Asianet Suvarna News Asianet Suvarna News

ಮನೆಗೊಂದು ಸರ್ಕಾರಿ ಉದ್ಯೋಗ, ವಾಷಿಂಗ್‌ ಮಷಿನ್‌, ಉಚಿತ ಮನೆ: ಭರ್ಜರಿ ಭರವಸೆ!

ಮನೆಗೊಂದು ಸರ್ಕಾರಿ ಉದ್ಯೋಗ, ಷಿಂಗ್‌ ಮಷಿನ್‌, ಉಚಿತ ಮನೆ| ಭರ್ಜರಿ ಭರವಸೆಗಳ ಪ್ರಣಾಳಿಕೆ ಬಿಡುಗಡೆ| ವರ್ಷಕ್ಕೆ 6 ಎಲ್‌ಪಿಜಿ ಉಚಿತ, ಪೆಟ್ರೋಲ್‌ ಬೆಲೆ ಇಳಿಕೆ| ಬಿಪಿಎಲ್‌ ಕುಟುಂಬಕ್ಕೆ ಉಚಿತ ವಾಷಿಂಗ್‌ ಮಶಿನ್‌| ಮನೆಯ ಮಹಿಳಾ ಯಜಮಾನರಿಗೆ 1500 ರು. ಮಾಸಿಕ ಗೌರವಧನ

AIADMK manifesto promises govt job to one member of every household free houses for homeless pod
Author
Bangalore, First Published Mar 15, 2021, 7:52 AM IST

ಚೆನ್ನೈ(ಮಾ.15): ತಮಿಳುನಾಡಿನ ಆಡಳಿತಾರೂಢ ಅಣ್ಣಾ ಡಿಎಂಕೆ ಭಾನುವಾರ ಪ್ರಣಾಳಿಕೆ ಘೋಷಿಸಿದ್ದು, ಪ್ರತಿಪಕ್ಷ ಡಿಎಂಕೆಗೆ ಸಡ್ಡು ಹೊಡೆಯುವ ರೀತಿಯ ಭರವಸೆಗಳನ್ನು ನೀಡಿದೆ. ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ, ಮನೆರಹಿತರಿಗೆ ಉಚಿತ ಮನೆ, ಶೈಕ್ಷಣಿಕ ಸಾಲ ಮನ್ನಾ, ಪೆಟ್ರೋಲ್‌-ಡೀಸೆಲ್‌ ದರ ಇಳಿಕೆ, ಮನೆಯ ಮಹಿಳಾ ಯಜಮಾನರಿಗೆ 1500 ರು. ಗೌರವಧನ, ವರ್ಷಕ್ಕೆ 6 ಎಲ್‌ಪಿಜಿ ಉಚಿತ, ಬಿಪಿಎಲ್‌ ಕಾರ್ಡುದಾರರಿಗೆ ಉಚಿತ ವಾಷಿಂಗ ಮಶಿನ್‌- ಇವು ಪ್ರಮುಖ ಆಕರ್ಷಕ ಭರವಸೆಗಳು.

ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ, ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಪ್ರಮುಖ ಭರವಸೆಗಳು

- ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ

- ಅಮ್ಮ ಗೃಹ ನಿರ್ಮಾಣ ಯೋಜನೆಯಡಿ ಈಗ ಮನೆ ಇರದವರಿಗೆ ಉಚಿತ ಮನೆ

- ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಉಚಿತ ವಾಷಿಂಗ್‌ ಮಶಿನ್‌, ಸೌರ ಒಲೆ

- ಎಲ್ಲ ಮನೆಗಳಿಗೆ ಉಚಿತ ಕೇಬಲ್‌ ಟೀವಿ ಸೇವೆ

- ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ

- ವಿದ್ಯಾರ್ಥಿಗಳಿಗೆ ಇಡೀ ವರ್ಷ 2 ಜಿಬಿ ಡೇಟಾ ಉಚಿತ

- ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ

- 2 ತಿಂಗಳ ಬದಲು ಪ್ರತಿ ತಿಂಗಳ ವಿದ್ಯುತ್‌ ಬಿಲ್‌

- ಟಾಸ್ಮಾ್ಯಕ್‌ ಮದ್ಯದ ಅಂಗಡಿ ಹಂತ ಹಂತವಾಗಿ ಬಂದ್‌

- ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರಿಗೆ

- ವರ್ಷಕ್ಕೆ 6 ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ

- ಪ್ರತಿ ಮನೆಯ ಮಹಿಳಾ ಯಜಮಾನಳಿಗೆ 1500 ರು. ವೇತನ

- ಹಸಿರು ಆಟೋರಿಕ್ಷಾ ಖರೀದಿಸಿದರೆ ಆಟೋ ಚಾಲಕರಿಗೆ 25 ಸಾವಿರ ರು. ಸಬ್ಸಿಡಿ

Follow Us:
Download App:
  • android
  • ios