ಉತ್ತರ ಪ್ರದೇಶ ಬೆನ್ನಲ್ಲೇ ಗುಜರಾತ್ನಲ್ಲೂ ಲವ್ ಜಿಹಾದ್ ಕಾನೂನು ಜಾರಿ, 10 ವರ್ಷ ಜೈಲು!
* ಉತ್ತರ ಪ್ರದೇಶ, ಮಧ್ಯಪ್ರದೇಶದ ಬೆನ್ನಲ್ಲೇಢ ಗುಜರಾತ್ನಲ್ಲೂ ಲವ್ ಜಿಹಾದ್ ಕಾನೂನು ಜಾರಿ
* ಕಾನೂನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ
* ಅಪ್ರಾಪ್ತೆಯನ್ನು ಮದುವೆಯಾಗುವವರಿಗೂ ಕಂಟಕ
ಅಹಮದಾಬಾದ್(ಜೂ.15): ಪ್ರೀತಿಯ ನೆಪದಲ್ಲಿ ಒತ್ತಾಯಪೂರ್ವಕವಾಗಿ ಮತಾಂತರಗೊಳ್ಳುವ ಷಡ್ಯಂತ್ರ ರಚಿಸುವ ಪ್ರೇಮಿಗಳಿಗೆ ಇನ್ನು ಗುಜರಾತ್‌ನಲ್ಲೂ ಕಠಿಣ ಶಿಕ್ಷೆ ಸಿಗಲಿದೆ. ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ಬಳಿಕ ಗುಜರಾತ್‌ನಲ್ಲೂ ಇಂದು, ಮಂಗಳವಾರದಿಂದ ಲವ್ ಜಿಹಾದ್ ಕಾನೂನು ಜಾರಿಗೊಳ್ಳಲಿದೆ. ಗುಜರಾಥ್ ಸರ್ಕಾರ ಮಾರ್ಚ್‌ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕದಲ್ಲಿ ತಿದ್ದುಪಡಿ ತಂದಿತ್ತು. ಗುಜರಾತ್ ಫ್ರೀಡಂ ಆಫ್ ರಿಲಿಜಿಯನ್ 2003 ರಡಿ ಇನ್ನು ಗುಜರಾತ್‌ನಲ್ಲೂ ಮದುವೆ ಹೆಸರಲ್ಲಿ ಧರ್ಮ ಬದಲಾಯಿಸುವುದು ಬಹುದೊಡ್ಡ ಅಅಪರಾಧವಾಗಲಿದೆ.
ಹತ್ತು ವರ್ಷ ಜೈಲು ಶಿಕ್ಷೆ
ಲವ್ ಜಿಹಾದ್ ಕಾನೂನು ಜಾರಿಗೊಳಿಸಲು ರಾಜ್ಯಪಾಲ ದೇವವ್ರತ ಒಪ್ಪಿಗೆ ಕೊಟ್ಟ ಬಳಿಕ, ಸಿಎಂ ವಿಜಯ್ ರೂಪಾನಿ ಜೂನ್ 15 ರಿಂದ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಈ ವಿಧೇಯಕದನ್ವಯ ಧರ್ಮ ಮರೆಮಾಚಿ ಮದುವೆಯಾಗುವವರಿಗೆ ಗರಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅಲ್ಲದೇ ಧರ್ಮ ಮುಚ್ಚಿಟ್ಟು ಮದುವೆಯಾಗುವವರಿಗೆ ಐದು ವರ್ಷ ಜೈಲು ಶಿಕ್ಷೆ ಮಯತ್ತು ಎರಡು ಲಕ್ಷ ದಂಡ ವಿಧಿಸುವ ಅವಕಾಶವೂ ಇದೆ. ಅಪಗ್ರಾಪ್ತೆ ಮದುವೆಯಾದರೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ಭರಿಸಬೇಕಾಗುತ್ತದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾನೂನು ಜಾರಿಗೊಳಿಸುವ ಭರವಸೆ
ಮುಖ್ಯಮಮತ್ರಿ ವಿಜಯ್ ರೂಪಾನಿ ಸ್ಥಳೀಯ ಆಡಳಿತ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೊಳಿಸುವ ಮಾತು ಕೊಟ್ಟಿದ್ದರು. ಗುಜರಾತ್‌ನಲ್ಲಿ 2003 ರಲ್ಲಿ ಫ್ರೀಂಡಂ ಆಫ್ ರಿಲಿಜಿಯನ್ ಕಾಯ್ದೆ ತರಲಾಗಿತ್ತು. ಇದಾದ ಬಳಿಕ 2006ರಲ್ಲಿ ಮೊದಲ ಬಾಉರಿ ತಿದ್ದುಪಡಿ ಮಾಡಲಾಗಿತ್ತು. ಗುಜರಾತ್‌ನಲ್ಲಿ ಮುಂದನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಿರುವಾಗ ಈ ಕಾನೂನು ಜಾರಿಗೆ ತಂದಿರುವುದು ಬಹಳ ಮಹತ್ವ ಪಡೆಯುತ್ತದೆ.