ಭಾರತೀಯ ವಾಯುಪಡೆಗೆ ಸ್ಪೇನ್‌ನಿಂದ 56 C-295 ವಿಮಾನ ಹಸ್ತಾಂತರ
ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಕಂಪನಿಯು ಬುಧವಾರ ಭಾರತೀಯ ವಾಯುಪಡೆಗೆ ಮೊದಲ 56 C-295 ಸಾರಿಗೆ ವಿಮಾನ ಹಸ್ತಾಂತರಿಸಿದೆ. ದೇಶದ ವಾಯು ಆಸ್ತಿಗಳನ್ನು ಆಧುನೀಕರಿಸುವ ಗುರಿಯನ್ನು ಭಾರತ ಹೊಂದಿದ್ದು ಇದರ ಅಂಗವಾಗಿ ವಿಮಾನವನ್ನು ಭಾರತ ಸರ್ಕಾರ ಖರೀದಿಸಿದೆ.

ಸ್ಯಾವಿಲ್ಲೆ (ಸ್ಪೇನ್): ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಕಂಪನಿಯು ಬುಧವಾರ ಭಾರತೀಯ ವಾಯುಪಡೆಗೆ ಮೊದಲ 56 C-295 ಸಾರಿಗೆ ವಿಮಾನ ಹಸ್ತಾಂತರಿಸಿದೆ. ದೇಶದ ವಾಯು ಆಸ್ತಿಗಳನ್ನು ಆಧುನೀಕರಿಸುವ ಗುರಿಯನ್ನು ಭಾರತ ಹೊಂದಿದ್ದು ಇದರ ಅಂಗವಾಗಿ ವಿಮಾನವನ್ನು ಭಾರತ ಸರ್ಕಾರ ಖರೀದಿಸಿದೆ. 2 ವರ್ಷಗಳ ಹಿಂದೆ 21,935 ಕೋಟಿ ರು. ಮೊತ್ತದಲ್ಲಿ 16 ಸರಕು ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದರ ಭಾಗವಾಗಿ ಮೊದಲ ವಿಮಾನವನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (Air Chief Marshal) ವಿ.ಆರ್. ಚೌಧರಿ (V.R. Chowdhury) ಅವರು ದಕ್ಷಿಣ ಸ್ಪೇನ್‌ನ ಸ್ಯಾವಿಲ್‌ನಲ್ಲಿ ಈ ವಿಮಾನಗಳನ್ನು ಸ್ವೀಕರಿಸಿದರು. ಒಪ್ಪಂದದಂತೆ, 2025ರೊಳಗೆ ಎಲ್ಲ 16 ವಿಮಾನಗಳು ಭಾರತದ ಕೈಸೇರಲಿವೆ.
ನಂತರದ 40 ವಿಮಾನಗಳನ್ನು ಭಾರತದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (Tata Advanced Systems)(ಟಿಎಎಸ್ಎಲ್), ಏರ್‌ಬಸ್ ಕಂಪನಿಯ ಸಹಯೋಗದಲ್ಲಿ ತಯಾರಿಸುತ್ತದೆ ಮತ್ತು ಜೋಡಿಸುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ವಡೋದರಾದಲ್ಲಿ (Vadodara) 295 ವಿಮಾನಗಳ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಖಾಸಗಿ ಒಕ್ಕೂಟವು ಭಾರತದಲ್ಲಿ ತಯಾರಿಸಿದ ಮೊದಲ ಮಿಲಿಟರಿ ವಿಮಾನವಾಗಿದೆ. ಭಾರತೀಯ ವಾಯುಪಡೆಯು (Indian Air Force) 6 ದಶಕಗಳ ಹಿಂದೆ ಸೇವೆಗೆ ಪ್ರವೇಶಿಸಿದ ಹಳೆಯ ಆ್ಯವ್ರೋ-748 ವಿಮಾನಗಳ ಫ್ಲೀಟ್ ಬದಲಿಸಲು ಸಿ295 ವಿಮಾನ ಖರೀದಿಸುತ್ತಿದೆ. ಸಿ295 ವಿಮಾನಗಳು ಅತ್ಯಾಧುನಿಕವಾಗಿವೆ 71 ಪಡೆಗಳು ಅಥವಾ 50 ಪ್ಯಾರಾಟ್ರೂಪರ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಯುದ್ಧ ಸಲಕರಣೆಗಳ ಸಾಗಣೆಗಾಗಿ ಪ್ರಸ್ತುತ ಭಾರವಾದ ವಿಮಾನಗಳಿಗೆ ಪ್ರವೇಶಿಸಲಾಗದ ಸ್ಥಳಗಳಿಗೆ ಇದು ಹೋಗುತ್ತದೆ.
ಉಗ್ರರ ಜತೆ ಗುಂಡಿನ ಕಾಳಗ: ಯೋಧ, ಸೇನಾ ಶ್ವಾನ ಕೆಂಟ್ ಹುತಾತ್ಮ
ಉಗ್ರರ ಜತೆ ಗುಂಡಿನ ಕಾಳಗ: ಕರ್ನಲ್ ಸೇರಿ 3 ಅಧಿಕಾರಿಗಳು ಹುತಾತ್ಮ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಭಾರತೀಯ ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಸೇನಾ ಕರ್ನಲ್ ಮನ್‌ಪ್ರೀತ್ ಸಿಂಗ್ (Manpreet Singh) ಸೇರಿ ಮೂವರು ಭದ್ರತಾ ಪಡೆಯ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಅನಂತ್‌ನಾಗ್ ಜಿಲ್ಲೆಯ ಕೋಕರ್‌ನಾಗ್‌ನ (Kokarnag) ಗಡೋಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದ ಭಯೋತ್ಪಾದಕರ (terrorists) ವಿರುದ್ಧ ಕಾರ್ಯಾಚರಣೆಯಲ್ಲಿ ಘಟನೆ ನಡೆದಿದೆ. ಉಗ್ರರ ಗುಂಡಿನ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ದೋಂಛಕ್ ಮತ್ತು ಜಮ್ಮು- ಕಾಶ್ಮೀರ ಉಪ ಪೊಲೀಸ್ ಅಧೀಕ್ಷಕ ಹುಮಾಯೂನ್ ಭಟ್ (Humayun Bhatt)ಅವರು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ಕಾರ್ಯಕ್ರಮ ಅವ್ಯವಸ್ಥೆಗೆ ರೆಹಮಾನ್ ಜವಾಬ್ದಾರಿಯಲ್ಲ: ಎಟಿಸಿಟಿ ಸ್ಪಷ್ಟನೆ
ಚೆನ್ನೈ: ಕಳೆದ ಭಾನುವಾರ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಎ.ಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಉಂಟಾದ ಯಾವುದೇ ಸಮಸ್ಯೆಗಳಿಗೂ ಹಾಗೂ ರೆಹಮಾನ್ ಅವರಿಗೂ ಯಾವುದೇ ಸಂಬಂಧವಿಲ್ಲ. ಎಲ್ಲಾ ತಪ್ಪುಗಳ ಹೊಣೆಯನ್ನೂ ನಾವೇ ಹೊತ್ತುಕೊಳ್ಳುತ್ತೇವೆ ಎಂದು ಕಾರ್ಯಕ್ರಮ ಆಯೋಜಿಸಿದ್ದ ಎಸಿಟಿಸಿ ಇವೆಂಟ್ಸ್ (ACTC Events) ಹೇಳಿದೆ. ಇಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಂಸ್ಥೆಯ ಸಂಸ್ಥಾಪಕ ಹೇಮಂತ್ ಅವರು "ಭಾನುವಾರ ಉಂಟಾದ ಸಮಸ್ಯೆಗಳಿಗೆ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಯಾರೂ ಕೂಡ ರೆಹಮಾನ್ (AR Rahman)ಬಗ್ಗೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಬಾರದು" ಎಂದಿದ್ದಾರೆ.
ಅನಂತ್‌ನಾಗ್ ಎನ್‌ಕೌಂಟರ್, ಕರ್ನಲ್ ಮನ್‌ಪ್ರೀತ್ ಸಿಂಗ್ ವೀರಮರಣ
ಭಾನುವಾರ ನಗರದಲ್ಲಿ ಎಟಿಸಿಟಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಟಿಕೆಟ್‌ಗೆ ಭಾರೀ ದರ ಇರಿಸದ್ದು, ಕೇವಲ 10,000 ಜನರು ಸಾಲುವ ಸ್ಥಳದಲ್ಲಿ ಟಿಕೆಟ್ ಪಡೆಯದೆಯೂ 1 ಲಕ್ಷ ಜನ ಸೇರಿದ್ದು ಸೇರಿದಂತೆ ಭಾರೀ ಅವ್ಯವಸ್ಥೆ ಉಂಟಾಗಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ ಮಕ್ಕಳು ಮತ್ತು ಮಹಿಳೆಯರು ಗಾಯಗೊಂಡಿದ್ದ ಘಟನೆಗಳು ನಡೆದಿದ್ದಲ್ಲದೇ ಮಕ್ಕಳು ಜನಸಂದಣಿಯಲ್ಲಿ ಸಿಲುಕಿ ಅಳುತ್ತಿದ್ದ ವಿಡಿಯೋಗಳು ಭಾರೀ ವೈರಲ್ ಆಗಿ, ರೆಹಮಾನ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು.