ಏರ್ ಇಂಡಿಯಾ ವಿಮಾನ ಪತನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. 242 ಮಂದಿ ಹೊತ್ತು ಪ್ರಯಾಣಿಸಿದ ವಿಮಾನ ಪತನಕ್ಕೂ ಕೆಲವೇ ಕ್ಷಣ ಮುನ್ನ ಪೈಲೆಟ್, ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಮೇಡೇ ಸಂದೇಶ ಕಳುಹಿಸಿದ್ದಾರೆ. ಪೈಲೆಟ್ ಕೊನೆಯದಾಗಿ ಕಳುಹಿಸಿದ ಮೇಡೇ ಸಂದೇಶವೇನು?

ಅಹಮ್ಮದಾಬಾದ್(ಜೂ.12) ಅಹಮ್ಮದಾಬಾದ್ ಲಂಡನ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. 242 ಮಂದಿ ಇದ್ದ ಈ ವಿಮಾನದ ಜನ ನಿಬಿಡ ಪ್ರದೇಶದಲ್ಲಿ ಪತನಗೊಂಡಿದೆ. ಕಟ್ಟಟದ ಮೇಲೆ ವಿಮಾನ ಪತನಗೊಂಡಿದೆ. ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ 242 ಮಂದಿ ಇದ್ದ ಈ ವಿಮಾನ ದುರಂತದಲ್ಲಿ ಇದೀಗ ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಪೈಲೆಟ್ ವಿಮಾನದಲ್ಲಿನ ತಾಂತ್ರಿಕ ದೋಷವಿರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಮೇಡೇ, ಮೇಡೇ ಎಂದು ತುರ್ತು ಸಂದೇಶ ರವಾನಿಸಿದ್ದಾರೆ. ಈ ಸಂದೇಶ ಕಂಟ್ರೋಲ್ ತಲುಪಿ ಪ್ರತಿಕ್ರಿಯಿಸುವುದೊಳಗೆ ವಿಮಾನಗೊಂಡಿದೆ. ಏನಿದು ಪೈಲೆಟ್ ಕಳುಹಿಸಿದ ಮೇಡೇ ಸಂದೇಶ?

ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಕಂಟ್ರೋಲ್‌ ರೂಂಗೆ ಬಂದಿತ್ತು ಮೇಡೇ ಸಂದೇಶ

ಏರ್ ಇಂಡಿಯಾ ಎ171 ವಿಮಾನ ಅಹಮ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಬೆನ್ನಲ್ಲೇ ಸಮಸ್ಯೆಗೆ ಸಿಲುಕಿಕೊಂಡಿದೆ. ಹೀಗಾಗಿ ಏರ್ ಇಂಡಿಯಾ ಕ್ಯಾಪ್ಟನ್ ಸುಮೀತ್ ಸಬರವಾಲ್ ಹಾಗೂ ಕ್ಲೈವ್ ಕುಂದರ್ ಮೇಡೇ ಸಂದೇಶ ರವಾನಿಸಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಈ ಮೇಡೇ ಸಂದೇಶ ಕಳುಹಿಸಿದ್ದಾರೆ. ರೇಡಿಯೋ ಟೆಲಿಕಮ್ಯೂನಿಕೇಶನ್ ಮೂಲಕ ಸಂದೇಶ ರವಾನಿಸಲಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಂ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಅಷ್ಟರೊಳಗೆ ವಿಮಾನ ಪತನಗೊಂಡಿದೆ.

ಏನಿದು ಮೇಡೇ ಸಂದೇಶ

ಮೇಡೇ ತುರ್ತು ಸಂದರ್ಭದಲ್ಲಿ ಬಳಸುವ ಸಂದೇಶವಾಗಿದೆ. ಪ್ರಮುಖವಾಗಿ ವಿಮಾನ ಹಾಗೂ ಹಡಗಿನಲ್ಲಿ ಈ ಸಂದೇಶ ಬಳಸಲಾಗುತ್ತದೆ. ಇದು ಅತೀವ ತುರ್ತು ಸಂದರ್ಭ ಅಥವಾ ಪರಸ್ಥಿತಿ ಕೈಮೀರಿದಾಗ ಬಳಸವು ಸ್ಟಾಂಡರ್ಟ್ ಸಂದೇಶವಾಗಿದೆ. 1920ರಲ್ಲಿ ಈ ಪದ ಮೊದಲು ಬಳಕೆ ಮಾಡಲಾಗಿತ್ತು. ಮೇಡೇ ಎಂಬ ಸಂದೇಶ ಬಂದರೆ ಅತೀವ ತುರ್ತು ಪರಿಸ್ಥಿತಿ ಎಂಬುದು ಏರ್ ಟ್ರಾಫಿಕ್ ಕಂಟ್ರೋಲ್ ರೂಂ, ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅರ್ಥವಾಗಲಿದೆ. ಇಂಗ್ಲೆಂಡ್‌ನ ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿದ್ದ ಫೆಡ್ರಿಕ್ ಸ್ಟಾನ್ಲಿ ಮಾಕ್‌ಫ್ರಾಡ್ ಈ ಮೇಡೇ ಸಂದೇಶ ಪದವನ್ನು ಜಾರಿಗೆ ತಂದಿದ್ದಾರೆ. ಅತೀವ ತುರ್ತು ಸಂದರ್ಭದಲ್ಲಿ ಪೈಲೆಟ್‌ಗೆ ಸುಲಭವಾಗಿ ಸಂದೇಶ ರವಾನಿಸಲು ಹಾಗೂ ಎಲ್ಲರಿಗೂ ಪರಿಸ್ಥಿತಿಯ ಗಂಭೀರತ ಅರ್ಥವಾಗುವಂತೆ ಈ ಪದ ಬಳಸಲಾಗಿದೆ. ಆರಂಭದಲ್ಲಿ ಎಸ್ಒಎಸ್ ಎಂಬ ಸಂದೇಶ ಬಳಸಲಾಗಿತ್ತು. ಆದರೆ ಏರ್ ಟೆಲಿಕಮ್ಯೂನಿಕೇಶನ್‌ನಲ್ಲಿ ಎಸ್ ಪದ ಹೇಳುವುದು ಹಾಗೂ ಕೇಳಿಸಿಕೊಳ್ಳುವಾಗ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಹೀಗಾಗಿ ಸುಲಭವಾಗಿ ಹೇಳಲು ಸಾಧ್ಯವಾಗುವಂತೆ ಹಾಗೂ ರೇಡಿಯೋ ಟೆಲಿಕಮ್ಯೂನಿಕೇಶನ್‌ನಲ್ಲಿ ಕೇಳಿಸುವಾತನಿಗೂ ಸಿಗ್ನಲ್ ವೀಕ್ ಇದ್ದರೂ ಅರ್ಥವಾಗುವಂತಿರುವಂತೆ ಈ ಪದ ಬಳಸಲಾಗುತ್ತದೆ.

ಅಹಮ್ಮದಾಬಾದ್ ವಿಮಾನ ಪತನದಲ್ಲಿ ಸಿಬ್ಬಂದಿಗಳು ಸೇರಿದಂತೆ 242 ಮಂದಿ ಪ್ರಾಯಣಿಸುತ್ತಿದ್ದರು. ಈ ಪೈಕಿ 169 ಮದಂದಿ ಭಾರತೀಯರಾಗಿದ್ದಾರೆ. ಇನ್ನು53 ಬ್ರಿಟಿಷರು, 7 ಪೋರ್ಚುಗೀಸರು ಹಾಗೂ ಒಬ್ಬ ಕೆನಡಿಯನ್ ಪ್ರಜೆ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದೇ ವಿಮಾನ ವಿಮಾನಯದಲ್ಲಿ ಪ್ರಯಾಣಿಸುತ್ತಿದ್ದರು ಅನ್ನೋದು ಖಚಿತಗೊಂಡಿದೆ.

ವಿಮಾನ ಪತನದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ 110 ಮಂದಿ ಮೃತಪಟ್ಟಿದ್ದಾರೆ. ಸದ್ಯ ಅಹಮ್ಮದಾಬಾದ್ ವಿಮಾನ ನಿಲ್ದಾಣದನ ಸೇವೆ ಸ್ಥಗಿತಗೊಳಿಸಲಾಗಿದೆ. ಇತ್ತ ವಿಮಾನ ಪತನಗೊಂಡಿರುವ ಸ್ಥಳದಿಂದ ಆಸ್ಪತ್ರೆ ಸಾಗಿಸುವ ಮಾರ್ಗವನ್ನು ಸಿಗ್ನಲ್ ಫ್ರೀ ಮಾಡಲಾಗಿದೆ.