ಜೂನ್ 12 ರಂದು, AI171 ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿತ್ತು. ಆದರೆ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವು ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು, ಒಬ್ಬ ಪ್ರಯಾಣಿಕರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದರು. 

ನವದೆಹಲಿ (ಜು.12): ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯ ಪ್ರಾಥಮಿಕ ವರದಿಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ ಬಿಡುಗಡೆ ಮಾಡಿದೆ, ಇದರಲ್ಲಿ ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿದರು ಮತ್ತು ಒಬ್ಬರು ಮಾತ್ರ ಬದುಕುಳಿದರು. ಜೂನ್ 12 ರಂದು, AI171 ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿತ್ತು. ಆದರೆ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು, ಒಬ್ಬ ಪ್ರಯಾಣಿಕರನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದರು. ವಿಮಾನವು ವಿಮಾನ ನಿಲ್ದಾಣದ ಸಮೀಪವಿರುವ ಕಟ್ಟಡಕ್ಕೆ ಅಪ್ಪಳಿಸಿತು ಮತ್ತು ಈ ಘಟನೆಯಲ್ಲಿ ಒಟ್ಟು 260 ಜನರು ಸಾವನ್ನಪ್ಪಿದರು, ಇದು ಇತ್ತೀಚಿನ ಇತಿಹಾಸದಲ್ಲಿ ಭಾರತದ ಅತ್ಯಂತ ಮಾರಕ ವಿಮಾನ ಅಪಘಾತಗಳಲ್ಲಿ ಒಂದಾಗಿದೆ.

AAIB 15 ಪುಟಗಳ ವರದಿಯ ಪ್ರಮುಖ ಅಂಶಗಳು ಇಲ್ಲಿವೆ

  1. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಎಂಜಿನ್‌ಗಳು ಆಗಸದಲ್ಲಿಯೇ ಸ್ಥಗಿತಗೊಂಡವು. ಇಂಧನ ಕಟ್ಆಫ್ ಸ್ವಿಚ್‌ಗಳು RUN ನಿಂದ CUTOFF ಗೆ ಒಂದರ ನಂತರ ಒಂದರಂತೆ ಆಫ್‌ ಆದವು. ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತಗೊಂಡಿದೆ ಎಂದು ವರದಿ ಬಹಿರಂಗಪಡಿಸಿದೆ.
  2. ಕಾಕ್‌ಪಿಟ್ ಆಡಿಯೋ ಒಬ್ಬ ಪೈಲಟ್ "ನೀವು ಏಕೆ ಕಟ್‌ಆಫ್‌ ಮಾಡೀದ್ದೀರಿ?" ಎಂದು ಕೇಳಿದ್ದು ಇದನ್ನು ದೃಢಪಡಿಸಿದೆ. ಇನ್ನೊಬ್ಬ ಪೈಲಟ್ "ನಾನು ಮಾಡಲಿಲ್ಲ" ಎಂದು ಉತ್ತರಿಸಿದರು.
  3. ಎಂಜಿನ್‌ಗಳು ಶಕ್ತಿಯನ್ನು ಕಳೆದುಕೊಂಡಾಗ, ಸಣ್ಣ ಪ್ರೊಪೆಲ್ಲರ್ ತರಹದ ಸಾಧನವಾದ ರಾಮ್ ಏರ್ ಟರ್ಬೈನ್. ತುರ್ತು ಹೈಡ್ರಾಲಿಕ್ ಶಕ್ತಿಯನ್ನು ಒದಗಿಸಲು ಸ್ವಯಂಚಾಲಿತವಾಗಿ ನಿಯೋಜಿಸಲಾಯಿತು. AAIB ಪಡೆದ ಸಿಸಿಟಿವಿ ದೃಶ್ಯಾವಳಿಗಳು RAT ಅನ್ನು ಏರ್‌ಪೋರ್ಟ್‌ನಿಂದ ವಿಮಾನ ಹಾರುವಾಗಲೇ ನಿಯೋಜಿಸಲಾಗಿರುವುದನ್ನು ತೋರಿಸಿದೆ.
  4. ಪೈಲಟ್‌ಗಳು ಎಂಜಿನ್ ಅನ್ನು ಮರುಪ್ರಾರಂಭಿಸಲು ಪ್ರಯತ್ನ ಮಾಡಿದ್ದಾರೆ. N1 ಅಥವಾ ಎಂಜಿನ್ 1 ಅನ್ನು ಭಾಗಶಃ ರಿಕವರ್‌ ಮಾಡಲಾಗಿತ್ತು, ಆದರೆ ಎಂಜಿನ್ 2 ಡಿಕ್ಕಿಯ ಮೊದಲು ರಿಕವರ್‌ ಆಗಲು ವಿಫಲವಾಯಿತು. ವಿಮಾನವು ಕೇವಲ 32 ಸೆಕೆಂಡುಗಳ ಕಾಲ ಹಾರಾಟ ನಡೆಸಿತ್ತು. ರನ್‌ವೇಯಿಂದ 0.9 NM ದೂರದಲ್ಲಿ ಹಾಸ್ಟೆಲ್‌ಗೆ ಅಪ್ಪಳಿಸಿತು.
  5. ಥ್ರಸ್ಟ್ ಲಿವರ್‌ಗಳು ನಿಷ್ಕ್ರಿಯವಾಗಿ ಕಂಡುಬಂದಿವೆ, ಆದರೆ ಬ್ಲ್ಯಾಕ್‌ ಬಾಕ್ಸ್‌ ಟೇಕ್‌ಆಫ್ ಥ್ರಸ್ಟ್ ಇನ್ನೂ ತೊಡಗಿಸಿಕೊಂಡಿದೆ ಎಂದು ತೋರಿಸುತ್ತದೆ, ಇದು ಸಂಪರ್ಕ ಕಡಿತ/ವೈಫಲ್ಯವನ್ನು ಸೂಚಿಸುತ್ತದೆ.
  6. ಇಂಧನ ಸಂಪೂರ್ಣ ಪರೀಕ್ಷಿಸಲಾಗಿದೆ ಮತ್ತು ಇಂಧನ ತುಂಬುವ ಮೂಲಗಳಿಂದ ಯಾವುದೇ ಮಾಲಿನ್ಯವಿರಲಿಲ್ಲ.
  7. ಟೇಕ್ ಆಫ್‌ಗೆ ಫ್ಲಾಪ್ ಸೆಟ್ಟಿಂಗ್ (5 ಡಿಗ್ರಿ) ಮತ್ತು ಗೇರ್ (ಕೆಳಗೆ) ಸಾಮಾನ್ಯವಾಗಿದ್ದವು. ಯಾವುದೇ ಪಕ್ಷಿ ಢಿಕ್ಕಿ ಚಟುವಟಿಕೆ ಅಥವಾ ಹವಾಮಾನ ಸಮಸ್ಯೆಗಳಿದ್ದಿರಲಿಲ್ಲ. ಸ್ಪಷ್ಟ ಆಕಾಶ, ಉತ್ತಮ ಗೋಚರತೆ, ಹಗುರವಾದ ಗಾಳಿ ಇದ್ದವು.
  8. ಪೈಲಟ್‌ಗಳ ಅರ್ಹತೆಗಳು ಸ್ಪಷ್ಟವಾಗಿವೆ ಮತ್ತು ಇಬ್ಬರೂ ವೈದ್ಯಕೀಯವಾಗಿ ಸದೃಢರಾಗಿದ್ದಾರೆ ಮತ್ತು ಹಾರಾಟಕ್ಕೂ ಮುನ್ನ ಅಗತ್ಯ ವಿಶ್ರಾಂತಿ ಪಡೆದಿದ್ದರು. ಈ ವಿಮಾನ ಹಾರಾಟದ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು AAIB ವರದಿ ಹೇಳಿದೆ.
  9. ಯಾವುದೇ ತಕ್ಷಣದ ವಿಧ್ವಂಸಕ ಪುರಾವೆಗಳು ದೊರೆತಿಲ್ಲ., ಆದರೆ ಸಂಭಾವ್ಯ ಇಂಧನ ಸ್ವಿಚ್ ದೋಷದ ಬಗ್ಗೆ FAA ಸಲಹೆ ಈಗಾಗಲೇ ಅಸ್ತಿತ್ವದಲ್ಲಿದೆ. ಏರ್ ಇಂಡಿಯಾ ಈ ಬಗ್ಗೆ ತಪಾಸಣೆಗಳನ್ನು ಮಾಡಲಿಲ್ಲ. ವಿಮಾನವು ತೂಕ ಮತ್ತು ಸಮತೋಲನ ಮಿತಿಯೊಳಗೆ ಇತ್ತು - ವಿಮಾನದಲ್ಲಿ ಯಾವುದೇ ಅಪಾಯಕಾರಿ ಸರಕುಗಳಿಲ್ಲ.