Asianet Suvarna News Asianet Suvarna News

ಮೇಕೆದಾಟು ಯೋಜನೆಗೆ ಅವಕಾಶ ಬೇಡ: ಮೋದಿಗೆ ಅಣ್ಣಾ ಡಿಎಂಕೆ ಮನವಿ!

* ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆ

* ಮೇಕೆದಾಟು ಯೋಜನೆಗೆ ಅವಕಾಶ ಬೇಡ: ಮೋದಿಗೆ ಅಣ್ಣಾ ಡಿಎಂಕೆ ಮನವಿ

* ಹಿರಿಯ ನಾಯಕರಾದ ಒ. ಪನ್ನೀರ್‌ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯ ನಿಯೋಗ ಮೋದಿ ಭೇಟಿ

AIADMK Delegation Meets PM Modi Urges To Not Allow Mekedatu Dam Project pod
Author
Bangalore, First Published Jul 27, 2021, 7:20 AM IST

ನವದೆಹಲಿ/ಚೆನ್ನೈ(ಜು.27): ಬೆಂಗಳೂರು ಸೇರಿ ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆ ಆರಂಭಿಸುವ ಕರ್ನಾಟಕ ಸರ್ಕಾರಕ್ಕೆ ಸಹಕಾರ ನೀಡದಂತೆ ಎಐಎಡಿಎಂಕೆ ಪಕ್ಷ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಎಐಎಡಿಎಂಕೆ ಹಿರಿಯ ನಾಯಕರಾದ ಒ. ಪನ್ನೀರ್‌ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಪಳನಿಸ್ವಾಮಿ, ತಮಿಳುನಾಡಿನ ಕೃಷಿ ಮತ್ತು 16 ಜಿಲ್ಲೆಗಳು ಕುಡಿಯುವ ನೀರಿಗಾಗಿ ಕಾವೇರಿ ನದಿಯನ್ನೇ ಅವಲಂಬಿಸಿವೆ. ಹೀಗಾಗಿ ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರಲಾಗಿದೆ ಎಂದರು.

ಒಂದು ವೇಳೆ ಅನುಮತಿ ನೀಡಿದರೆ ಕಾವೇರಿ ಭಾಗದಲ್ಲಿರುವ ರಾಜ್ಯದ ಜಿಲ್ಲೆಗಳು ಮರುಭೂಮಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

Follow Us:
Download App:
  • android
  • ios