ನವದೆಹಲಿ(ಡಿ.04): ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಏರ್‌ ಇಂಡಿಯಾವನ್ನು ಅದರ ನೌಕರರೇ ಖರೀದಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಏರ್‌ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದನ್ನು ಖರೀದಿಸಲು ಸಂಸ್ಥೆಯ ನೌಕರರು ತಮ್ಮದೇ ಗುಂಪು ರಚನೆ ಮಾಡಿಕೊಂಡಿದ್ದಾರೆ.

ನೌಕರರ ಗುಂಪಿನ ಪ್ರತಿ ಸದಸ್ಯರೂ ತಲಾ 1 ಲಕ್ಷ ರು. ನೀಡಿ ಏರ್‌ ಇಂಡಿಯಾದ ಒಟ್ಟು ಶೇ.51ರಷ್ಟು ಒಡೆತನ ಹೊಂದಲು ಯೋಜನೆ ರೂಪಿಸಿದ್ದಾರೆ. ಇನ್ನುಳಿದ ಶೇ.49ರಷ್ಟು ಷೇರು ಬಂಡವಾಳವನ್ನು ಖಾಸಗಿ ಹೂಡಿಕೆದಾರರಿಂದ ಆಹ್ವಾನಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಏರ್‌ ಇಂಡಿಯಾವನ್ನು ಹುಟ್ಟುಹಾಕಿದ್ದ ಟಾಟಾ ಸಮೂಹ ಕೂಡ ಈಗ ಮತ್ತೆ ಸರ್ಕಾರದಿಂದ ಈ ಸಂಸ್ಥೆಯನ್ನು ಖರೀದಿಸಲು ಬಿಡ್‌ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಏರ್ ಇಂಡಿಯಾ ವಿಮಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಾಂಗ್ ಕಾಂಗ್ ಸರ್ಕಾರ!

ಬಿಡ್‌ ಸಲ್ಲಿಸಲು ಡಿ.14 ಕೊನೆಯ ದಿನವಾಗಿದ್ದು, ಡಿ.28ರೊಳಗೆ ಅಂತಿಮಗೊಳ್ಳಬೇಕಿದೆ. ಒಟ್ಟು 90 ಸಾವಿರ ಕೋಟಿ ರು. ಸಾಲ ಹಾಗೂ ನಷ್ಟದಲ್ಲಿರುವ ಏರ್‌ ಇಂಡಿಯಾವನ್ನು ಮಾರಾಟ ಮಾಡಲು ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರ ನಡೆಸಿದ ಯತ್ನ ವಿಫಲವಾಗಿದೆ.