ಹಿಜಾಬ್ ವಿವಾದದ ಬೆನ್ನಲ್ಲೇ ಕರ್ನಾಟಕದಲ್ಲಿ ಭುಗಿಲೆದ್ದ ಬೈಬಲ್ ವಿವಾದ!
* ಹಿಜಾಬ್ ವಿವಾದದಿಂದ ನಲುಗಿದ್ದ ಕರ್ನಾಟಕ
* ಈಗ ರಾಜ್ಯದಲ್ಲಿ ಭುಗಿಲೆದ್ದ ಬೈಬಲ್ ವಿವಾದ
* ಶಾಲಾ ಆಡಳಿತ ಮಂಡಳಿಯ ನಿಯಮಕ್ಕೆ ಭಾರೀ ಆಕ್ರೋಶ
ಬೆಂಗಳೂರು(ಏ.25): ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಂತರ ಇದೀಗ ಶಾಲೆಗಳಲ್ಲಿ ಬೈಬಲ್ ವಿವಾದ ಭುಗಿದ್ದಿದೆ. ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಪ್ರಕರಣ ನಡೆದಿದೆ. ಮಕ್ಕಳಿಗೆ ಬೈಬಲ್ ತರಲು ನಿರಾಕರಿಸುವುದಿಲ್ಲ ಎಂದು ಮಕ್ಕಳ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಆಡಳಿತ ಮಂಡಳಿಯ ಈ ಕ್ರಮದ ನಂತರ ಕೆಲವು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಮಾತನಾಡಿ, ಶಾಲೆಯು ಕ್ರೈಸ್ತೇತರ ವಿದ್ಯಾರ್ಥಿಗಳನ್ನು ಬೈಬಲ್ ಓದುವಂತೆ ಒತ್ತಾಯಿಸುತ್ತಿದೆ. ಕ್ರಿಶ್ಚಿಯನ್ ಅಲ್ಲದ ವಿದ್ಯಾರ್ಥಿಗಳು ಸಹ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಬೈಬಲ್ ಓದುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಮಿತಿಯು ಹೇಳಿಕೊಂಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಮತ್ತೊಂದೆಡೆ, ಈ ಮೂಲಕ ಮಕ್ಕಳು ಪವಿತ್ರ ಪುಸ್ತಕದ ಉತ್ತಮ ವಿಷಯಗಳನ್ನು ಕಲಿಯುತ್ತಾರೆ ಎಂದು ಶಾಲೆಯವರು ಹೇಳುತ್ತಾರೆ.
ಮಾಹಿತಿಯ ಪ್ರಕಾರ, ಶಾಲೆಗೆ ಪ್ರವೇಶಕ್ಕಾಗಿ ಅರ್ಜಿ ನಮೂನೆಯಲ್ಲಿ ಕ್ರಮಸಂಖ್ಯೆ 11 ಹೀಗಿದೆ, 'ಪಾಲಕರು ತನ್ನ ಮಗು ತನ್ನ ನೈತಿಕ ಮತ್ತು ಆಧ್ಯಾತ್ಮಿಕ ಕಲ್ಯಾಣಕ್ಕಾಗಿ ಬೆಳಿಗ್ಗೆ ಅಸೆಂಬ್ಲಿ, ಸ್ಕ್ರಿಪ್ಚರ್ ಕ್ಲಾಸ್ ಸೇರಿದಂತೆ ಇತರ ತರಗತಿಗಳಲ್ಲಿ ಭಾಗವಹಿಸುತ್ತಾನೆ ಎಂದು ಖಚಿತಪಡಿಸುತ್ತಾನೆ. ಶಾಲೆಗೆ ಬರುವಾಗ ಬೈಬಲ್ ಬೋಧನೆಯನ್ನು ಯಾರೂ ವಿರೋಧಿಸುವುದಿಲ್ಲ.
ಕರ್ನಾಟಕ ಸರ್ಕಾರದಿಂದ ಶಾಲೆಗಳಲ್ಲಿ ಭಗವದ್ಗೀತೆ ಓದಿಸಲು ಚಿಂತನೆ
ಇತ್ತೀಚೆಗೆ ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಶ್ರೀಮದ್ಭವತ್ಗೀತೆಯನ್ನು ಕಲಿಸುವ ಯೋಜನೆಯನ್ನು ಘೋಷಿಸಿದೆ ಎಂಬುವುದು ಉಲ್ಲೇಖನೀಯ. ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರು.
ಇದಕ್ಕೂ ಮೊದಲು ಮಾರ್ಚ್ 17 ರಂದು ಗುಜರಾತ್ ಸರ್ಕಾರವು 6 ರಿಂದ 12 ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಶ್ರೀಮದ್ಭವತ್ ಗೀತೆಯನ್ನು ಸೇರಿಸಲು ನಿರ್ಧರಿಸಿತ್ತು. ಗುಜರಾತ್ ಸರ್ಕಾರದ ಪ್ರಕಾರ ಭಾರತೀಯ ಸಂಸ್ಕೃತಿಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು ಅದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ.