* ಅಗ್ನಿಪಥ ಯೋಜನೆ ಜಾರಿ, ದೇಶಾದ್ಯಂತ ಭಾರೀ ವಿರೋಧ* ಸಾಮಾನ್ಯ ಸೈನಿಕ ಹಾಗೂ ಅಗ್ನಿವೀರರಿಗಿರೋ ವ್ಯತ್ಯಾಸವೇನು?* ಬ್ಯಾಡ್ಜ್, ವೇತನ ಎಲ್ಲವೂ ಭಿನ್ನ
ನವದೆಹಲಿ(ಜೂ.20): ಅಗ್ನಿವೀರರಿಗೆ ಇರುವ ಷರತ್ತುಗಳು ಮತ್ತು ಸೌಲಭ್ಯಗಳ ಪಟ್ಟಿಯನ್ನು ಭಾರತೀಯ ಸೇನೆ ಭಾನುವಾರ ಬಿಡುಗಡೆ ಮಾಡಿದೆ. ಸೇನೆಯ ಸೈನಿಕರಿಗೆ ಸಿಗುವ ಹಾರ್ಡ್‌ಶಿಪ್ ಅಲವಂವ್ಸ್ ಅಗ್ನಿವೀರರಿಗೂ ಸಿಗಲಿದೆ ಎಂದು ಸೇನೆ ಹೇಳಿದೆ. ಇದಲ್ಲದೆ, ಅಗ್ನಿವೀರ್‌ರರಿಗೆ ಪ್ರಯಾಣ ಮತ್ತು ಉಡುಗೆ ಭತ್ಯೆಯೂ ಸಿಗುತ್ತದೆ. ಅಗ್ನಿವೀರ್ ಸೇನೆಯೊಂದಿಗೆ ಆಹಾರ ಸೇವಿಸಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಸೇನೆ ಹೇಳಿದೆ.
ಆದರೆ ಸೇನೆ ಮತ್ತು ಅಗ್ನಿವೀರ್‌ಗಳಿಗೆ ಲಭ್ಯವಿರುವ ಸೌಲಭ್ಯಗಳು, ಅವರ ಗುರುತು ಮತ್ತು ಸೇವಾ ಪರಿಸ್ಥಿತಿಗಳ ನಡುವಿನ ವ್ಯತ್ಯಾಸವೇನು ಎಂಬುವುದು ತಿಳಿದುಕೊಳ್ಳಬೇಕಾದ ವಿಚಾರ.
ಸಂಬಳ: ಆರ್ಮಿ VS ಅಗ್ನಿವೀರ್
ಅಗ್ನಿವೀರರು ಪಡೆಯುವ ಸಂಬಳದ ಬಗ್ಗೆ ಹೇಳುವುದಾದರೆ, ಅವರು ಸೇರ್ಪಡೆಗೊಂಡಾಗ 30 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ. ಆದರೆ ಇದರಲ್ಲಿ ಶೇ.30ರಷ್ಟು ವೇತನವನ್ನು ಸರ್ಕಾರ ಕಡಿತಗೊಳಿಸಿ ಅಗ್ನಿವೀರನ ಹೆಸರಿನಲ್ಲಿ ಮಾಡಿರುವ ಸೇವಾ ನಿಧಿಗೆ ಜಮಾ ಮಾಡುತ್ತದೆ. ಅದೇನೆಂದರೆ, ಅಗ್ನಿವೀರ್ ಕೈಗೆ ಮೊದಲ ವರ್ಷ 21 ಸಾವಿರ ರೂಪಾಯಿ ನಗದು ಸಿಗಲಿದೆ. ಮತ್ತು ಇದು ಇಡೀ ವರ್ಷಕ್ಕೆ ಅನ್ವಯಿಸುತ್ತದೆ. ವಿಶೇಷವೆಂದರೆ ಅಗ್ನಿವೀರನ ಸಂಬಳದಲ್ಲಿ ಎಷ್ಟು ಹಣವನ್ನು ಸರ್ಕಾರ ಕಡಿತಗೊಳಿಸುತ್ತದೋ ಅಷ್ಟೇ ಮೊತ್ತವನ್ನು ತನ್ನ ಪರವಾಗಿ ಅವನ ನಿಧಿಗೆ ಠೇವಣಿ ಇಡುತ್ತದೆ.
ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳುವುದಾದರೆ, ಸೇರ್ಪಡೆಗೊಂಡ ಮೊದಲ ವರ್ಷವೇ ಅಗ್ನಿವೀರ್ 30 ಸಾವಿರ ಸಂಬಳ ಪಡೆಯುತ್ತಾರೆ. ಅದರಲ್ಲಿ ಶೇಕಡ 30ರಷ್ಟು ಅಂದರೆ 9 ಸಾವಿರ ಕಡಿತಗೊಳಡಿಸಿ ಸರ್ಕಾರ ಆ ಅಗ್ನಿವೀರನ ನಿಧಿಗೆ ಜಮಾ ಮಾಡುತ್ತದೆ. ಇದರೊಂದಿಗೆ ಸರ್ಕಾರವು ತನ್ನ ಪರವಾಗಿ ಈ ನಿಧಿಗೆ 9 ಸಾವಿರ ರೂಪಾಯಿಗಳನ್ನು ನೀಡಲಿದೆ. ಈ ಮೂಲಕ ಮೊದಲ ತಿಂಗಳು 21 ಸಾವಿರ ಸಂಬಳದ ಜತೆಗೆ 18 ಸಾವಿರ ರೂಪಾಯಿ ಅವರ ಸೇವಾ ನಿಧಿಗೆ ಜಮಾ ಆಗಲಿದೆ.
ಈಗ ಸೈನ್ಯದ ಬಗ್ಗೆ ನೋಡುವುದಾದರೆ ಯುವಕರು ಸೈನ್ಯಕ್ಕೆ ಮೊದಲ ಪ್ರವೇಶ ಬಾರಿ ಸೈನಿಕರಾಗಿ ಸೇರ್ಪಡೆಗೊಂಡಾಗ, 10ನೇ ತರಗತಿ ತೇರ್ಗಡೆಯಾದ ಯುವಕ ಸೈನಿಕನಾದರೆ ಆತನ ಮೂಲ ವೇತನ ಸುಮಾರು 21,700 ರೂ. ಇದಲ್ಲದೇ ಸೇನಾ ಸೇವಾ ವೇತನಕ್ಕಾಗಿ 5200 ರೂ. ಇದಲ್ಲದೇ ಸಾರಿಗೆ ಭತ್ಯೆಯಲ್ಲಿ ಸುಮಾರು 1800 ರೂ. ಇದರ ನಂತರ, ಅವರು ಈ ಮೂರರಲ್ಲಿ 34 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ಈ ತುಟ್ಟಿಭತ್ಯೆ ಸುಮಾರು 9758 ರೂ. ಈ ಮೂಲಕ ಮೊದಲ ತಿಂಗಳಲ್ಲೇ ಯೋಧನಿಗೆ ಸುಮಾರು 39 ಸಾವಿರ ರೂಪಾಯಿ ಸಂಬಳ ಸಿಗುತ್ತದೆ.
ಮತ್ತೊಂದೆಡೆ, ಎರಡನೇ ವರ್ಷದಲ್ಲಿ ಅಗ್ನಿವೀರರ ಒಟ್ಟು ವೇತನ ರೂ.33 ಸಾವಿರ, ಮೂರನೇ ವರ್ಷ ರೂ.36500 ಮತ್ತು ನಾಲ್ಕನೇ ವರ್ಷದಲ್ಲಿ ರೂ.40 ಸಾವಿರ. ಇದರಲ್ಲಿ 30 ಕಳೆದರೆ ಉಳಿದ ಮೊತ್ತ ಅವರ ಕೈ ಸೇರುತ್ತದೆ.
ಡಿಎ ಲಾಭ ಸಿಗುವುದಿಲ್ಲ
ಯೋಧ ಸೇನೆಗೆ ಸೇರುವ ಅನುಕೂಲವೆಂದರೆ ಕೇಂದ್ರ ಸರ್ಕಾರದ ನೀತಿಗಳ ಪ್ರಕಾರ ವರ್ಷದಲ್ಲಿ ಎರಡು ಬಾರಿ ಡಿಎ ಹೆಚ್ಚಳದ ಲಾಭ ಪಡೆಯುತ್ತಾರೆ. ಅಗ್ನಿವೀರನ ಸಂಬಳ ಕನಿಷ್ಠ ಒಂದು ವರ್ಷಕ್ಕೆ ನಿಗದಿಯಾಗಿದೆ.
ಸೇವಾ ಅವಧಿ
ಅಗ್ನಿವೀರ್‌ಗಳಿಗೆ 4 ವರ್ಷಗಳವರೆಗೆ ಉದ್ಯೋಗವಿರುತ್ತದೆ, ಆದರೆ ಸೇನಾ ಸಿಬ್ಬಂದಿ ಕನಿಷ್ಠ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಮಾತ್ರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.
ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳು
ಸೇನಾ ಸೈನಿಕರು 15 ವರ್ಷಗಳ ಸೇವೆಯ ನಂತರ ನಿವೃತ್ತರಾದಾಗ ಪಿಂಚಣಿ ಮತ್ತು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ ಅಗ್ನಿವೀರರು 4 ವರ್ಷಗಳ ನಂತರ ಪಿಂಚಣಿ-ಗ್ರಾಚ್ಯುಟಿಯಂತಹ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಹೌದು, ಅಗ್ನಿವೀರ್ಸ್ 4 ವರ್ಷಗಳ ಸೇವಾ ಅವಧಿಯಲ್ಲಿ ಕಡಿತಗೊಳಿಸಬಹುದಾದ ನಿಧಿಯನ್ನು ಒಂದು ದೊಡ್ಡ ಮೊತ್ತವಾಗಿ ಪಡೆಯುತ್ತಾರೆ. ಈ ಮೊತ್ತವು 10.04 ಲಕ್ಷಗಳಾಗಿರುತ್ತದೆ. ಇದರ ಮೇಲೆ ಬಡ್ಡಿ ಸೇರಿಸಿದ ನಂತರ, ಈ ಮೊತ್ತವು 11.71 ಲಕ್ಷ ಆಗುತ್ತದೆ, ಇದು ನಿವೃತ್ತಿ ಪ್ಯಾಕೇಜ್ ಆಗಿ ಅಗ್ನಿವೀರ್‌ಗಳಿಗೆ ಲಭ್ಯವಾಗುತ್ತದೆ. ಈ ಮೊತ್ತವು ಆದಾಯ ತೆರಿಗೆ ಮುಕ್ತವಾಗಿರುತ್ತದೆ.
ರಜಾದಿನಗಳಲ್ಲಿ ಕಡಿತ
ಅಗ್ನಿವೀರರಿಗೆ ವರ್ಷದಲ್ಲಿ 30 ರಜೆಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಮತ್ತು ಅಗತ್ಯಕ್ಕೆ ಅನುಗುಣವಾಗಿ, ಅವರಿಗೆ ವೈದ್ಯಕೀಯ ರಜೆ ನೀಡಲಾಗುತ್ತದೆ. ಆದರೆ ಸೇನೆಯ ನಿಯಮಿತ ಸೇವೆಯಲ್ಲಿ ಕೆಲಸ ಮಾಡುವವರಿಗೆ ವರ್ಷದಲ್ಲಿ 90 ರಜೆಗಳು ಸಿಗುತ್ತವೆ.
ಬ್ಯಾಡ್ಜ್‌ಗಳು ವಿಭಿನ್ನವಾಗಿರುತ್ತವೆ
ಅಗ್ನಿವೀರರಿಗೆ ವಿಭಿನ್ನ ಗುರುತು ಸಿಗಲಿದೆ ಎಂದು ಸೇನೆ ಹೇಳಿದೆ. 'ಅಗ್ನಿವೀರ್' ತನ್ನ ಸೇವಾ ಅವಧಿಯಲ್ಲಿ ತನ್ನ ಸಮವಸ್ತ್ರದ ಮೇಲೆ "ವಿಶಿಷ್ಟ ಚಿಹ್ನೆ" ಯನ್ನು ಧರಿಸುತ್ತಾನೆ. ಈ ಕುರಿತು ವಿವರವಾದ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಅಂದರೆ, ಅಗ್ನಿವೀರರ ಬ್ಯಾಡ್ಜ್ ಆರ್ಮಿ, ನೌಕಾಪಡೆ, ಏರ್ ಮೆನ್ ಗಳಿಗಿಂತ ಭಿನ್ನವಾಗಿರುತ್ತದೆ.
ಅಗ್ನಿವೀರರಿಗೆ ವಾಯುಪಡೆಯಲ್ಲಿ ಪ್ರತ್ಯೇಕ ಶ್ರೇಣಿಯನ್ನು ರಚಿಸಲಿದ್ದಾರೆ ಎಂದು ವಾಯುಪಡೆ ಹೇಳಿದೆ, ಇದು ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಿಂತ ಭಿನ್ನವಾಗಿರುತ್ತದೆ. ಅಗ್ನಿವೀರ್ ತನ್ನ ಸೇವೆಯ ಸಮಯದಲ್ಲಿ ತನ್ನ ಸಮವಸ್ತ್ರದಲ್ಲಿ ವಿಶಿಷ್ಟವಾದ ಚಿಹ್ನೆಯನ್ನು ಧರಿಸುತ್ತಾನೆ.
