ತಿರುಪತಿ ಬಳಿಕ ಗುರುವಾಯೂರು ದೇವಸ್ಥಾನಕ್ಕೆ Mukesh Ambani ಭೇಟಿ: ಕೋಟಿ ಕೋಟಿ ರೂ. ಕಾಣಿಕೆ ಸಲ್ಲಿಕೆ

ಮುಖೇಶ್‌ ಅಂಬಾನಿ ಶನಿವಾರ ಕೇರಳದ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗುರುವಾಯೂರು ದೇವಾಲಯವು ಭಗವಾನ್ ವಿಷ್ಣುವಿನ ರೂಪವಾದ ಗುರುವಾಯೂರಪ್ಪನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಕೇರಳದ ಗುರುವಾಯೂರು ಪಟ್ಟಣದಲ್ಲಿದೆ.

after tirupati visit mukesh ambani goes to keralas guruvayur temple ash

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) (RIL) ಅಧ್ಯಕ್ಷ ಮುಖೇಶ್ ಅಂಬಾನಿ ಶನಿವಾರ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಗುರುವಾಯೂರು ದೇವಾಲಯವು ಭಗವಾನ್ ವಿಷ್ಣುವಿನ ರೂಪವಾದ ಗುರುವಾಯೂರಪ್ಪನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಕೇರಳದ ಗುರುವಾಯೂರು ಪಟ್ಟಣದಲ್ಲಿದೆ. ಈ ದೇವಾಲಯವು ಕೇರಳ ಮತ್ತು ತಮಿಳುನಾಡಿನ ಹಿಂದೂಗಳ ಪ್ರಮುಖ ಪೂಜಾ ಸ್ಥಳವಾಗಿದೆ. ಗುರುವಾಯೂರು ದೇವಾಲಯವನ್ನು ಪ್ರವೇಶಿಸಲು ಬಯಸುವ ಭಕ್ತರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದ್ದು, ಮುಖೇಶ್‌ ಅಂಬಾನಿ ಅದನ್ನು ಅನುಸರಿಸಿದ್ದಾರೆ. ಪುರುಷರು ತಮ್ಮ ಸೊಂಟದ ಸುತ್ತ ಮುಂಡು ಧರಿಸಬೇಕು. ಹಾಗೂ, ಎದೆಯ ಭಾಗವನ್ನು ಮುಚ್ಚಲು ಸಣ್ಣ ತುಂಡು ಬಟ್ಟೆಯನ್ನು (ವೇಷ್ಠಿ) (Veshti) ಬಳಸಬಹುದು. ಅದನ್ನು ಬಿಟ್ಟರೆ ಸೊಂಟದ ಮೇಲ್ಬಾಗ ಬೇರೆ ಬಟ್ಟೆಯನ್ನು ಧರಿಸುವಂತಿಲ್ಲ. 

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶನಿವಾರ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ತಮ್ಮ ಭೇಟಿಯ ವೇಳೆ ಕೈಗಾರಿಕೋದ್ಯಮಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಜೊತೆಗಿದ್ದರು. ಇನ್ನು, ಮುಖೇಶ್‌ ಅಂಬಾನಿ ಅವರು ಗುರುವಾಯೂರು ದೇವಸ್ಥಾನದಲ್ಲಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದಾರೆ. 65 ವರ್ಷದ ಮುಖೇಶ್ ಅಂಬಾನಿ ಅವರು ಶ್ರೀ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸುವ ಜತೆಗೆ ದೇವಾಲಯದ ಆನೆಗಳಾದ ಚೆಂತಮರಾಕ್ಷನ್ ಮತ್ತು ಬಲರಾಮನಿಗೆ ನೈವೇದ್ಯ ಸಲ್ಲಿಸಿದರು. ಹಾಗೂ, ತಮ್ಮ ಕುಟುಂಬದೊಂದಿಗೆ ದೇವಾಲಯದ ಸೋಪಾನಮ್ (ಒಳಗಿನ ಗರ್ಭಗುಡಿ) ನಲ್ಲಿ ತುಪ್ಪವನ್ನು ಅರ್ಪಿಸಿದರು. ಇನ್ನು, ಅಂಬಾನಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿರುವುದು ಗುರುವಾಯೂರು ದೇವಸ್ಥಾನಕ್ಕೆ ಭಕ್ತನಿಂದ ಪಡೆದ ದೊಡ್ಡ ಮೊತ್ತವಾಗಿದೆ ಎಂದು ದೇವಸ್ಥಾನ ಹೇಳುತ್ತದೆ.

ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?

ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಕಾಣಿಕೆಯಾಗಿ ಚೆಕ್ ಅನ್ನು ನೀಡಿದರು ಎಂದು ಗುರುವಾಯೂರ್ ದೇವಸ್ವಂನ ಅಧ್ಯಕ್ಷ ಡಾ. ವಿ. ಕೆ ವಿಜಯನ್ ಹೇಳಿದ್ದಾರೆ. “ನಾನು ತೆರೆದಾಗ ಅದು 1 ಕೋಟಿ 51 ಲಕ್ಷ ರೂಪಾಯಿಗಳ ಚೆಕ್ ಆಗಿತ್ತು. ಇದು ಗುರುವಾಯೂರು ದೇವಸ್ಥಾನಕ್ಕೆ ಭಕ್ತರೊಬ್ಬರು ಅರ್ಪಿಸಿದ ಅತ್ಯಧಿಕ ಮೊತ್ತವಾಗಿದೆ. ಅವರು ಅದನ್ನು ದೇವಸ್ಥಾನದಲ್ಲಿ ಅನ್ನದಾನಕ್ಕೆ (ಭಕ್ತರಿಗೆ ಆಹಾರ) ಬಳಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿದರು’’ ಎಂದೂ ಡಾ. ವಿಜಯನ್ ಹೇಳಿದ್ದಾರೆ. 

ತಿರುಪತಿಗೂ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದ ಅಂಬಾನಿ
ಇನ್ನು, ಮುಖೇಶ್‌ ಅಂಬಾನಿ ಶುಕ್ರವಾರ ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಸಹ ಅವರು 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದರು. ಅವರ ಪುತ್ರ ಅನಂತ್ ಅವರ ಭಾವಿ ಪತ್ನಿ (Fiancee) ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ (Reliance Retail Limited) ನಿರ್ದೇಶಕ ಮನೋಜ್ ಮೋದಿ ಅವರ ಜೊತೆಗಿದ್ದರು. ತಿರುಪತಿಗೆ ಭೇಟಿ ನೀಡುವ ಮುನ್ನ ಕಳೆದ ವಾರದ ಆರಂಭದಲ್ಲಿ ಮುಖೇಶ್ ಅಂಬಾನಿ ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

Reliance Retail ಕ್ಯಾಂಪಾ ಕೋಲಾ ಸ್ವಾಧೀನಪಡಿಸಿಕೊಂಡಿದ್ದೇಕೆ..? ಪೆಪ್ಸಿ, ಕೋಕ್‌ಗೆ ಆತಂಕ ಶುರು..!

Latest Videos
Follow Us:
Download App:
  • android
  • ios