Asianet Suvarna News Asianet Suvarna News

ಲಡಾಕ್ ಆಯ್ತು ಈಗ ನೀತಿ ಪಾಸ್‌ ಬಳಿ ಚೀನಾ ಉಪಟಳ: ಸೇನಾ ಕ್ಯಾಂಪ್ ನಿರ್ಮಾಣ

ಚೀನಾ ಈಗ ಭಾರತದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳ ಗಡಿಯಲ್ಲಿರುವ ಕೇಂದ್ರ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆಯ ಸಮೀಪ ಅದರ ಮಿಲಿಟರಿ ಹಾಗೂ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಮತ್ತೆ ಭಾರತವನ್ನು ಕೆಣಕಲು ಮುಂದಾಗಿದೆ. 

After Ladakh now Chinese trying to subjugation near Niti Pass Construction of china army camp near niti pass akb
Author
First Published May 23, 2023, 9:01 AM IST

ನವದೆಹಲಿ:  ಉತ್ತರ ಮತ್ತು ಪೂರ್ವ ವಲಯಗಳ ಗಡಿಗಳಲ್ಲಿ ಉಪಟಳ ತೋರಿದ ನಂತರ , ಚೀನಾ ಈಗ ಭಾರತದ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳ ಗಡಿಯಲ್ಲಿರುವ ಕೇಂದ್ರ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆಯ ಸಮೀಪ ಅದರ ಮಿಲಿಟರಿ ಹಾಗೂ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಮತ್ತೆ ಭಾರತವನ್ನು ಕೆಣಕಲು ಮುಂದಾಗಿದೆ. 

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಸುಮಾರು ನಾಲ್ಕು ವರ್ಷಗಳಿಂದ  ಗಡಿ ಬಿಕ್ಕಟ್ಟು ಇದೆ. ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಯೋಧರು ಹಾಗೂ ಶಸ್ತ್ರಾಸ್ತ್ರಗಳ ನಿಯೋಜನೆಗೆ ಇದು ಕಾರಣವಾಗಿದೆ.   ಈ ಮಧ್ಯೆ 2020ರಲ್ಲಿ ಗ್ವಾಲ್ವಾನ್‌ನಲ್ಲಿ  ಚೀನಾ ಆಕ್ರಮಣದಿಂದ ಎರಡೂ ಕಡೆಗಳಲ್ಲೂ ಯೋಧರ ಸಾವುನೋವಿಗೆ ಕಾರಣವಾಯ್ತು. ಈಗ ಗಡಿ ನಿಯಂತ್ರಣ ರೇಖೆಗಿಂತ 100 ಕಿಲೋ ಮೀಟರ್‌ ದೂರದಲ್ಲಿರುವ,  ಔಲಿ ಎಂಬ ಪ್ರದೇಶದಲ್ಲಿ ಭಾರತ ಹಾಗೂ ಅಮೆರಿಕಾ ಯೋಧರು ಜಂಟಿಯಾಗಿ ಸಮರಭ್ಯಾಸ ನಡೆಸಿದ ಒಂದು ತಿಂಗಳ ನಂತರ ಈಗ ಚೀನಾದ ಹೊಸ ಚಟುವಟಿಕೆ  ಬೆಳಕಿಗೆ ಬಂದಿದೆ.

ಉತ್ತರಾಖಂಡಕ್ಕೆ ಸರಿ ಎದುರು ಭಾಗದಲ್ಲಿ ಮಧ್ಯಮ ವಲಯದಲ್ಲಿ ಚೀನೀ ಪಡೆಯೂ ವಾಯುಯಾನಕ್ಕೆ ಸಂಬಂಧಿತ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ  ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಚೀನಾದ ಕಡೆಯವರು ಭಾರತದ ನೀತಿ ಪಾಸ್‌ಗೆ ಎದುರಾಗಿರುವ ಸಾರಂಗ್, ಪೋಲಿಂಗ್ ಜಿಂಡು ಎಂಬಲ್ಲಿ ಹೊಸ ಸಂಪರ್ಕ ರಸ್ತೆ ಮತ್ತು ಹೆಲಿಪ್ಯಾಡ್‌ಗಳನ್ನು ಮರು ಹೊಂದಿಸಿ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನೀತಿ ಪಾಸ್ ಮತ್ತು ತುಂಜುನ್ ಪಾಸ್ ಬಳಿ ಚೀನಾ ಹೊಸ ಪೀಪಲ್ ಲಿಬರೇಶನ್ ಆಫ್ ಆರ್ಮಿ (PLA) ಶಿಬಿರಗಳನ್ನು ನಿರ್ಮಿಸಿದೆ.  ಯುದ್ಧದಂತಹ ಪರಿಸ್ಥಿತಿಯಲ್ಲಿ, ಈ ಹೆಲಿಪ್ಯಾಡ್‌ಗಳು ಸೇನೆ, ಮತ್ತು ಯುದ್ಧೋಪಕರಣಗಳನ್ನು ವೇಗವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.

ಚೀನಾ, ರಷ್ಯಾಗೆ ಮೋದಿ ಪರೋಕ್ಷ ಚಾಟಿ

ನೀತಿ ಪಾಸ್ ಭಾರತ ಮತ್ತು ಟಿಬೆಟ್ ನಡುವಿನ ಪ್ರಾಚೀನ ವ್ಯಾಪಾರ ಮಾರ್ಗವಾಗಿತ್ತು (trading route). ಇದನ್ನು 1951 ರಲ್ಲಿ ಚೀನಾ ಸ್ವಾಧೀನಪಡಿಸಿಕೊಂಡಿತು. 1962 ರ ಇಂಡೋ ಚೀನಾ ಯುದ್ಧದ ನಂತರ ಈ ಮಾರ್ಗ ಮುಚ್ಚಲ್ಪಟ್ಟಿದೆ.  ಈ ನಡುವೆ  ಚೀನೀಯರು  ಥೋಲಿಂಗ್‌ ಎಂಬ ಹಳ್ಳಿಯಿಂದ 45 ಕಿಮೀ ದೂರದಲ್ಲಿ ಗಡಿ ವಸಾಹತು ಗ್ರಾಮವನ್ನು ನಿರ್ಮಿಸಿದ್ದಾರೆ.  ಅಲ್ಲದೇ ಅಲ್ಲಿಂದ ಕೆಲವು ಮೀಟರ್ ದೂರದಲ್ಲಿ ಅವರು ಮಿಲಿಟರಿ ಸಂಕೀರ್ಣವನ್ನು ಸಹ ನಿರ್ಮಿಸಿದ್ದಾರೆ ಎಂದು  ಮೂಲಗಳು ತಿಳಿಸಿವೆ. 

ಭಾರತದ ಸುತ್ತಲೂ ಕಾರ್ಯತಂತ್ರದ ಸುತ್ತುವರಿಯುವಿಕೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಮೂಲಕ ಭಾರತವನ್ನು ಆತಂಕಕ್ಕೆ ಈಡು ಮಾಡಲು ಬೀಜಿಂಗ್ ಬಯಸಿದೆ.  ಸೈನಿಕರ ಹೆಚ್ಚಳದ ಜೊತೆಗೆ ಕಳೆದ 3 ವರ್ಷಗಳಿಂದ ಮಧ್ಯಮ ವಲಯದಲ್ಲಿ ಚೀನಾ ನಿಷ್ಕ್ರಿಯತೆಯನ್ನು ಸಕ್ರಿಯಗೊಳಿಸುತ್ತಿದೆ. ಹೆಚ್ಚುವರಿ ಭಾರತೀಯ ಪಡೆಗಳನ್ನು ಮತ್ತಷ್ಟು  ಸಂಕಷ್ಟಕ್ಕೀಡು ಮಾಡಲು  ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಅಸಮತೋಲನವನ್ನು ಉಂಟು ಮಾಡಲು ಚೀನಾ ಕಾರ್ಯತಂತ್ರ ರೂಪಿಸುತ್ತಿದೆ ಎಂದು ರಕ್ಷಣಾ ಮತ್ತು ವ್ಯೂಹಾತ್ಮಕ ವ್ಯವಹಾರಗಳ ವಿಶ್ಲೇಷಕ ನಿವೃತ್ತ ಮೇಜರ್ ಜನರಲ್ ಸುಧಾಕರ್ (Sudhakar) ಹೇಳಿದ್ದಾರೆ. 

ಪರ್ವತದ ಸುತ್ತಲಿನ ಹುಲ್ಲಿಗೂ ಬಿಲ್ಲು, ಕೈಲಾಸ-ಮಾನಸ ಸರೋವರ ಯಾತ್ರೆಯ ಶುಲ್ಕ ಏರಿಸಿದ ಚೀನಾ!

ಭಾರತದ ಸುತ್ತಲಿರುವ ಕಡಲ ಪಾಲುದಾರಿಕೆ ಹಿಡಿತದ ಪೈಪೋಟಿಯಲ್ಲಿ  ಹಿಂದೂ ಮಹಾಸಾಗರ ಪ್ರದೇಶದಲ್ಲಿ (Indian Ocean region) ಭಾರತವನ್ನು ದುರ್ಬಲಗೊಳಿಸಲು ಚೀನಾ ಸಕ್ರಿಯವಾಗಿದ್ದು, ಆದ್ದರಿಂದ ಭಾರತವು ಸಮತೋಲಿತತೆಯನ್ನು ಅಳವಡಿಸಿಕೊಳ್ಳಬೇಕು. ಕಾಂಟಿನೆಂಟಲ್ ಗಡಿಯುದ್ದಕ್ಕೂ ಭದ್ರತೆಗೆ ಧಕ್ಕೆಯಾಗದಂತೆ ಪರಿಹರಿಸಲು ಸಮಾನ ಮನಸ್ಕ ರಾಷ್ಟ್ರಗಳ ಸಹಯೋಗದ ಗುಂಪುಗಳನ್ನು ಬಂಡವಾಳ ಮಾಡಿಕೊಳ್ಳುವ ಮೂಲಕ ಕಡಲ ಬೆದರಿಕೆಗಳತ್ತ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.

ಉತ್ತರ ವಲಯದಿಂದ ಪೂರ್ವ ವಲಯದವರೆಗೆ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಮಧ್ಯಮ ವಲಯದಲ್ಲಿ ತನ್ನ ಮಿಲಿಟರಿ ಸನ್ನದ್ಧತೆ ಮತ್ತು ಮೂಲಸೌಕರ್ಯವನ್ನು (infrastructure) ಹೆಚ್ಚಿಸಲು ಭಾರತಕ್ಕೆ ಇದು ಪ್ರಚೋದನೆ ನೀಡುತ್ತಿದೆ ಎಂದು ಏಷ್ಯಾನೆಟ್ ಡಿಸೆಂಬರ್‌ನಲ್ಲಿ ವರದಿ ಮಾಡಿತ್ತು. 

ಉತ್ತರಾಖಂಡ್‌ನ ಬಾರಾಹೋಟಿ ಪ್ರದೇಶದಲ್ಲಿ (Barahoti area) ಕೆಲವು ಘಟನೆಗಳು ವರದಿಯಾಗಿದ್ದರೂ, ಮಧ್ಯ ವಲಯವು ಭಾರತದ ಭೂಪ್ರದೇಶದಲ್ಲಿ ಯಾವುದೇ ಗಂಭೀರವಾದ ನಿಯಮ ಉಲ್ಲಂಘನೆ ಇನ್ನೂ ನಡೆದಿಲ್ಲ. ಭಾರತವು ರಸ್ತೆ ಮತ್ತು ಸೇತುವೆ ನಿರ್ಮಾಣ ಸೇರಿದಂತೆ ಹಲವಾರು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ವೇಗವಾಗಿ ನಡೆಸುತ್ತಿದೆ. ಚೀನಾದ ಭದ್ರತಾ ಪಡೆ ಆಗಮಿಸುವುದಕ್ಕೂ ಭಾರತೀಯ ಪಡೆಗಳು (Indian troops) ಈಗ ಅತ್ಯಂತ ಪ್ರಮುಖವಾದ ಪ್ರವೇಶ ಬಿಂದುಗಳನ್ನು, ಪರ್ವತದ ಪಾಸ್‌ಗಳನ್ನು ತಲುಪಬಹುದಾದಂತಹ ವ್ಯವಸ್ಥೆ ಇದೆ.

ಹಿಮಾಚಲ ಪ್ರದೇಶ (Himachal Pradesh) ಮತ್ತು ಉತ್ತರಾಖಂಡದ (Uttarakhand) ನಡುವಿನ ಗಡಿಯನ್ನು ಒಳಗೊಂಡಂತೆ ಆ ವಲಯದ ಗಡಿ ಪ್ರದೇಶದಲ್ಲಿ 20 ಕ್ಕೂ ಹೆಚ್ಚು ಪಾಸ್‌ಗಳಿವೆ. ಭಾರತ ಮತ್ತು ಚೀನಾವು ಲಡಾಖ್‌ನ (Ladakh) ಉತ್ತರ ವಲಯದಿಂದ ಅರುಣಾಚಲ ಪ್ರದೇಶದ (Arunachal Pradesh) ಪೂರ್ವ ವಲಯದವರೆಗೆ 3,488-ಕಿಮೀ-ಉದ್ದದ ಗಡಿ ನಿಯಂತ್ರಣ ರೇಖೆಯನ್ನು ಹಂಚಿಕೊಂಡಿವೆ. ಅದರಲ್ಲಿ 545-ಕಿಮೀ-ಉದ್ದದ ಗಡಿ ನಿಯಂತ್ರಣ ರೇಖೆ  ಮಧ್ಯ ವಲಯದ ಅಡಿಯಲ್ಲಿ ಬರುತ್ತದೆ.

Follow Us:
Download App:
  • android
  • ios