ಹವಾಯಿ(ಡಿ.05): ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಸಿಂಗ್ ಬದೌರಿಯಾ ಭೇಟಿ ನೀಡಿದ್ದ ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ.

ಬದೌರಿಯಾ ಭೇಟಿ ನೀಡಿದ್ದ ಹವಾಯಿ ಪರ್ಲ್ ಹಾರ್ಬರ್ ನೌಕಾನೆಲೆಯ ಬಳಿ, ಅಮೆರಿಕ ನೌಕಾಪಡೆಯ ಯೋಧನೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ ಮೂವರು ಅಮೆರಿಕನ್ ಯೋಧರು ಗಂಭಿರವಾಗಿ ಗಾಯಗೊಂಡಿದ್ದಾರೆ.

ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!

ಗುಂಡಿನ ದಾಳಿ ನಡೆದ ಬೇಳೆ ಬದೌರಿಯಾ ಕೂಡ ನೌಕಾನೆಲೆಯಲ್ಲಿಯೇ ಇದ್ದು, ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಾಯುಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಇಂಡೋ-ಪೆಸಿಫಿಕ್ ಭಾಗದ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚಿಸಲು, ಪ್ರಮುಖ ದೇಶಗಳ ವಾಯುಸೇನೆಯ ಮುಖ್ಯಸ್ಥರು ಹವಾಯಿ ಸೇನಾ ನೆಲೆಯಲ್ಲಿ ಬೀಡು ಬಿಟ್ಟಿದ್ದಾರೆ.