ವಿಧಾನಸಭೆ ಚುನಾವಣೆ ಉತ್ಸಾಹದಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್‌ಗೆ ಆಘಾತ ಕಾದಿದೆ. ಕಾಂಗ್ರೆಸ್ ಶಾಸಕರೊಬ್ಬರು ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಇದು ಸಂಚಲನ ಸೃಷ್ಟಿಸಿದೆ.
ಗ್ವಾಲಿಯರ್: ವಿಧಾನಸಭೆ ಚುನಾವಣೆ ಉತ್ಸಾಹದಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್‌ಗೆ ಆಘಾತ ಕಾದಿದೆ. ಕಾಂಗ್ರೆಸ್ ಶಾಸಕರೊಬ್ಬರು ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಇದು ಸಂಚಲನ ಸೃಷ್ಟಿಸಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಕಾಂಗ್ರೆಸ್ ಶಾಸಕ ಸುರೇಶ್ ರಾಜೆ ಎಂಬುವವರು ಅಪರಿಚಿತ ಪುರುಷನೊಂದಿಗೆ ಅಶ್ಲೀಲ ಸ್ಥಿತಿಯಲ್ಲಿರುವ ದೃಶ್ಯವಿದೆ.
ಇದು ಈಗ ಮಧ್ಯಪ್ರದೇಶದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ದಬ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಶ್ ರಾಜೆ ಹೊಟೇಲೊಂದರ ರೂಮ್‌ನಲ್ಲಿ ತನ್ನ ಪುರುಷ ಸ್ನೇಹಿತನೊಬ್ಬನೊಂದಿಗೆ ಅಸಭ್ಯ ರೀತಿಯಲ್ಲಿ ಇರುವ ದೃಶ್ಯವಿದೆ. ವೀಡಿಯೋದಲ್ಲಿ ಕೇಳಿ ಬರುತ್ತಿರುವ ಧ್ವನಿಯಲ್ಲಿ ಆ ಅಪರಿಚಿತ ಸ್ನೇಹಿತ ಶಾಸಕನಿಗೆ ' ಸರ್ ನನ್ನನ್ನು ಶಾಶ್ವತವಾಗಿ ನಿಮ್ಮವರನ್ನಾಗಿಸಿಕೊಳ್ಳಿ( ಸರ್ ಮುಜೆ ಅಪ್ನಾ ಬನಾ ಲಿಜಿಯೇ) ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ. 2020ರ ಉಪಚುನಾವಣೆಯಲ್ಲಿ ದಬ್ರಾ ಕ್ಷೇತ್ರದಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತೆ ಇಮ್ರಾತಿ ದೇವಿ ಅವರನ್ನು ಇದೇ ಸುರೇಶ್ ರಾಜೇ ಸೋಲಿಸಿದ್ದರು.
ರೈಲಿನಲ್ಲಿ ಪ್ರಯಾಣಿಸುವಾಗ ಯಾರೂ ನೋಡ್ತಿಲ್ಲಾಂತ ಹೀಗೆಲ್ಲಾ ಮಾಡಿದ್ರೆ ಜೈಲೂಟ ಗ್ಯಾರಂಟಿ!
ಇದೇ ಚುನಾವಣೆಯಲ್ಲಿ ಸುರೇಶ್ ರಾಜೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. . ಮತ್ತೊಂದೆಡೆ, ಇಮಾರ್ತಿ ದೇವಿ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದ ಇಮಾರ್ತಿ ದೇವಿ ಅವರನ್ನು ಸೋಲಿಸಿದ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಸುರೇಶ್ ರಾಜೇ ಅವರ ವರ್ಚಸ್ಸು ಹೆಚ್ಚಾಗಿತ್ತು. ಆದರೆ ಈಗ ಅವರ ವೀಡಿಯೋ ಲೀಕ್ ಆಗಿದ್ದು, ಚುನಾವಣೆ ಸಂದರ್ಭದಲ್ಲಿ ಅವರ ರಾಜಕೀಯ ಭವಿಷ್ಯದ ಮೇಲೆ ಅಂಧಕಾರ ಬೀರುವ ಸಾಧ್ಯತೆ ಇದೆ.
ಜಾರ್ಖಂಡ್ ಆರೋಗ್ಯ ಸಚಿವನ ಅನಾರೋಗ್ಯಕಾರಿ ವರ್ತನೆ: ಅಶ್ಲೀಲ ವಿಡಿಯೋ ಚಾಟ್ ವೈರಲ್
