ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಹಿಂದೂ ಮತ್ತು ಸಿಖ್ ಪ್ರಯಾಣಿಕರಿಗೆ 'ಹಲಾಲ್' ಪ್ರಮಾಣೀಕೃತ ಆಹಾರವನ್ನು ಇನ್ನು ಮುಂದೆ ನೀಡುವುದಿಲ್ಲ.

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಮುಂದಿನ ದಿನಗಳಲ್ಲಿ ಹಿಂದೂ ಮತ್ತು ಸಿಖ್ ಸಮುದಾಯದ ಪ್ರಯಾಣಿಕರಿಗೆ 'ಹಲಾಲ್' ಪ್ರಮಾಣಕೃತ ಆಹಾರ ವಿತರಣೆ ಮಾಡುವುದಿಲ್ಲ ಎಂದು ಹೇಳಿದೆ. ಇದೇ ವರ್ಷದ ಜೂನ್ 17ರಂದು ವಿರುದುನಗರದ ಕಾಂಗ್ರೆಸ್ ಸಂಸದ ಮಣಿಕಂ ಟ್ಯಾಗೋರ್ , ಏರ್ ಇಂಡಿಯಾದಲ್ಲಿ ಧರ್ಮದ ಆಧಾರದ ಮೇಲೆ ಊಟವನ್ನು ಲೇಬಲ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಏರ್ ಇಂಡಿಯಾ ವೆಬ್‌ಸೈಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಸಂಸದರು “ಹಿಂದೂ” ಅಥವಾ “ಮುಸ್ಲಿಂ” ಊಟ ಎಂದರೇನು ಎಂದು ಖಾರವಾಗಿ ಪ್ರಶ್ನಿಸಿದ್ದರು. ನಾಗರಿಕ ವಿಮಾನಯಾನ ಸಚಿವಾಲಯದಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ನಾಯಕ, “ಸಂಘಿಗಳು ಏರ್ ಇಂಡಿಯಾವನ್ನು ವಶಪಡಿಸಿಕೊಂಡಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದ್ದರು.

Scroll to load tweet…
Scroll to load tweet…