ನವದೆಹಲಿ(ಜ.08): ಭಾರತದಲ್ಲಿ ವಾಯು ಮಾಲಿನ್ಯಕ್ಕೆ ತುತ್ತಾಗುವ ಗರ್ಭಿಣಿಯರಲ್ಲಿ ಗರ್ಭಪಾತ ಹಾಗೂ ಅವಧಿ ಪೂರ್ವ ಹೆರಿಗೆ ಆಗುವ ಅಪಾಯ ಅಧಿಕವಾಗಿದೆ. ಪ್ರತಿ ವರ್ಷ 3 ಲಕ್ಷಕ್ಕೂ ಅಧಿಕ ಮಹಿಳೆಯರು ಗರ್ಭಪಾತಕ್ಕೆ ಕಾರಣವಾಗುತ್ತಿದೆ ಎಂದು ಮಾದರಿ ಅಧ್ಯಯನ ವರದಿಯೊಂದು ತಿಳಿಸಿದೆ.

ಲಾನ್ಸೆಟ್‌ ಪ್ಲಾನೆಟರಿ ಹೆಲ್ತ್‌ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ ಮಾಲಿನ್ಯಕಾರಕ ಪಿಎಂ 2.5 ಸೂಕ್ಷ್ಮ ಕಣಗಳಿಗೆ ತೆರೆದುಕೊಳ್ಳುವ ಕಾರಣ ಪ್ರತಿ ವರ್ಷ 349,681 ಗರ್ಭಪಾತಗಳು ಸಂಭವಿಸುತ್ತಿವೆ.

ಸಂಸದರನ್ನು ಹುಡುಕಿ ಹೊಡೆಯಲು ಹೋದ ಟ್ರಂಪ್ ಸೇನೆ..!

ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾನದಂಡದ ಪ್ರಕಾರ, ಗಾಳಿಯಲ್ಲಿ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಪ್ರಮಾಣ ಪ್ರತಿ ಕ್ಯೂಬಿಕ್‌ ಮೀಟರ್‌ಗೆ 10 ಮೈಕ್ರೋಗ್ರಾಮ್‌ಗಿಂತ ಅಧಿವಾಗಿದ್ದರೆ ಅದು ಗರ್ಭಿಣಿಯರಿಗೆ ಅಪಾಯ. ಆದರೆ, ಭಾರತದಲ್ಲಿ ಈ ಪ್ರಮಾಣ ಪ್ರತಿ ಕ್ಯೂಬಿಕ್‌ ಮಿಟರ್‌ಗೆ 40 ಮೈಕ್ರೋಗ್ರಾಮ್‌ನಷ್ಟುಇದೆ ಎಂದು ವರದಿ ತಿಳಿಸಿದೆ.

WHO ವಾಯು ಗುಣಮಟ್ಟದ ಮಾರ್ಗಸೂಚಿಗಿಂತ ಹೆಚ್ಚಿನ ವಾಯುಮಾಲಿನ್ಯದಿಂದ ಶೇಕಡಾ 29ರಷ್ಟು ಗರ್ಭಪಾತ ಕಾರಣವಾಗಬಹುದು ಎಂದು ಅಧ್ಯಯನ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ಉತ್ತರ ಬಯಲು ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಗರ್ಭಧಾರಣೆಯ ನಷ್ಟ ಹೆಚ್ಚಾಗಿ ಸಂಭವಿಸುತ್ತಿದೆ ಎಂದು ಸಂಶೋಧಕರು ಗಮನಿಸಿದ್ದಾರೆ.