ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಸಂಭವಿಸಿದ ಲಿಯರ್‌ಜೆಟ್ 45 ವಿಮಾನ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ವಿಮಾನದಲ್ಲಿದ್ದ ಇನ್ನೂ ನಾಲ್ವರು ಸಹ ಮೃತಪಟ್ಟಿದ್ದು, ಈ ಘಟನೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ.

ಬೆಂಗಳೂರು (ಜ.28): ವಿಮಾನ ಅಪಘಾತದಲ್ಲಿ ದುರಂತವಾಗಿ ಸಾವು ಕಂಡ 66 ವರ್ಷದ ಅಜಿತ್‌ ಪವಾರ್‌ Learjet 45 ಸಣ್ಣ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಪಘಾತ ಎಷ್ಟು ಗಂಭೀರವಾಗಿತ್ತೆಂದರೆ, Bombardier Aerospace ನಿರ್ಮಾಣದ ಈ ವಿಮಾನ ಚೂರು ಚೂರಾಗಿ ಹೊಲದಲ್ಲಿ ಬಿದ್ದಿತ್ತು. ಚೂರು ಚೂರಾಗಿ ಬಿದ್ದ ವಿಮಾನಗಳ ನಡುವೆ ಅಜಿತ್‌ ಪವಾರ್‌ ಅವರ ದೇಹ ಸುಟ್ಟು ಭಸ್ಮವಾಗಿತ್ತು. ಮೊದಲ ನೋಟದಲ್ಲಿಯೇ ಇದರಲ್ಲಿದ್ದ ಯಾವುದೇ ಪ್ರಯಾಣಿಕರು ಬದುಕಿಳಿದಿರುವ ಸಾಧ್ಯತೆಯೇ ಇಲ್ಲ ಎಂದನಿಸಿತ್ತು.

ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವು ಕಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ. ಡಿಜಿಸಿಎ ಆ ಬಳಿಕ ವಿಮಾನ ಪ್ರಯಾಣದ ವಿವರ ಹಾಗೂ ವಿಮಾನದ ಮಾಹಿತಿಯನ್ನೂ ಪ್ರಾಥಮಿಕ ಮಧ್ಯಂತರ ವರದಿಯಲ್ಲಿ ಹಂಚಿಕೊಂಡಿದೆ.

ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಏರ್‌ಕ್ರಾಫ್ಟ್‌ Learjet 45 ಮಾದರಿಯದ್ದಾಗಿದೆ. ಇದನ್ನು ವಿಎಸ್‌ಆರ್‌ ಆಪರೇಟ್‌ ಮಾಡುತ್ತಿತ್ತು.VT-SSK ಎನ್ನುವ ಹೆಸರಲ್ಲಿ ವಿಮಾನ ನೋಂದಣಿಯಾಗಿತ್ತು. ಬಾರಾಮತಿ ಏರ್‌ಪೋರ್ಟ್‌ ಸಮೀಪ ಅಪಘಾತಕ್ಕೆ ಈಡಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 5 ಮಂದಿ ಇದ್ದರು ಎಂದು ಮಾಹಿತಿ ನೀಡಿದೆ.

ಕ್ರ್ಯಾಶ್‌ ಲ್ಯಾಂಡಿಂಗ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ಅವರ ಆಪ್ತ ಸಹಾಯಕ, ಒಬ್ಬ ಸಿಬ್ಬಂದಿ ಎರಡು ಫ್ಲೈಟ್‌ ಸಿಬ್ಬಂದಿಗಳು ಇದರಲ್ಲಿ ಸಾವು ಕಂಡಿದ್ದಾರೆ.

ಯಾವ ಮಾದರಿಯ ವಿಮಾನ

ಈ ಲಿಯರ್‌ಜೆಟ್ 45XR ವಿಮಾನವು VT-SSK ಎಂಬ ಟೇಲ್‌ ಸಂಖ್ಯೆಯ ಅಡಿಯಲ್ಲಿ ಹಾರುತ್ತದೆ. ಮೇಫೇರ್ ಜೆಟ್ಸ್ DWC LLC (VSR ವೆಂಚರ್ಸ್ ಪ್ರೈ. ಲಿಮಿಟೆಡ್ ಇದರ ನಿವರ್ಹಣೆ ಮಾಡುತ್ತದೆ) ನಿರ್ವಹಿಸಲ್ಪಡುವ ಇದನ್ನು 2010 ರಲ್ಲಿ ಬೊಂಬಾರ್ಡಿಯರ್ ತಮ್ಮ ಲಿಯರ್‌ಜೆಟ್ 45XR ಸರಣಿಯ ಭಾಗವಾಗಿ ನಿರ್ಮಿಸಿತು. VT-SSK VIDP ನಲ್ಲಿ ನೆಲೆಗೊಂಡಿದ್ದು, ಗರಿಷ್ಠ 9 ಪ್ರಯಾಣಿಕರನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯವಿದೆ.

ವಿಮಾನದ ವೇಗ: ಸರಿಸುಮಾರು 465 ನಾಟ್‌ಗಳ (861 ಕಿಮೀ/ಗಂ) ಗರಿಷ್ಠ ಕ್ರೂಸ್ ವೇಗವನ್ನು ತಲುಪುತ್ತದೆ.

ವಿಮಾನದ ರೇಂಜ್: ಸರಿಸುಮಾರು 2,120 ನಾಟಿಕಲ್ ಮೈಲುಗಳ (3,926 ಕಿಮೀ) ವರೆಗೆ ತಡೆರಹಿತ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದು, ನ್ಯೂಯಾರ್ಕ್ ನಿಂದ ಮಿಯಾಮಿ ಅಥವಾ ಲಂಡನ್ ನಿಂದ ಸ್ಟಾಕ್‌ಹೋಮ್‌ನಂತಹ ಮಾರ್ಗಗಳಿಗೆ ಸೂಕ್ತವಾಗಿದೆ.

ಗರಿಷ್ಠ ಎತ್ತರ: 51,000 ಅಡಿಗಳ ಸೇವಾ ಸೀಲಿಂಗ್‌ನಲ್ಲಿ ಹಾರಲು ಪ್ರಮಾಣೀಕರಿಸಲ್ಪಟ್ಟಿದೆ, ಇದು ಹೆಚ್ಚಿನ ವಾಣಿಜ್ಯ ವಿಮಾನ ಸಂಚಾರ ಮತ್ತು ಹವಾಮಾನವನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ.

ಪವರ್‌ಪ್ಲ್ಯಾಂಟ್: ಎರಡು ಹನಿವೆಲ್ TFE731-20 ಟರ್ಬೋಫ್ಯಾನ್ ಎಂಜಿನ್‌ಗಳನ್ನು ಹೊಂದಿದೆ.