ನಿರ್ಮಾ, ಪಾರ್ಲೇಜಿ, ಸ್ಟಾರ್‌ಬಕ್ಸ್ ಸೇರಿದಂತೆ ಕೆಲ ಜನಪ್ರಿಯ ಬ್ರ್ಯಾಂಡ್ ಲೋಗೋ ರಿಯಲ್ ಲೈಫ್‌ನಲ್ಲಿ ಇದ್ದರೆ ಹೇಗಿರುತ್ತಿತ್ತು? ಈ ಭಿನ್ನ ಆಲೋಚನೆಯನ್ನು ಎಐ ಮೂಲಕ ಸಾಕಾರಗೊಳಿಸಲಾಗಿದೆ. ಲೋಗೋ ರಿಯಾಲಿಟಿ ಆಗಿದ್ದರೆ ಹೇಗಿರುತ್ತೆ, ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.

ವಾಶಿಂಗ್ ಪೌಡರ್ ನಿರ್ಮಾ, ಪಾರ್ಲೆ ಜಿ, ಬೂಮರ್ ಸೇರಿದಂತೆ ಹಲವು ಐಕಾನಿಕ್ ಉತ್ಪನ್ನಗಳ ಲೋಗೋ ಎಲ್ಲರ ಮನಸ್ಸಿನಲ್ಲಿದೆ. ಆದರೆ ಈ ಲೋಗೋಗಳು ರಿಯಾಲಿಟಿಯಾಗಿದ್ದಾರೆ ಹೇಗಿರುತ್ತೆ? ಈ ಕುರಿತು ಎಐ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಕೆಲ ವಸ್ತುಗಳು ದೈನಂದಿನ ಬದುಕಿನಲ್ಲಿ ಜನರ ಅಚ್ಚು ಮೆಚ್ಚಿನ ಉತ್ಪನ್ನಗಳಾಗಿವೆ. ಹೀಗಾಗಿ ಈ ಉತ್ಪನ್ನಗಳ ಲೋಗೋ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಈ ಲೋಗೋ ರಿಯಾಲಿಟಿಯಲ್ಲಿದ್ದರೆ ಹೇಗಿರುತ್ತೆ? ಈ ರೀತಿಯ ಭಿನ್ನ ಆಲೋಚನೆಯನ್ನು ಎಐ ಮುಖಾಂತರ ಮಾಡಲಾಗಿದೆ. ಎಐ ಸೃಷ್ಟಿಸಿದ ಈ ಅದ್ಭುತ ವಿಡಿಯೋ ಹಲವರ ನೆನಪುಗಳನ್ನು ಮರುಕಳಿಸಿದೆ.

ನೀವು ಪಾರ್ಲೆಜಿ ಬಿಸ್ಕೆರ್ ಲೋಗೋ ನೋಡಿರುತ್ತೀರಿ. ಹಲವರಿಗೆ ಪಾರ್ಲೆಜಿ ಕೇವಲ ಬಿಸ್ಕೆಟ್ ಮಾತ್ರವಲ್ಲ, ಒಂದು ರೀತಿ ಇಮೋಶನ್. ಹೀಗೆ ವಾಶಿಂಗ್ ಪೌಡರ್ ನಿರ್ಮಾ, ಹಾಲಿನಂತ ಬಿಳುಪು ಹಾಡು ಹಾಗೂ ಜಾಹೀರಾತು ಈಗಲೂ ಜನಪ್ರಿಯ. ಇನ್ನೂ ಬೂಮರ್ ಬಬಲ್ ಗಮ್, ಅಮೂಲ್ ಬಟರ್, ಕ್ವಾಕರ್ ಬ್ರ್ಯಾಂಡ್ ಓಟ್ಸ್, ಜನಪ್ರಿಯ ಔಟ್‌ಲೆಟ್ ಸ್ಟಾರ್ ಬಕ್ಸ್ ಸೇರಿದಂತೆ ಅತೀ ಹೆಚ್ಚಿನವರು ಬಳಕೆ ಮಾಡಿರುವ ಉತ್ಪನ್ನಗಳ ಲೋಗೋ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ರಿಯಾಲಿಟಿಗೆ ತರಲಾಗಿದೆ.

ರೀಲ್ಸ್ ಮಾಡುವವರಿಗೆ ಯೂಟ್ಯೂಬ್‌ನಿಂದ ಗುಡ್ ನ್ಯೂಸ್, ಶಾರ್ಟ್ ವಿಡಿಯೋ ಕ್ರಿಯೇಶನ್‌ಗೆ AI ಫೀಚರ್!

ಬ್ರ್ಯಾಂಡ್ ಉತ್ಪನ್ನಗಳ ಲೋಗೋವನ್ನು ನಿಜ ಜೀವನದಲ್ಲಿದ್ದರೆ ಹೇಗಿರುತ್ತೆ? ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸಿ ವಿಡಿಯೋ ಮಾಡಲಾಗಿದೆ. ಇಲ್ಲಿ ನಿರ್ಮಾ ಹುಡುಗಿ ರಿಯಲ್ ಆಗಿ ಕಾಣಿಸುತ್ತಿದ್ದಾರೆ. ಇನ್ನು ಪಾರ್ಲೆಜಿ ಮಗು, ಅಸಲಿಯಾಗಿದ್ದರೇ ಹೇಗಿರುತ್ತಿತ್ತು ಅನ್ನೋದು ಎಐ ಮೂಲಕ ವಿಡಿಯೋ ಮಾಡಲಾಗಿದೆ. ಆಗಸದಲ್ಲಿ ಹಾರುವ ಸೂಪರ್‌ಮ್ಯಾನ್ ರೀತಿ ಇರುವ ಬೂಮರ್ ಬಬಲ್ ಗಮ್ ಲೋಗೋ ರಿಯಲ್ ಲೈಫ್‌‌ನಲ್ಲಿದ್ದರೆ ಹೇಗೆ ಅನ್ನೋದು ಎಐ ವಿಡಿಯೋ ಮಾಡಲಾಗಿದೆ.

View post on Instagram

ಲೇಜಿ ಡಿಸೈನರ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಾಸ್ಟಾಲಜಿ, ಅದ್ಭುತವಾಗಿದೆ ಎಂದಿದ್ದಾರೆ. ಹಳೆ ನೆನಪುಗಳನ್ನು ಮರು ಸೃಷ್ಟಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ವಿಡಿಯೋಗಳನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿರ್ಮಾಣ ಮಾಡಲಾಗಿದೆ. ಅತ್ಯಂತ ನಾಜೂಕಾಗಿ ಹಾಗೂ ನ್ಯಾಚ್ಯುರಲ್ ಆಗಿ ವಿಡಿಯೋ ಕ್ರಿಯೆಟ್ ಮಾಡಲಾಗಿದೆ. ಇತ್ತೀಚೆಗೆ ಎಐ ಬಳಕೆ ಹೆಚ್ಚಾಗುತ್ತಿರುವ ಕಾರಣ ಫೋಟೋ ಹಾಗೂ ವಿಡಿಯೋದಲ್ಲಿ ಅಸಲಿ ಯಾವುದು? ನಕಲಿ ಯಾವುದು ಅನ್ನೋದು ತೀವ್ರ ಗೊಂದಲಕ್ಕೀಡು ಮಾಡುತ್ತಿದೆ. ಇಷ್ಟೇ ಅಲ್ಲ ಕೆಲ ಡೀಪ್ ಫೇಕ್ ವಿಡಿಯೋಗಳ ವಿರುದ್ಧ ಪ್ರಕರಣ ದಾಖಲಾಗಿದೆ.

5000 ವರ್ಷಗಳ ಹಿಂದೆ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಹೇಗಿತ್ತು? AI ವಿಡಿಯೋ ನೋಡಿ ರೋಮಾಂಚನಗೊಂಡ ಜನರು