕ್ಕೆ ನಟ ಅಕ್ಷಯ್‌ ಕುಮಾರ್‌ 1 ಕೋಟಿ ರು. ದೇಣಿಗೆ ನೀಡಿದ್ದಾರೆ. 

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

ಈ ಸಂಬಂಧ ಟ್ವೀಟ್‌ ಮಾಡಿದ ಗಂಭೀರ್‌, ‘ಕೊರೋನಾ ಸೋಂಕಿತರಿಗೆ ಆಹಾರ, ಆಮ್ಲಜನಕ, ಔಷದೋಪಚಾರ ಮತ್ತಿತರ ಅಗತ್ಯ ಸೌಲಭ್ಯ ನೀಡಲೆಂದು ಪ್ರತಿಷ್ಠಾನಕ್ಕೆ ಅಕ್ಷಯ್‌ ಕುಮಾರ್‌ 1 ಕೋಟಿ ರು. ದೇಣಿಗೆ ನೀಡಿದ್ದಾರೆ. ಧನ್ಯವಾದ ಅಕ್ಷಯ್‌ ಕುಮಾರ್‌’ ಎಂದಿದ್ದಾರೆ. 

ಕೊರೋನಾದಿಂದ ಗುಣಮುಖರಾಗಿ ಮನೆಗೆ ಮರಳಿದ ಅಕ್ಷಯ್ ..

ಕೊರೋನಾ ಬಿಕ್ಕಟ್ಟಿನ ವೇಳೆ ಪ್ರತಿಷ್ಠಾನವು ನಿರಾಶ್ರಿತರು ಮತ್ತು ಅಸಹಾಯರಿಗೆ ದಿನಸಿ, ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಸರ್‌, ಆಮ್ಲಜನಕ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.