ನವದೆಹಲಿ[ಅ.15]: ಬಾಹ್ಯ ವಾಯುಮಾಲಿನ್ಯದ ಅಪಾಯಕಾರಿ ಮಟ್ಟದಿಂದಾಗಿ 2016ರಲ್ಲಿ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಅಕಾಲಿಕ ಮರಣ ಹೊಂದಿದ್ದಾರೆ. ಅವರಲ್ಲಿ ಕಲ್ಲಿದ್ದಲು ಸುಡುವಿಕೆಯಿಂದ ಉಂಟಾಗುವ ರೋಗಗಳಿಗೆ ತುತ್ತಾಗಿ 97 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ವರದಿಯೊಂದು ತಿಳಿಸಿದೆ.

ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಮೇಲೆ ಲ್ಯಾನ್ಸೆಟ್‌ ಕೌಂಟ್‌ಡೌನ್‌ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದ್ದು, ದೇಶವು ಕಲ್ಲಿದ್ದಲು ಆಧಾರಿತ ಶಕ್ತಿಯಿಂದ ವಿಮುಖವಾಗದಿದ್ದರೆ ಭಾರತದಲ್ಲಿ ವಾಯುಮಾಲಿನ್ಯದ ಪರಿಣಾಮವು ಭಾರೀ ಪ್ರಮಾಣದಲ್ಲಿ ಕಲುಷಿತಗೊಳ್ಳಲಿದೆ ಎಂಬ ಎಚ್ಚರಿಕೆ ಸಂದೇಶ ನೀಡಿದೆ.

ಗ್ಯಾಸ್‌ ಮೇಲೆ ಹಾಲಿಟ್ಟು ಮಲಗಿದ ದಂಪತಿ, ನಿದ್ರಾಸ್ಥಿತಿಯಲ್ಲೇ ಸಾವು..!

ದೇಶದಲ್ಲಿ 2016 ರಿಂದ 2018ರವರೆಗೆ ಕಲ್ಲಿದ್ದಲು ಬಳಕೆಯು ಶೇ.11 ರಷ್ಟುಏರಿಕೆ ಕಂಡಿದೆ. ಬಾಹ್ಯ ವಾಯುವಿನಲ್ಲಿ ಅಪಾಯಕಾರಿ ಸೂಕ್ಷ್ಮ ಕಣಗಳ ಸೇರ್ಪಡೆಯಿಂದ 2016 ರಲ್ಲಿ 5.29 ಲಕ್ಷ ಜನರು ನಾನಾ ರೋಗಗಳಿಂದ ಅಕಾಲಿಕ ಮರಣ ಹೊಂದಿದ್ದಾರೆ.

ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕಲ್ಲಿದ್ದಲು ಸುಡುವಿಕೆಯನ್ನು ಹಂತಹಂತವಾಗಿ ನಿರ್ಮೂಲನೆ ಮಾಡುವುದು ಅತ್ಯಗತ್ಯ ಎಂಬುದು ವರದಿಯ ಸಾರ.

ಬೆಳೆ ತ್ಯಾಜ್ಯ ಸುಡುವಿಕೆ ಏರಿಕೆ: ದಿಲ್ಲಿ ಮಾಲಿನ್ಯ ಮತ್ತೆ ಗಂಭೀರ