ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ಪತದಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ನಿಧನರಾಗಿದ್ದಾರೆ. ಆದರೆ ಒರ್ವ ಪ್ರಯಾಣಿಕ ಪವಾಡ ಸದಶ್ಯವಾಗಿ ಪಾರಾಗಿದ್ದಾರೆ.
ಅಹಮ್ಮದಾಬಾದ್(ಜೂ.12) ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿದೆ. ವಿಮಾನದ ಪ್ರಯಾಣಿಕರ ಜೊತೆಗೆ ಜನ ನಿಬಿಡಿ ಪ್ರದೇಶದ ಮೇಲೆ ಪತನಗೊಂಡಿರುವ ಕಾರಣ ಸಾವು ನೋವು ಹೆಚ್ಚಾಗಿದೆ. 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತದಲ್ಲಿ 241 ಮಂದಿ ಮೃತಪಟ್ಟಿದ್ದಾರೆ. ಆದರೆ ಓರ್ವ ಬದುಕುಳಿದಿದ್ದಾನೆ. 11ಎ ಸೀಟಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ರಮೇಶ್ ವಿಶ್ವಾಸಕುಮಾರ್ ಪ್ರಯಾಣಿಕ ಪವಾಡ ಸದಶ್ಯ ಪಾರಾಗಿದ್ದಾನೆ.
ವಿಮಾನ ಪತನಗೊಂಡ ಬೆನ್ನಲ್ಲೇ ತಾನು ಕುಳಿತಿದ್ದ ಭಾಗ ಹೆಚ್ಚಿನ ಹಾನಿಯಾಗಿರಲಿಲ್ಲ. ಈ ವೇಳೆ ಎಮರ್ಜೆನ್ಸಿ ಬಾಗಿಲ ಮೂಲಕ ರಮೇಶ್ ವಿಶ್ವಾಸಕುಮಾರ್ ಪಾರಾಗಿದ್ದಾನೆ. ಇದೇ ವೇಳೆ ವಿಮಾನದಲ್ಲಿದ್ದ ಭಾರಿ ಇಂಧನ ಕಾರಣ ಸ್ಫೋಟ ಸಂಭವಿಸಿದೆ. ಬೆಂಕಿಯ ಕೆನ್ನಾಲಗಿ, ಅಪಘಾತದ ನಡುವೆ ರಮೇಶ್ ವಿಶ್ವಾಸಕುಮಾರ್ ಪಾರಾಗಿದ್ದಾನೆ. ಸಣ್ಣ ಪುಟ್ಟ ಗಾಯಗೊಳಿಂದಿಗೆ ಪಾರಾಗಿರುವ ರಮೇಶ್ ವಿಶ್ವಾಸಕಮಾರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ಪ್ರಯಾಣಿಕ ಬುದುಕಿಳಿದಿರುವ ಬಗ್ಗೆ ಅಹಮ್ಮದಾಬಾದ್ ಪೊಲೀಸರು ಮಾಹಿತಿ ನೀಡಿದ್ದರೆ. ಇದೇ ವೇಳೆ ಎಷ್ಟು ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಅನ್ನೋದು ಖಚಿತವಾಗಿಲ್ಲ ಎಂದಿದ್ದಾರೆ.
ಮಾಜಿ ಸಿಎಂ ರೂಪಾನಿ ಸೇರಿ 241 ಪ್ರಯಾಣಿಕರು ಮೃತ
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಪ್ರಯಾಣಿಕರು ಈ ದುರಂತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಓರ್ವ ಪ್ರಯಾಣಿಕ ರಮೇಶ್ ವಿಶ್ವಾಸಕುಮಾರ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಹಾಸ್ಟೆಲ್ ಮೇಲೆ ಪತನ ಕಾರಣದಿಂದ ವಿದ್ಯಾರ್ಥಿಗಳ ಸಾವು
ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡ ಕಾರಣ ಹಲವು ವಿದ್ಯಾರ್ಥಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಊಟ ಮಾಡುತ್ತಿರುವ ವೇಳೆ ವಿಮಾನ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಇನ್ನು ವಿಮಾನ ಪತನದ ಬೆನ್ನಲ್ಲೇ ಸ್ಫೋಟಗೊಂಡ ಕಾರಣ ಹತ್ತಿರದ ಕಟ್ಟಡಗಳಿಗೂ ವ್ಯಾಪಿಸಿದೆ. ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
