Asianet Suvarna News Asianet Suvarna News

ಮಹಿಳಾ ಉಡುಗೆ ತೊಡುಗೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಶವ ಪತ್ತೆ, ಪತ್ನಿಗೆ ಆಘಾತ!

ಲಿಪ್‌ಸ್ಟಿಕ್, ಬಳೆ, ಒಳ ಉಡುಪು ಸೇರಿದಂತೆ ಮಹಿಳೆಯ ಉಡುಗೆ ತೊಡುಗೆಯಲ್ಲಿ ಏರ್‌ಪೋರ್ಟ್ ಅಧಿಕಾರಿ  ಶವ ಪತ್ತೆಯಾಗಿದೆ. ಪತ್ನಿ, ಕುಟುಂಬಸ್ಥರ ಜೊತೆ ಚೆನ್ನಾಗಿದ್ದ ಅಧಿಕಾರಿ, ಮಹಿಳೆ ಉಡುಗೆಯಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
 

Airport Authority found dead dressed as woman including undergarments in official house Dehradun ckm
Author
First Published Jun 25, 2024, 10:56 AM IST

ಡೆಹ್ರಡೂನ್(ಜೂ.25) ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿ. ಆದರೆ ಅಧಿಕಾರಿ ಮೃತದೇಹ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಕಾರಣ ದೇಹದಲ್ಲಿ ಮಹಿಳೆಯ ಉಡುಪು, ಕೈಗಳಲ್ಲಿ ಬಳೆ, ಲಿಪ್‌ಸ್ಟಿಕ್, ಬಿಂದಿ ಮೂಲಕ ಮಹಿಳಾ ಉಡುಗೆ ತೊಡುಗೆಯಲ್ಲಿ ಮೃತದೇಹ ಪತ್ತೆಯಾಗಿದೆ. ಡೆಹ್ರಡೂನ್ ವಿಮಾನ ನಿಲ್ದಾಣದಲ್ಲಿ ಅಧಿಕೃತ ಗೃಹದಲ್ಲಿ ಮೃತದೇಹ ಪತ್ತೆಯಾಗಿದೆ. ಇತ್ತ ಮೃತ ಅಧಿಕಾರಿ ಪತ್ನಿ ಆಘಾತಕ್ಕೊಳಗಾಗಿದ್ದಾರೆ.

ಇಬ್ಬರು ಆಪ್ತ ಸಂಬಂಧಿಕರ ಜೊತೆ ರಾತ್ರಿ ಊಟ ಮಾಡಿದ್ದ ವಿಮಾನ ನಿಲ್ದಾದ ಅಧಿಕಾರಿ ಬಳಿಕ ತಮ್ಮ ಕೋಣೆಯಲ್ಲಿ ಮಲಗಿದ್ದರು. ಇತ್ತ ಮತ್ತಿಬ್ಬರು ಬೇರೆ ಕೋಣೆಯಲ್ಲಿ ಮಲಗಿದ್ದರು. ಮರುದಿನ ಬೆಳಗ್ಗೆ 8 ಗಂಟೆಗೆ ಹತ್ತಿರದ ಮಾವಿನ ತೋಟಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮರುದಿನ ಬೆಳಕ್ಕೆ ಅದೆಷ್ಟೆ ಕರೆ ಮಾಡಿದರೂ, ಬಾಗಿಲು ಬಡಿದರೂ ಏರ್‌ಪೋರ್ಟ್ ಅಧಿಕಾರಿಯ ಸುಳಿವಿಲ್ಲ. ಹೀಗಾಗಿ ಇತರ ಸಹೋದ್ಯೋಗಿಗಳಿಗೆ ಮಾಹಿತಿ ನೀಡಲಾಯಿತು.

ಮಂಗಳಮುಖಿಯರು ಕಿರುಕುಳ ನೀಡಿದ್ದಾರೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಅಧಿಕಾರಿಯ ಅಧಿಕೃತ ಮನೆಗೆ ಆಗಮಿಸಿದ ಸಹದ್ಯೋಗಿಗಳು ಹಾಗೂ ಸಂಬಂಧಿಕರು ಕೋಣೆಯ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ದೃಶ್ಯ ನೋಡಿ ಆಘಾತವಾಗಿದೆ. ಅಧಿಕಾರಿ ಮಹಿಳೆಯ ಉಡುಪಿನ ದುಪ್ಪಟ್ಟಾದಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಆದರೆ ಅಧಿಕಾರಿ ಮಹಿಳೆಯ ಉಡುಪು ಧರಿಸಿದ್ದಾರೆ. ಮೇಕ್ ಅಪ್ ಮಾಡಿಕೊಂಡಿದ್ದಾರೆ. ಲಿಪ್‌ಸ್ಟಿಕ್ ಹಾಕಿಕೊಂಡಿದ್ದಾರೆ. ಕೈಗಳಿಗೆ ಬಳೆ ಧರಿಸಿದ್ದಾರೆ. ಇಷ್ಟೇ ಇಲ್ಲ ಬ್ರಾ ಸೇರಿದಂತೆ ಒಳ ಉಡುಪನ್ನು ಧರಿಸಿದ್ದಾರೆ. 

ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಕೆ ಕಳುಹಿಸಿದ್ದಾರೆ. ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಇನ್ನು ಬದುಕು ಅಂತ್ಯಗೊಳಿಸಲು ಇತರ ಬಾಹ್ಯ ಕಾರಣಗಳು ಕಾಣುತ್ತಿಲ್ಲ. ಆದರೆ ಮಹಿಳಾ ಉಡುಪು ಧರಿಸಿ  ಬದುಕು ಅಂತ್ಯಗೊಳಿಸಿದ್ದೇಕೆ ಎಂದು ಅನುಮಾನ ಮೂಡತೊಡಗಿದೆ. ಕಾರಣ ಅಧಿಕಾರಿ ಪತ್ನಿ ಈ ಘಟನೆಯಿಂದ ಆಘಾತಕ್ಕೊಳಾಗಿದ್ದಾರೆ. ಒಂದೆಡೆ ಪತಿಯ ಸಾವು, ಮತ್ತೊಂದೆಡೆ ಮಹಿಳೆಯಂತೆ ಡ್ರೆಸ್ ಧರಿಸಿ ಮೃತಪಟ್ಟಿರುವ ಘಟನೆಯಿಂದ ತೀವ್ರವಾಗಿ ನೊಂದಿದ್ದಾರೆ. ಅಧಿಕಾರಿ ಇದುವರೆಗೂ ಎಲ್ಲೂ ಕೂಡ ಈ ರೀತಿಯ ಭಾವನೆಗಳನ್ನ ವ್ಯಕ್ತಪಡಿಸಿದ ಉದಾಹರಣೆ ಇಲ್ಲ ಎಂದು ಆಪ್ತರು ಹೇಳಿದ್ದಾರೆ. 

6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡ ಮಂಗಳಮುಖಿಯಾಗಿ ಪತ್ತೆ; ಸುಳಿವು ಕೊಟ್ಟ ಬಿಗ್‌ಬಾಸ್, ಪತಿ ವೇಷ ಕಂಡು ಪತ್ನಿ ಮೂರ್ಛೆ!

ಅಧಿಕಾರಿ ತಾನು ಮಹಿಳೆಯಾಗಬೇಕೆಂದು ಬಯಸಿರುವ ಸಾಧ್ಯತೆ ಇದೆ. ಆದರೆ ಕುಟುಂಬ, ಪತ್ನಿ ಹೀಗೆ ಹಲವು ಕಾರಣಗಳಿಂದ ಈ ಭಾವನೆ ಹೇಳಿಕೊಳ್ಳಲು ಸಾಧ್ಯವಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ. ಈ ರೀತಿ ಕೆಲ ಘಟನೆಗಳು ನಡೆದಿದೆ ಎಂದು ಮನಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Latest Videos
Follow Us:
Download App:
  • android
  • ios