Asianet Suvarna News Asianet Suvarna News

UP Assembly Election: 'ಸಮಾಜವಾದಿ ಅತ್ತರ್' ಬಿಡುಗಡೆ ಮಾಡಿದ ಅಖಿಲೇಶ್!

*ಮತದಾರರನ್ನು ಸೆಳೆಯಲು ಸಮಾಜವಾದಿ ಪಾರ್ಟಿ ಉಪಾಯ!
*ಸಮಾಜವಾದಿ ಅತ್ತರ್'  ಬಿಡುಗಡೆ ಮಾಡಿದ ಅಖಿಲೇಶ್
*ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಮಾಜಿ ಸಿಎಂ

Akhilesh Yadav launches Samajwadi Party perfume ahead of UP Assembly polls mnj
Author
Bengaluru, First Published Nov 9, 2021, 10:36 PM IST
  • Facebook
  • Twitter
  • Whatsapp

ಉತ್ತರಪ್ರದೇಶ(ನ. 9 ):  ಮುಂಬರುವ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಗೆ (Assembly Elections) ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಮತದಾರರನ್ನು ಸೆಳೆಯಲು ಆಸಕ್ತಿದಾಯಕ ಉಪಾಯವನ್ನು ಮಾಡಿದ್ದಾರೆ. ಮತದಾರರನ್ನು ಸೆಳೆಯಲು ಅಖಿಲೇಶ್ ಯಾದವ್ ಅವರು 'ಸಮಾಜವಾದಿ ಅತ್ತರ್ (Samajwadi Attar)' ಎಂದು ಬ್ರಾಂಡ್ ಮಾಡಿದ ಸುಗಂಧ ದ್ರವ್ಯವನ್ನು (Perfume) ಬಿಡುಗಡೆ ಮಾಡಿದ್ದಾರೆ. ಟ್ವಿಟರ್ (Twitter) ಬಳಕೆದಾರರು ತಮ್ಮ ಬಗೆ ಬಗೆಯ ಅಭಿಪ್ರಾಯಗಳೊಂದಿಗೆ ಹೊಸ ಸುಗಂಧ ದ್ರವ್ಯದ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ.

ಕೆಂಪು ಮತ್ತು ಹಸಿರು ಗಾಜಿನ ಬಾಟಲಿಗಳಲ್ಲಿ ತುಂಬಲಾಗಿರುವ ಸುಗಂಧ ದ್ರವ್ಯವನ್ನು 22 ನೈಸರ್ಗಿಕ (Natural)  ಪರಿಮಳಗಳಿಂದ ತಯಾರಿಸಲಾಗುತ್ತದೆ. ಸುಗಂಧ ದ್ರವ್ಯದ ಪೆಟ್ಟಿಗೆಯಲ್ಲಿ ಅಖಿಲೇಶ್ ಯಾದವ್ ಅವರ ಚಿತ್ರವಿದೆ, ಅದರ ಮೇಲೆ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ (Symbol) ಸೈಕಲ್ ಇದೆ. ಕನೌಜ್‌ನ ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ಎಂಎಲ್‌ಸಿ  ಪುಷ್ಪರಾಜ್ ಜೈನ್ (MLC Pushparaj Jain)ಅವರು 'ಸಮಾಜವಾದಿ ಅತ್ತರ್' ಅನ್ನು ಉದ್ಘಾಟಿಸಿದ್ದಾರೆ.

 

 

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಮಾಜಿ ಸಿಎಂ

ಅಖಿಲೇಶ್ ಯಾದವ್ ಅವರ ನಡೆಯ ಬಗ್ಗೆ ನೆಟ್ಟಿಗರು ಬಗೆ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.  2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ (Samajwadi Party) ನಾಯಕ ಅಖಿಲೇಶ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ. ಅಖಿಲೇಶ್‌ ಪ್ರಸ್ತುತ ಅಜಮಗಢ (Azamgarh) ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು ಈ ಹಿನ್ನೆಲೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಆದರೂ ಈ ಹಿಂದಿನಂತೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಅವರು ಮುಖ್ಯಮಂತ್ರಿ (Cheif Minister) ಆಗಿ ವಿಧಾನ ಪರಿಷತ್‌ ಸದಸ್ಯರಾಗಬಹುದು ಎನ್ನಲಾಗಿದೆ.

ಮುಸ್ಲಿಂ ಮತಕ್ಕಾಗಿ ಸುನ್ನತ್‌ ಬೇಕಾದರೂ ಮಾಡಿಸಿಕೊಳ್ತಾರೆ

ಇನ್ನು ರಾಷ್ಟ್ರೀಯ ಲೋಕ ದಳ (RLD) ಜತೆಗೆ ಚುನಾವಣಾಪೂರ್ವ ಮೈತ್ರಿ ಮಾತುಕತೆಯಾಗಿದ್ದು, ಸೀಟು ಹಂಚಿಕೆ ಕೂಡ ನಿರ್ಧಾರವಾಗಿದೆ. ಅಲ್ಲದೇ ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ (Shivapal Yadav) ಸ್ಥಾಪಿಸಿರುವ ಪ್ರಗತಿಶೀಲ ಸಮಾಜವಾದಿ ಲೋಹಿಯಾ ಪಕ್ಷ(PSPL) ದಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಮತಕ್ಕಾಗಿ ಸುನ್ನತ್‌ ಬೇಕಾದರೂ ಮಾಡಿಸಿಕೊಳ್ತಾರೆ: ಬಿಜೆಪಿ ಸಚಿವನ ವಿವಾದಿತ ಹೇಳಿಕೆ!

ಎಸ್‌ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ (Former CM Akhilesh Yadav), ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಯಾದವ್‌ ಮುಸ್ಲಿಮರ ಮತಕ್ಕಾಗಿ ಮತಾಂತರವಾಗಿ, ಸುನ್ನತ್‌ ಬೇಕಾದ್ರೂ ಮಾಡಿಸಿಕೊಳ್ತಾರೆ’ ಎಂದು ಬಿಜೆಪಿ ಸಚಿವ ಸ್ವರೂಪ್‌ ಶುಕ್ಲಾ (Anand Swarup Shukla) ವಿವಾದಿತ ಹೇಳಿಕೆ ನೀಡಿದ್ದಾರೆ.ಸಭೆಯಲ್ಲಿ ಮಾತನಾಡಿದ ಶುಕ್ಲಾ, ‘ದೇೕಶ ವಿಭಜನೆಗೆ ಕಾರಣವಾದ ಮಹ್ಮದ್‌ ಅಲಿ ಜಿನ್ನಾರನ್ನು (Muhammad Ali Jinnah) ಭಾರತದ ಸ್ವಾತಂತ್ರ್ಯ ಹೋರಾಟಗಾರನೆಂದು ಕರೆದು, ಹೀರೋ ಎಂದು ಅಖಿಲೇಶ್‌ ಬಣ್ಣಿಸಿದ್ದರು. ಅಖಿಲೇಶ್‌ ಯಾದವ್‌ ಮುಸ್ಲಿಂ ಮತಕ್ಕಾಗಿ ಮತಾಂತರವಾಗಿ, ಸುನ್ನತ್‌ (Sunnat) ಬೇಕಾದ್ರೂ ಮಾಡಿಸಿಕೊಳ್ತಾರೆ. ಮಾಜಿ ಸಿಎಂಗೆ ಪಾಕ್‌ನ ಗುಪ್ತಚರ ಇಲಾಖೆ ಐಎಸ್‌ಐನಿಂದ ದುಡ್ಡು ಬರುತ್ತಿದೆ ಎಂದೂ ಆರೋಪಿಸಿದರು.

ಪಿಎಂ ಆದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು? ಕೈ ನಾಯಕ ರಾಹುಲ್ ಕೊಟ್ಟ ಉತ್ತರವಿದು!

ಇದರಿಂದ ಆಕ್ರೋಶಗೊಂಡಿರುವ ಎಸ್‌ಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸ್ವರೂಪ್‌ ಶುಕ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಅಲ್ಲದೇ ಸಮಾಜದಲ್ಲಿ ಕೋಮುದ್ವೇಷ ಹರಡಲು ಯತ್ನಿಸಿದ ಆರೋಪದ ಮೇಲೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios