Airshow: ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿ ಗಮನಸೆಳೆದ ವಾಯುಸೇನೆಯ ಐಶ್ವರ್ಯ, ಗೋಕುಲ್‌ ವಾಸು

ಏರೋ ಇಂಡಿಯಾದ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಬಾರಿಗೆ ಇಡೀ ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿ ನೀಡುವ ಮೂಲಕ ಕನ್ನಡದ ಕಂಪು ಏರ್‌ಶೋದಲ್ಲಿ ಪಸರಿಸಿತು.

Aishwarya and Gokul Vasu of Air Force highlighted in Airshow by their commentary in Kannada At Bengaluru Airshow 2023 akb

ಕನ್ನಡಪ್ರಭ ವಾರ್ತೆ 
ಬೆಂಗಳೂರು:  ಏರೋ ಇಂಡಿಯಾದ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಬಾರಿಗೆ ಇಡೀ ವೀಕ್ಷಕ ವಿವರಣೆಯನ್ನು ಕನ್ನಡದಲ್ಲಿ ನೀಡುವ ಮೂಲಕ ಕನ್ನಡದ ಕಂಪು ಏರ್‌ಶೋದಲ್ಲಿ ಪಸರಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ (Aero India airshow) ಬಹುತೇಕ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರ ವೀಕ್ಷಕ ವಿವರಣೆಯನ್ನು ಈ ಹಿಂದಿನ ಏರ್‌ ಶೋಗಳಲ್ಲಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ವೈಮಾನಿಕ ಪ್ರದರ್ಶನ ನಡೆಯುವ ವೇಳೆ ಇಂಗ್ಲಿಷ್‌, ಹಿಂದಿ ಜತೆಗೆ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಾಗಿದೆ. ಈ ಜವಾಬ್ದಾರಿಯನ್ನು ವಾಯುಸೇನೆಯ ಕರ್ನಾಟಕ ಮೂಲದ ಐಶ್ವರ್ಯ ಹಾಗೂ ಗೋಕುಲ್‌ ವಾಸು ಅವರಿಗೆ ನೀಡಲಾಗಿತ್ತು.

ಈ ಕುರಿತು ಮಾಹಿತಿ ನೀಡಿದ ಸುರತ್ಕಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡತಿ ಐಶ್ವರ್ಯ(Kannadathi Aishwarya), ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆಯುತ್ತಿರುವುದರಿಂದ ಕನ್ನಡದಲ್ಲಿ ವೀಕ್ಷಕ ವಿವರಣೆ (commentary in Kannada) ನೀಡಿದರೆ ಎಲ್ಲರಿಗೂ ಅರ್ಥವಾಗಲಿದೆ. ಈ ಕಾರಣಕ್ಕೆ ಇಂಗ್ಲಿಷ್‌, ಹಿಂದಿಯೊಂದಿಗೆ ಕನ್ನಡ ಭಾಷೆಯಲ್ಲಿಯೂ (Kannada language) ವಿವರಣೆ ನೀಡಲಾಗಿದೆ ಎಂದರು.

Aero India 2023 ಬೆಂಗಳೂರಲ್ಲಿ ಸ್ವದೇಶಿ ನಿರ್ಮಿತ ಪ್ರಚಂಡ, ಸೂರ್ಯಕಿರಣ್ ಯುದ್ಧವಿಮಾನದ ಅಬ್ಬರ!

ಡಿಫೆನ್ಸ್‌ ಪದಗಳನ್ನು (defense words)ಕನ್ನಡಕ್ಕೆ ಭಾಷಾಂತರ (translate)ಮಾಡಿ ಸರಳವಾಗಿ ವೀಕ್ಷಕ ವಿವರಣೆ ನೀಡುವುದಕ್ಕೆ ಸ್ವಲ್ಪ ಕಷ್ಟವಾಯಿತು. ಸಾಧ್ಯವಾದಷ್ಟು ಎಲ್ಲರಿಗೂ ಅರ್ಥವಾಗುವ ರೀತಿ ಹೇಳುವ ಪ್ರಯತ್ನ ಮಾಡಿದ್ದೇವೆ. ವೀಕ್ಷಕ ವಿವರಣೆ ವೇಳೆ ವೈಮಾನಿಕ ಪ್ರದರ್ಶನ ನೀಡುವ ಏರ್‌ಕ್ರಾಫ್ಟ್ ಹೆಸರು, ಯಾವ ರೀತಿಯ ಸಾಹಸ ಪ್ರದರ್ಶವನ್ನು ನೀಡಲಿದೆ. ಯಾವ ಫಾರ್ಮೇಶನ್‌, ಸೇರಿದಂತೆ ಇತ್ಯಾದಿ ವಿವರಗಳನ್ನು ನೀಡಲಾಗುತ್ತಿದೆ. ಅದಕ್ಕೆ ನಾವೇ ಸ್ಕ್ರಿಫ್ಟ್ ಸಹ ಸಿದ್ಧಪಡಿಸಿಕೊಂಡಿದ್ದೇವೆ. ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿರುವುದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಬೆಂಗಳೂರು ಆಗಸದಲ್ಲಿ ಯುದ್ಧವಿಮಾನಗಳ ಸಾಹಸ ಪ್ರದರ್ಶನ, ಟ್ರಾಫಿಕ್ ಜಾಮ್‌‌ಗೆ ಪರದಾಡಿದ ಜನ!

Latest Videos
Follow Us:
Download App:
  • android
  • ios