ಸುಂದರಕಾಂಡ ಪಾರಾಯಣದಲ್ಲಿ ಪಾಲ್ಗೊಂಡ ದೆಹಲಿ ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ!


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಅವರೊಂದಿಗೆ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಸುಂದರಕಾಂಡ ಪಾರಾಯಣದಲ್ಲಿ ಪಾಲ್ಗೊಂಡರು.
 

ahead of Ram temple consecration Delhi CM Arvind Kejriwal attends Sundar Kand recitation BJP slams san

ನವದೆಹಲಿ (ಜ.16): ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮಂಗಳವಾರ ದೆಹಲಿಯ ದೇವಸ್ಥಾನವೊಂದರಲ್ಲಿ ಆಮ್ ಆದ್ಮಿ ಪಕ್ಷ ಆಯೋಜಿಸಿದ್ದ ‘ಸುಂದರ್ ಕಂಡ್’ ಪಠಣದಲ್ಲಿ ಪಾಲ್ಗೊಂಡಿದ್ದರು. ಈ ಕುರಿತಾಗಿ ಭಾರತೀಯ ಜನತಾ ಪಕ್ಷ ಮಂಗಳವಾರ ವಾಗ್ದಾಳಿ ನಡೆಸಿದೆ. "ಸುಂದರ ಕಾಂಡ" ರಾಮಾಯಣದಲ್ಲಿ ಹನುಮಂತನಿಗೆ ಅರ್ಪಿತವಾದ ಅಧ್ಯಾಯಗಳಲ್ಲಿ ಒಂದಾಗಿದೆ. ವೀಡಿಯೊದಲ್ಲಿ ಕೆರ್ಜಿವಾಲ್ ಅವರು ತಮ್ಮ ಪತ್ನಿ ಸುನೀತಾ ಅವರೊಂದಿಗೆ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಸುಂದರಕಾಂಡ ಪಠಣ ಮಾಡುತ್ತಿರುವುದನ್ನು ತೋರಿಸಿದೆ. ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರದಿಂದ ‘ಸುಂದರ್ ಕಾಂಡ’ ಪಠಣ ಆರಂಭವಾಯಿತು.  ಪ್ರತಿ ಮಂಗಳವಾರ ವಲಯ ಮಟ್ಟದಲ್ಲಿ, ತಿಂಗಳ ಪ್ರತಿ ಎರಡನೇ ಮತ್ತು ಕೊನೆಯ ಮಂಗಳವಾರದಂದು ವಾರ್ಡ್ ಮಟ್ಟದಲ್ಲಿ ಮತ್ತು ತಿಂಗಳ ಮೊದಲ ಮಂಗಳವಾರದಂದು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಪಾರಾಯಣ ನಡೆಯಲಿದೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಘೋಷಿಸಿದ್ದರು.

ಭಾರತೀಯ ಜನತಾ ಪಕ್ಷವನ್ನು ಎದುರಿಸುವ ಪ್ರಯತ್ನದಲ್ಲಿ ಎಎಪಿ ತನ್ನ ಧಾರ್ಮಿಕ ಒಲವನ್ನು ಪ್ರತಿಪಾದಿಸುತ್ತಿರುವುದು ಇದು ಮೊದಲೇನಲ್ಲ.  ಕಳೆದ ವರ್ಷ ತಮ್ಮ ದಸರಾ ಭಾಷಣದಲ್ಲಿ, ಕೇಜ್ರಿವಾಲ್ ಅವರು ತಮ್ಮ ಪಕ್ಷಕ್ಕೆ ಭಗವಾನ್ ರಾಮನೇ ಆದರ್ಶ ಎಂದು ಹೇಳಿದ್ದರು ಮತ್ತು ದೆಹಲಿ ಸರ್ಕಾರವು "ರಾಮ ರಾಜ್ಯ" ದ ಆದರ್ಶಗಳಿಂದ ಸ್ಫೂರ್ತಿ ಪಡೆದು ಜನರ ಸೇವೆ ಮಾಡಲು ಪ್ರಯತ್ನಿಸುತ್ತಿದೆ ಎಂದಿದ್ದರು.

‘ರಾಜಕೀಯ ಬಲವಂತ’ ಎಂದು ಟೀಕಿಸಿದ ಬಿಜೆಪಿ: ಇನ್ನು ಅರವಿಂದ್‌ ಕೇಜ್ರಿವಾಲ್‌ ಅವರ ಸುಂದರಕಾಂಡ ಪಾರಾಯಣದ ಬಗ್ಗೆ ಬಿಜೆಪಿ ಟೀಕೆ ಮಾಡಿದ್ದು, ಇದು ರಾಜಕೀಯದ ಬಲವಂತ ಎಂದು ಹೇಳಿದೆ. 'ಇದೇ ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ಅಜ್ಜಿ ಅಯೋಧ್ಯೆಯಲ್ಲಿ ಇದ್ದಿದ್ದು ಮಸೀದಿ. ಅಲ್ಲಿ ರಾಮ ಮಂದಿರ ನಿರ್ಮಾಣವಾಗಬಾರದು ಎಂದು ಹೇಳಿದ್ದರು.  ಇದೇ ಕೇಜ್ರಿವಾಲ್ ಅವರ ಸರ್ಕಾರದ ಉಪ ಮುಖ್ಯಮಂತ್ರಿ ಆಗಿದ್ದ ಮನೀಶ್ ಸಿಸೋಡಿಯಾ ರಾಮಮಂದಿರ (ಅಯೋಧ್ಯೆಯಲ್ಲಿ) ನಿರ್ಮಾಣವನ್ನು ಪ್ರಶ್ನೆ ಮಾಡಿದ್ದರು. ಇಂದು ಸುಂದರ ಕಾಂಡ ಪಾರಾಯಣ ಆಯೋಜಿಸುವುದು ಅವರ ರಾಜಕೀಯ ಬಲವಂತವಾಗಿದೆ" ಎಂದು ಬಿಜೆಪಿ ನಾಯಕ ಆರ್‌ಪಿ ಸಿಂಗ್ ಟೀಕಿಸಿದ್ದಾರೆ.

ಶ್ರೀ ರಾಮಚಂದ್ರನಿಗೊಬ್ಬ ತಂಗಿ ಇದ್ದಳು, ಸೀತೆಯನ್ನು ವರಿಸಿದ್ದು ಎಷ್ಟನೇ ವಯಸ್ಸಲ್ಲಿ?

ಅರವಿಂದ್ ಕೇಜ್ರಿವಾಲ್ ಅವರು ಇಲ್ಲಿ ರಾಮಮಂದಿರ ನಿರ್ಮಾಣ ಮಾಡಬಾರದು ಎಂದು ಹೇಳಿದ್ದರು. ರಾಮಮಂದಿರದ ಪರವಾಗಿಲ್ಲದವರು ಇಂದು ಸುಂದರ್‌ಕಾಂಡ್ ಪಠಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

Ram Mandir Timeline: 500 ವರ್ಷ ಅಯೋಧ್ಯೆ ಕಂಡಿದ್ದೇನು? ಬಾಬ್ರಿ ಮಸೀದಿಯಿಂದ ರಾಮಮಂದಿರದವರೆಗಿನ ಇತಿಹಾಸ..

Latest Videos
Follow Us:
Download App:
  • android
  • ios