Asianet Suvarna News Asianet Suvarna News

ವಂಚನೆ ತಡೆಗೆ ಗೊಬ್ಬರ ಚೀಲದ ಮೇಲೆ ಕ್ಯೂಆರ್‌ ಕೋಡ್‌: ರೈತರಿಗಾಗುವ ಮೋಸ ತಡೆಯಲು ಕೇಂದ್ರದ ಕ್ರಮ

ವಂಚನೆ ತಡೆಗೆ ಗೊಬ್ಬರ ಚೀಲದ ಮೇಲೆ ಕ್ಯೂಆರ್‌ ಕೋಡ್‌ ಮುದ್ರಿಸಲಾಗುತ್ತದೆ. ರೈತರು ಮೋಸಹೋಗುವುದನ್ನು ತಪ್ಪಿಸಲು ಕೇಂದ್ರ ಈ ಕ್ರಮ ತೆಗೆದುಕೊಳ್ಳುತ್ತಿದೆ. ಇದನ್ನು ಸ್ಕ್ಯಾನ್‌ ಮಾಡಿದರೆ ಎಸ್‌ಎಸ್‌ಪಿ ಸಾಚಾತನ ಪತ್ತೆಯಾಗಲಿದೆ. 

after pharmaceuticals government set to launch qr codes on fertilizer packs to fight fake products ash
Author
First Published Jan 22, 2023, 9:37 AM IST

ನವದೆಹಲಿ (ಜನವರಿ 22, 2023): ಹಲವು ಔಷಧಗಳ ಮೇಲೆ ಕಂಪನಿಗಳು ಕ್ಯೂಆರ್‌ ಕೋಡ್‌ ಮುದ್ರಿಸುವುದನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ರಸಗೊಬ್ಬರದ ಚೀಲದ ಮೇಲೂ ಕ್ಯೂಆರ್‌ ಕೋಡ್‌ ಮುದ್ರಿಸುವುದನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲು ನಿರ್ಧರಿಸಿದೆ. ನಕಲಿ ರಸಗೊಬ್ಬರಗಳಿಂದ ರೈತರು ಮೋಸಹೋಗುವುದನ್ನು ತಪ್ಪಿಸಲು ಹಾಗೂ ರಸಗೊಬ್ಬರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಸಿಂಗಲ್‌ ಸೂಪರ್‌ ಫಾಸ್ಪೇಟ್‌ (Single Super Phosphate) (ಎಸ್‌ಎಸ್‌ಪಿ) (SSP) ಗೊಬ್ಬರದ ಚೀಲದ (Fertilizer Bag) ಮೇಲೆ ಉತ್ಪಾದಕರು ಈ ಕ್ಯುಆರ್‌ ಕೋಡ್‌ (QR Code) ಮುದ್ರಿಸಲಿದ್ದಾರೆ. ಅದನ್ನು ರೈತರು ಸ್ಕ್ಯಾನ್‌ ಮಾಡಿದರೆ ಉತ್ಪನ್ನದ ವಿಶಿಷ್ಟ ಗುರುತಿನ ಸಂಖ್ಯೆ, ಬ್ರ್ಯಾಂಡ್‌ ಹೆಸರು, ಉತ್ಪಾದಕರ ಹೆಸರು ಹಾಗೂ ವಿಳಾಸ, ಬ್ಯಾಚ್‌ ಸಂಖ್ಯೆ, ಉತ್ಪಾದನೆ ಮಾಡಿದ ದಿನಾಂಕ, ಎಕ್ಸ್‌ಪೈರಿ ದಿನಾಂಕ ಹಾಗೂ ಉತ್ಪಾದಕರ ಲೈಸೆನ್ಸ್‌ ಸಂಖ್ಯೆ ಮುಂತಾದವು ಸಿಗಲಿವೆ.

ಇದನ್ನು ಓದಿ: Business Idea: ಹತ್ತನೆ ಕ್ಲಾಸ್ ಪಾಸ್ ಆದ್ರೂ ಸಾಕು, ಹಳ್ಳಿಯಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವಾಲಯ (Union Chemicals and Fertilizers Ministry) ಈ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ 300 ಜನಪ್ರಿಯ ಬ್ರ್ಯಾಂಡ್‌ಗಳ ಔಷಧದ ಮೇಲೆ ಕ್ಯೂಆರ್‌ ಕೋಡ್‌ ಅಥವಾ ಬಾರ್‌ಕೋಡ್‌ (Bar Code) ಮುದ್ರಿಸುವುದನ್ನು 2023ರ ಆಗಸ್ಟ್‌ 1ರಿಂದ ಕಡ್ಡಾಯಗೊಳಿಸಿ ಕಳೆದ ನವೆಂಬರ್‌ನಲ್ಲೇ ಸಚಿವಾಲಯ ಆದೇಶ ಹೊರಡಿಸಿತ್ತು. ಅದೇ ಮಾದರಿಯಲ್ಲಿ ಎಸ್‌ಎಸ್‌ಪಿ ರಸಗೊಬ್ಬರದ ಮೇಲೂ ಕ್ಯುಆರ್‌ ಕೋಡ್‌ ಮುದ್ರಿಸಲು ಸಚಿವ ಮನ್ಸುಖ್‌ ಮಾಂಡವೀಯ (Mansukh Mandaviya) ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಏನಿದು ಎಸ್‌ಎಸ್‌ಪಿ ಗೊಬ್ಬರ..?:
ಎಸ್‌ಎಸ್‌ಪಿ ಗೊಬ್ಬರದಲ್ಲಿ ಫಾಸ್ಪರಸ್‌, ಸಲ್ಫರ್‌ ಹಾಗೂ ಕ್ಯಾಲ್ಷಿಯಂ, ಜೊತೆಗೆ ಇನ್ನಷ್ಟು ಸೂಕ್ಷ್ಮ ಪೋಷಕಾಂಶಗಳಿರುತ್ತವೆ. ಅವು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಈ ರಸಗೊಬ್ಬರವನ್ನು ನಮ್ಮ ದೇಶದಲ್ಲಿ ರೈತರು ಅತಿಹೆಚ್ಚು ಬಳಸುತ್ತಾರೆ. ಹೀಗಾಗಿ ಇದರ ಹೆಸರಿನಲ್ಲಿ ನಕಲಿ ರಸಗೊಬ್ಬರದ ಹಾವಳಿಯೂ ಹೆಚ್ಚುತ್ತಿದೆ. ಅದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Mysuru : ಭಾರೀ ಪ್ರಮಾಣದ ಅಕ್ರಮ ರಸಗೊಬ್ಬರ ಪೊಲೀಸರ ವಶಕ್ಕೆ

Follow Us:
Download App:
  • android
  • ios