Ajit Pawar Death ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ(Prashanth Kini) ಅವರ ಭವಿಷ್ಯವಾಣಿ ನಿಜವಾಗಿದೆ. ಈಗ ಅಜಿತ್ ಪವಾರ್ ಸಾವಿಗೆ ಸಂಬಂಧಿಸಿದಂತೆ ನನ್ನ ಭವಿಷ್ಯ ನಿಜವಾಗಿದೆ ಎಂದು 'X' ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ(Prashanth Kini) ಅವರ ಭವಿಷ್ಯವಾಣಿ ಬಹಳ ಫೇಮಸ್ ಆಗಿದೆ . ಸಿನಿಮಾ, ರಾಜಕೀಯ ಸೇರಿದಂತೆ ಈ ಜ್ಯೋತಿಷಿ ನುಡಿದಿರುವ ಭವಿಷ್ಯವಾಣಿಗಳು ಬಹುತೇಕ ಸತ್ಯವೇ ಆಗಿದ್ದು, ರಾಜಕಾರಣದ ಬಗ್ಗೆ ಇವರ ಹಲವು ಭವಿಷ್ಯಗಳು ಸಂಚಲನ ಮೂಡಿಸಿದ್ದವು. ಅದರಲ್ಲಿ ಒಂದು, ಒಂದು ಕಾಲದಲ್ಲಿ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೆಲವು ಭಾರತೀಯ ಅನುಭವಿ ರಾಜಕಾರಣಿಗಳು ಡಿಸೆಂಬರ್ 2025 ರಿಂದ ಫೆಬ್ರವರಿ 2026 ರ ನಡುವೆ ನಿಧನರಾಗಬಹುದು ಎಂದಿದ್ದರು.
ಈಗ ಅದು ನಿಜಾ ಆದಂತೆ ಕಾಣುತ್ತಿದೆ. ಈಗ ಅವರು ತಮ್ಮ 'X' ಖಾತೆಯಲ್ಲಿ ಡಿಸೆಂಬರ್ 2025 ರಿಂದ ಫೆಬ್ರವರಿ 2026 ರ ನಡುವೆ ಒಬ್ಬ ಹಿರಿಯ ರಾಜಕಾರಣಿ ಸಾಯುತ್ತಾರೆ ಎಂದು ನಾನು ಊಹಿಸಿದ್ದೇನೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು. ಎಂದು ಹೇಳಿ ಕೋಂಡಿದ್ದಾರೆ.
ಅಜಿತ್ ಪವಾರ್ ಅವರು 1991 ರಲ್ಲಿ ಬಾರಾಮತಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು, ಆದರೆ ಆ ಸ್ಥಾನವನ್ನು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಗಾಗಿ ತೊರೆದರು. ತದನಂತರ, ಅವರು ಮಹಾರಾಷ್ಟ್ರದ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾದರು. ಅವರು ಪ್ರಸ್ತುತ ಶಾಸಕರಾಗಿ ಮತ್ತು ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕರ್ನಾಟಕ ರಾಜಕೀಯದ ಬಗ್ಗೆ ಭವಿಷ್ಯ
ಜ್ಯೋತಿಷಿ ಪ್ರಶಾಂತ್ ಕಿನಿ ಕರ್ನಾಟಕಕ್ಕೆ ಮತ್ತು ಕರ್ನಾಟಕ ರಾಜಕೀಯಕ್ಕೂ ಸಂಬಂಧಿಸಿಂದತೆ ಹಲವು ಭವಿಷ್ಯವಾಣಿ ನುಡಿದಿದ್ದರು. ಅಖಂಡ ಕರ್ನಾಟಕವು ಸದ್ಯದಲ್ಲೇ ಎರಡು ಭಾಗ ಆಗಲಿದೆ ಎಂದೂ ಪ್ರಶಾಂತ್ ಕಿನಿ ಸುಳಿವು ನೀಡಿದ್ದರು, ಕರ್ನಾಟಕ ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದಾಗಿ ಕರ್ನಾಟಕ ಎರಡು ಭಾಗವಾಗಲಿದೆ. ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಇದಕ್ಕೂ ಮೊದಲು ಕರ್ನಾಟಕ ಕಾಂಗ್ರೆಸ್ ಎರಡು ಭಾಗವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಕರ್ನಾಟಕದ ಜನರು ಇದಕ್ಕೆ ಬೆಲೆ ತೆರಲಿದ್ದಾರೆ. ಮೈಸೂರು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಎರಡು ಭಾಗವಾಗಲಿದೆ" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು.
