ರಾಂಛಿ(ಫೆ.17)  ಇದಾವುದೋ ಹಿಂದಿ ಸಿನಿಮಾದ ಕತೆ ಅಂದುಕೊಳ್ಳಬೇಡಿ. ಪತ್ನಿಗೆ ವಂಚಿಸಿ ಗಲ್‌ರ್‍ಫ್ರೆಂಡ್‌ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಜಾರ್ಖಂಡ್‌ನ ವ್ಯಕ್ತಿಯೊಬ್ಬನಿಗೆ ಪೊಲೀಸರು ನೀಡಿರುವ ಆಫರ್‌.

ಇಲ್ಲಿ ಆಗಿದ್ದೇನಪ್ಪಾ ಅಂದರೆ ರಾಜೇಶ್‌ ಮಹತೊ ಎಂಬಾತ ಹೆಂಡತಿ ಮತ್ತು ಮಗುವನ್ನು ಬಿಟ್ಟು ಗಲ್‌ರ್‍ಫ್ರೆಂಡ್‌ ಜೊತೆ ಓಡಿಹೋಗಿದ್ದ. ಬಳಿಕ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು.

ಪಕ್ಕದ ಮನೆಯಾಕೆ ಭೇಟಿಗೆ ಸುರಂಗ, ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತಿರಾಯ!

ಆದರೆ, ರಾಜೇಶ್‌ ಜೊತೆ ಓಡಿ ಹೋಗಿದ್ದ ವೇಳೆ ಮದುವೆ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಬಳಿಕ ರಾಜಿ ಪಂಚಾಯಿತಿ ನಡೆಸಿದ ಪೊಲೀಸರು ಇಂಥದ್ದೊಂದು ಆಫರ್‌ ನೀಡಿದ್ದಾರೆ.

ಇದು ಎರಡೂ ಕುಟುಂಬಗಳಿಗೆ ಒಪ್ಪಿಗೆ ಆಗಿ ಕಾರ್ಯರೂಪಕ್ಕೆ ಬಂದಿತ್ತು. ಆದರೆ, ಒಪ್ಪಂದ ಮುರಿದ ಕಾರಣಕ್ಕೆ ರಾಜೇಶ್‌ ವಿರುದ್ಧ ಆತನ ಸ್ನೇಹಿತೆ ಈಗ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾಳೆ.