ಮುಂಬೈ (ಏ. 12) ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾಗಿ ಮನೆಗೆ ಬಂದಿರುವುದು  ಸಂತಸ ತಂದಿದೆ ಎಂದು ಪತ್ನಿ ಟ್ವಿಂಕಲ್ ಖನ್ನಾ ತಿಳಿಸಿದ್ದಾರೆ. 

ನಟ ಅಕ್ಷಯ್ ಕುಮಾರ್ ಅವರಿಗೆ COVID-19 ಪಾಸಿಟಿವ್ ದೃಢಪಟ್ಟಿತ್ತು. ಅಕ್ಷಯ್ ಕುಮಾರ್ ಅವರು ಕೊರೋನಾ ಪರೀಕ್ಷೆ ಮಾಡಿದ್ದು, ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದರು.

ರಾಮಸೇತು ಚಿತ್ರದ ಅನೇಕ ಕಲಾವಿದರಿಗೆ ಕೊರೋನಾ

ಕೊರೋನಾ ಜಾಗೃತಿಯಲ್ಲಿಯೂ ಅಕ್ಷಯ್ ಕುಮಾರ್  ಪಾಲ್ಗೊಂಡಿದ್ದರು.  ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಕ್ಷಯ್ ಕುಮಾರ್ ಶೂಟಿಂಗ್ ನಲ್ಲಿಯೂ ಪಾಲ್ಗೊಂಡಿದ್ದರು. 

ಅಕ್ಷಯ್ ಕುಮಾರ್ ಅವರು ರಾಮ್ ಸೇತು ಶೂಟಿಂಗ್ ವೇಳಾಪಟ್ಟಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಇದರಲ್ಲಿ ಅವರು ಪುರಾತತ್ವಶಾಸ್ತ್ರಜ್ಞನ ಪಾತ್ರ ಮಾಡಲಿದ್ದಾರೆ. ಕಳೆದ ತಿಂಗಳು ಅಕ್ಷಯ್ ಸಹನಟಿರಾದ ನುಸ್ರತ್ ಬರುಚ್ಚಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರೊಂದಿಗೆ ಅಯೋಧ್ಯೆಗೆ ಪ್ರಯಾಣಿಸಿ ಮುಹೂರ್ತ ಪೂಜೆಯಲ್ಲಿ ಪಾಲ್ಗೊಂಡಿದ್ದರು.