ಭೋಪಾಲ್‌(ಫೆ.27): ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯ ಪುತ್ಥಳಿ ಅನಾವರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾದ ಗ್ವಾಲಿಯರ್‌ ಮಹಾನಗರ ಪಾಲಿಕೆ ಸದಸ್ಯ ಬಾಬುಲಾಲ್‌ ಚೌರಾಸಿಯಾ ಕಾಂಗ್ರೆಸ್‌ ಸೇರ್ಪಡೆ ಆಗಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

6 ವರ್ಷದ ಹಿಂದೆ ಚೌರಾಸಿಯಾ ಕಾಂಗ್ರೆಸ್‌ ತ್ಯಜಿಸಿದ್ದರು. ಗುರುವಾರ ಅವರು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಸಮ್ಮುಖದಲ್ಲಿ ಪಕ್ಷಕ್ಕೆ ಮರುಸೇರ್ಪಡೆ ಆದರು. ಆದರೆ, ‘ಗೋಡ್ಸೆ ಹಿಂಬಾಲಕನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇಕೆ?’ ಎಂದು ಕೆಲವು ಕಾಂಗ್ರೆಸ್ಸಿಗರು ಪ್ರಶ್ನಿಸಿದ್ದಾರೆ.

‘ಮನಃಪರಿವರ್ತನೆ ಆಗಿದ್ದರೆ ಸೇರ್ಪಡೆ ತಪ್ಪಲ್ಲ’ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.