ಪಶ್ಚಿಮ ಬಂಗಾಳದಲ್ಲಿ ಬಹುಮತದ ರೇಖೆ ದಾಟಿದ ಟಿಎಂಸಿ| ಟಿಎಂಸಿಗೆ ಶುಭ ಕೋರಿದ ಅಖಿಲೇಶ್ ಯಾದವ್| ಟ್ವೀಟ್‌ನಲ್ಲಿ ಬಿಜೆಪಿಗೂ ಗುದ್ದು
ಕೋಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಬಹುತೇಕ ಹೊರ ಬಿದ್ದಿದ್ದು, ಟಿಎಂಸಿ ಭಾರೀ ಮುನ್ನಡೆಯೊಂದಿಗೆ ಗೆಲುವಿನತ್ತ ದಾಪುಗಾಲಿಡುತ್ತಿದದೆ. ಈ ಫಲಿತಾಂಶದ ಬೆನ್ನಲ್ಲೇ ಮಮತಾ ಬ್ಯಾನರ್ಜಿಗೆ ಶುಭಾಶಯದ ಮಹಾಪೂರವ ಹರಿದು ಬರಲಾರಂಭಿಸಿದೆ. ಹೀಗಿರುವಾಗಲೇ ಉತ್ತರ ಪ್ರದೇಶದ ಮಾಝಿ ಸಿಎಮ ಹಾಗೂ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್, ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಕಾರ್ಯಕರ್ತರಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ 'ದೀದೀ, ಓ ದೀದೀ' ಎಂದು ಮೂದಲಿಸಿದ್ದವರಿಗೆ ಜನರೇ ಕೊಟ್ಟ ಉತ್ತರ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಖಿಲೆಶ್ ಯಾದವ್ ತಮ್ಮ ಟ್ವೀಟ್‌ನಲ್ಲಿ ಮಮತಾ ಬ್ಯಾನರ್ಜಿಗೆ ಶುಭ ಕೋರುತ್ತಾ 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದ್ವೇಷದ ರಾಜಕೀಯವನ್ನು ಸೋಲಿಸಿದ ಪ್ರಜ್ಞಾಪೂರ್ವಕ ಸಾರ್ವಜನಿಕರಿಗೆ, ಹೋರಾಟಗಾರರಾದ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯ ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮಹಿಳೆಯೊಬ್ಬರ ಮೇಲೆ 'ದೀದಿ ಒ ದೀದಿ' ವ್ಯಂಗ್ಯವಾಡಿದ್ದಕ್ಕೆ ಬಿಜೆಪಿಗೆ ಸಾರ್ವಜನಿಕರು ನೀಡಿದ ಸೂಕ್ತ ಉತ್ತರ ಇದು. ನೀವು ದೀರ್ಘ ಕಾಲ ಬಾಳಿ ಎಂದಿದ್ದಾರೆ.
ಈವರೆಗಿನ ಫಲಿತಾಂಶದನ್ವಯ ಆಡಳಿತರೂಢ ಟಿಎಂಸಿ ಪಕ್ಷ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಸದ್ಯದ ಫಲಿತಾಂಶದನ್ವಯ ಒಟ್ಟು 292 ಸ್ಥಾನಗಳ ಪೈಕಿ, ಟಿಎಂಸಿ 200ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಗೆಲುವಿಗೆ ಬೇಕಾದ ಬಹುಮತದ 147 ಮ್ಯಾಜಿಕ್ ನಂಬರ್ ದಾಟಿದೆ. ಅತ್ತ ಬಿಜೆಪಿ 83 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಇಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬಹಳ ಕೆಟ್ಟದಾಗಿದ್ದು, ಕೆವಲ ಒಂದು ಸ್ಥಾನದಲ್ಲಿ ಮುನ್ನಡೆ ಪಡೆದಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸ್ಪಷ್ಟ ಬಹುಮತದ ರೇಖೆ ದಾಟಿದ್ದರೂ ಅತ್ತ ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವಿನ ಪೈಪೋಟಿ ಮುಂದುವರೆದಿದೆ. ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಸುವೆಂಧುವನ್ನು ಸದ್ಯ ಮಮತಾ ಬ್ಯಾನರ್ಜಿ ಹಿಂದಿಕ್ಕಿದ್ದಾರೆ. ಹೀಗಿದ್ದರೂ ಇಬ್ಬರ ನಡುವಿನ ಮತಗಳ ಅಂತರ ಕೇವಲ 200 ಆಗಿದೆ. ಹೀಗಾಗಿ ಪಕ್ಷದಲ್ಲಿ ಒಂದು ತೆರನಾದ ಚಿಂತೆ ಮನೆ ಮಾಡಿದೆ.
