Asianet Suvarna News Asianet Suvarna News

'ಚಪಕ್' ಬೆನ್ನಲ್ಲೇ ದೀಪಿಕಾಗೆ ಮತ್ತೊಂದು ಆಘಾತ!

ಚಪಕ್ ಬೆನ್ನಲ್ಲೇ ದೀಪಿಕಾಗೆ ಮತ್ತೊಂದು ತಲೆನೋವು| ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ದೀಪಿಕಾಗೆ JNU ಭೇಟಿಯೇ ಮಾರಕವಾಯ್ತಾ| ಒಂದಾದ ಬಳಿಕ ಮತ್ತೊಂದರಂತೆ ಕೈತಪ್ಪುತ್ತಿವೆ ಅವಕಾಶ

After Chhapaak Deepika Padukone Advertisements Are Disappearing From Television
Author
Bangalore, First Published Jan 15, 2020, 4:33 PM IST
  • Facebook
  • Twitter
  • Whatsapp

ನವದೆಹಲಿ[ಜ.15]: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ನೀಡಿದ ಭೇಟಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಭೇಟಿ ಬೆನ್ನಲ್ಲೇ ಅವರು ನಟಿಸಿದ್ದ ಸಿನಿಮಾ ಚಪಕ್ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿಲ್ಲ ಎಂಬುವುದು ಒಂದೆಡೆಯಾದರೆ, ಇದರ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ಕಂಡು ಬಂದಿದೆ. 

Fact Check: ಚಪಕ್‌ನಲ್ಲಿ ಅಪರಾಧಿಯ ಧರ್ಮವನ್ನೇ ಮರೆಮಾಚಲಾಗಿದೆಯೇ?

ಹೌದು ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಗಾಥೆ ತೆರೆದಿಟ್ಟ ಸಿನಿಮಾ ಚಪಕ್ ಭಾರೀ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಸಿನಿಮಾ ಬಿಡುಗಡೆಯಾಗಲು ಇನ್ನೇನು ಬೆರಳೆಣಿಕೆಯಷ್ಟೇ ದಿನಗಳು ಉಳಿದಿವೆ ಎನ್ನುವಷ್ಟರಲ್ಲಿ ದೆಹಲಿಯ JNU ಆವರಣದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ JNU ಆವರಣದಲ್ಲಿ ದೀಪಿಕಾ ಪ್ರತ್ಯಕ್ಷವಾಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರ 'ಚಪಕ್ ಸಿನಿಮಾ' ನೋಡಬೇಡಿ ಎಂಬ ಕೂಗೆದಿದ್ದು ಹಲವರು ಇದನ್ನು ಬಹಿಷ್ಕರಿಸಿದ್ದರು. ಇದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಗೆ ಕೊಂಚ ಹಿನ್ನಡೆಯುಂಟು ಮಾಡಿತ್ತು. ಅಲ್ಲದೇ ಸಿನಿಮಾ ನಿರೀಕ್ಷಿತಯ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ.

ಇದೀಗ ಡಿಂಪಲ್ ಕ್ವೀನ್ ದೀಪಿಕಾಗೆ ಜಾಹೀರಾತು ವಿಚಾರದಲ್ಲೂ ಹಿನ್ನಡೆಯುಂಟಾಗಿದೆ. JNU ಭೇಟಿ ಬಳಿಕ ಟಿವಿಯಲ್ಲಿ ಅವರ ಜಾಹೀರಾತುಗಳು ಮಾಯವಾಗಲಾರಂಭಿಸಿವೆ. ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿರುವ ವಿವಾದದಿಂದ ಅವರ ಜಾಹೀರಾತುಗಳನ್ನು ಬಿತ್ತರಿಸಲು ವಾಹಿನಿಗಳು ಹಿಂದೇಟು ಹಾಕಿವೆ. ಏನಿಲ್ಲವೆಂದರೂ ಈ ವಿವಾದ ತಣ್ಣಗಾಗುವವರೆ ವಾಹಿನಿಗಳು ಜಾಹೀರಾತು ನೀಡುವ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ. 

ಚಪಕ್‌ ಚಿತ್ರಕ್ಕೆ ಬೆಂಬಲ: ಚಿತ್ರಮಂದಿರದ ಎಲ್ಲ ಟಿಕೆಟ್ ಬುಕ್ ಮಾಡಿದ 'ಕೈ' ಶಾಸಕ

ಸದ್ಯ ದೀಪಿಕಾ ಬಿಸ್ಕಟ್, ಜ್ಯುವೆಲರಿ, ಮೇಕಪ್, ಬ್ಯಾಂಕ್ ಸೇರಿದಂತೆ ಸುಮಾರು 20 ಬ್ರಾಂಡ್ ಗಳ ರಾಯಭಾರಿಯಾಗಿದ್ದಾರೆಂಬುವುದು ಉಲ್ಲೇಖನೀಯ.

 

Follow Us:
Download App:
  • android
  • ios