Asianet Suvarna News Asianet Suvarna News

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ನಿರ್ಬಂಧ ಜಾರಿ, ಜೊತೆಗೊಂದು ಎಚ್ಚರಿಕೆ!

ರಾಷ್ಟ್ರರಾಜಧಾನಿಯಲ್ಲಿ ಮತ್ತೆ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತಿದೆ. ಈ ಕುರಿತು ಖಡಕ್ ಆದೇಶ ಹೊರಬಿದ್ದಿದೆ. ನಿಯಮ ಉಲ್ಲಂಘಿಸಿದೆ ದುಬಾರಿ ದಂಡ ತೆರಬೇಕು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Air quality index turning severe panel directs to ban construction and demolition work in Delhi NCR ckm
Author
First Published Dec 4, 2022, 9:25 PM IST

ನವದೆಹಲಿ(ಡಿ.04):  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ನಿರ್ಬಂಧ ಜಾರಿಯಾಗಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ಮತ್ತೆ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಕಳೆದೊಂದು ವಾರದಿಂದ ಮಾಲಿನ್ಯ ಪ್ರಮಾಣದ ಹೆಚ್ಚಾಗಿದೆ. ಹೀಗಾಗಿ ಮತ್ತೆ ನಿರ್ಬಂಧ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಕೆಡವುವ ಕಾರ್ಯಗಳನ್ನು ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಬೆನಲ್ಲೇ ಮತ್ತೆ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಸೇರಿದಂತೆ ಹಲವು ನಿರ್ಬಂಧಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಮುಂದಾಗಿದೆ. ಕಳೆದ 24 ಗಂಟೆಯಲ್ಲಿ ದೆಹಲಿ ವಾಯು ಮಾಲಿನ್ಯ AQI ವರದಿ ಪ್ರಕಾರ 407ಕ್ಕೆ ಏರಿಕೆಯಾಗಿದೆ. ಈ ಕುರಿತು ಭಾನುವಾರ ಸಭೆ ಸೇರಿದ ಸಮಿತಿ, ಕಠಿಣ ನಿರ್ಬಂಧ ಜಾರಿಗೊಳಿಸವು ಮೂಲಕ ಮಾಲಿನ್ಯ ನಿಯಂತ್ರಿಸಲು ಆದೇಶ ನೀಡಿದೆ. 

ದೆಹಲಿ ಸುತ್ತಮುತ್ತಲ ಪ್ರದೇಶದಲ್ಲಿ ರೈತರು ಕಳೆಗೆ ಬೆಂಕಿ ಹಚ್ಚುವ ಘಟನೆಗಳಿಂದ ದೆಹಲಿಯ್ಲಿ ವಾಯು ಮಾಲಿನ್ಯ ವಿಪರೀತವಾಗಿತ್ತು. ಹೀಗಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಉದ್ಯೋಗಿಗಳಿ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಕಟ್ಟಡ ನಿರ್ಮಾಣ ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಪರಿಣಾಮ ದೆಹಲಿ ಮಾಲಿನ್ಯ ಸುಧಾರಣೆಯಾಗಿತ್ತು. 

 

ಕರೋನಾ ನಂತರ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ ಈ ರೋಗ, ಎಚ್ಚರವಿರಲಿ!

ಕಳೆದ ತಿಂಗಳ ಆರಂಭಿಕ ವಾರದಲ್ಲಿ ದೆಹಲಿ ಮತ್ತೆ ಸಹಜ ಸ್ಥಿತಿಗೆ ಮರಳತೊಡಗಿತ್ತು. ಶಾಲಾ ಕಾಲೇಜುಗಳು ಆರಂಭಗೊಂಡಿತ್ತು. ಕಟ್ಟಡ ನಿರ್ಮಾಣ ಪುನರ್ ಆರಂಭಗೊಂಡಿತ್ತು. ಆದರೆ ಇದೀಗ ಮತ್ತೆ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಲಾಗಿದೆ. ೇ

ದೆಹಲಿ ಮಾಲಿನ್ಯ ತಡೆಗೆ ಕಟ್ಟಡ ಕಾಮಗಾರಿಗೆ ತಡೆ ನೀಡಿದ್ದ ಕೋರ್ಟ್
ಸೆಪ್ಟೆಂಬರ್ ತಿಂಗಳಲ್ಲಿ ಹದಗೆಡುತ್ತಿರುವ ವಾಯುವಿನ ಗುಣಮಟ್ಟದ ಹಿನ್ನೆಲೆ ಸುಪ್ರೀಂ ಕೋರ್ಟ್‌ ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಯನ್ನು ಮತ್ತೊಮ್ಮೆ ನಿಷೇಧಿಸಿತ್ತು. ಕಟ್ಟಡ ಕಾರ್ಮಿಕರಿಗೆ ಈ ಸಮಯದಲ್ಲಿ ಕಾರ್ಮಿಕ ನಿಧಿಯಿಂದ ಜೀವನಾಧಾರ ಒದಗಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಾಧೀಶ ಎನ್‌.ವಿ.ರಮಣ ಅವರನ್ನು ಒಳಗೊಂಡ ನ್ಯಾಯಪೀಠ, ಎನ್‌ಸಿಆರ್‌ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟನಿರ್ವಹಣಾ ಆಯೋಗಕ್ಕೆ ಗಾಳಿಯ ಗುಣಮಟ್ಟದ ವೈಜ್ಞಾನಿಕ ಅಧ್ಯಯನ ಕೈಗೊಳ್ಳುವುದರೊಂದಿಗೆ, ಗಾಳಿಯ ಗುಣಮಟ್ಟಇನ್ನಷ್ಟುಕುಸಿಯದಂತೆ ತಡೆಗಟ್ಟುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ. ಮನೆಯ ಒಳಾಂಗಣ ಅಲಂಕಾರ, ವಿದ್ಯುತ್‌ ಕಾಮಗಾರಿ, ಪ್ಲಂಬಿಂಗ್‌ ಮತ್ತು ಮರಗೆಲಸದಂತಹ ಮಾಲಿನ್ಯ ರಹಿತ ಚಟುವಟಿಕೆಗಳಿಗೆ ಕೋರ್ಟ್‌ ಅನುಮತಿ ನೀಡಿದೆ.

ಇದು ಬೆಂಗಳೂರಿಗೆ ಎಚ್ಚರಿಕೆ ಗಂಟೆ: ಕೊರೋನಾಗಿಂತ ವಾಯು ಮಾಲಿನ್ಯ ಡೇಂಜರ್?

ದೆಹಲಿ ಮಾಲಿನ್ಯ ತಡೆಗೆ ಶಾಶ್ವತ ಪರಿಹಾರಕ್ಕಾಗಿ ತಜ್ಞರ ಸಲಹೆಗೆ ಆಹ್ವಾನ
ದೆಹಲಿ-ಎನ್‌ಸಿಆರ್‌ ಪ್ರದೇಶದ ವಾಯುಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಹಾಗೂ ತಜ್ಞರ ಸಲಹೆಯನ್ನು ಆಹ್ವಾನಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ವಾಯು ಗುಣಮಟ್ಟನಿರ್ವಹಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಡೈರಿ ಉತ್ಪನ್ನಗಳು, ಔಷಧಿ, ವೈದ್ಯಕೀಯ ಉಪಕರಣಗಳ ತಯಾರಿಕಾ ಘಟಕಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕಾರ್ಖಾನೆಗಳಿಗೆ 8 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ದಿನವಿಡೀ ಕಾರ್ಯನಿರ್ವಹಿಸುವ ಕಾರ್ಖಾನೆಗಳಿಗೆ ವಾರದಲ್ಲಿ ಕೇವಲ 5 ದಿನಗಳು ತೆರೆಯಲು ಸೂಚಿಸಲಾಗಿದೆ. ಥರ್ಮಲ್‌ ಶಕ್ತಿ ಉತ್ಪಾದನಾ ಕಾರ್ಖಾನೆಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ನಿರ್ಮಾಣ ಚಟುವಟಿಕೆಗಳ ಆರಂಭದ ಕುರಿತು ಶುಕ್ರವಾರ ನಿರ್ಣಯ ತೆಗೆದುಕೊಳ್ಳಲಾಗುವುದು. ಇವೆಲ್ಲ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ತಾತ್ಕಾಲಿಕ ಕ್ರಮಗಳಾಗಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಪ್ರೀಂಕೋರ್ಟ್‌ ಆಯೋಗಕ್ಕೆ ನಿರ್ದೇಶಿಸಿದೆ.
 

Follow Us:
Download App:
  • android
  • ios