ಕಾಶ್ಮೀರ ಬದಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕಾಶ್ಮೀರದ ಅತ್ಯಂತ ಎರಡು ಕುಗ್ರಾಮಗಳಿಗೆ ಬುಧವಾರ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಸ್ವಾತಂತ್ರ್ಯ ಪಡೆದ 75 ವರ್ಷಗಳ ಬಳಿಕ ಎಲ್‌ಓಸಿ ಬಳಿಯ ಈ ಹಳ್ಳಿಗಳು ವಿದ್ಯುತ್‌ ಪಡೆದುಕೊಂಡಿದೆ. 

ಶ್ರೀನಗರ (ಜ.4): ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ಹಳ್ಳಿಗೂ ವಿದ್ಯುತ್‌ ಸಂಪರ್ಕ ನೀಡುವ ಮಹತ್ವಾಕಾಂಕ್ಷಿ ನಿರ್ಧಾರದ ದೊಡ್ಡ ಯಶಸ್ಸು ಎನ್ನುವಂತೆ ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕ ಜಮ್ಮ ಕಾಶ್ಮೀರದ ಎಲ್‌ಓಸಿಯಲ್ಲಿದ್ದ ಎರಡು ಪುಟ್ಟ ಹಳ್ಳಿ ಬುಧವಾರ ಮೊಟ್ಟಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ ಕೇರಾನ್ ವಲಯದ ಗಡಿ ನಿಯಂತ್ರಣ ರೇಖೆಯ ಎರಡು ಕುಗ್ರಾಮಗಳಿಗೆ ಬುಧವಾರ ಮೊದಲ ಬಾರಿಗೆ ವಿದ್ಯುತ್ ನೀಡಲಾಗಿದೆ. "ಐತಿಹಾಸಿಕ ಕ್ಷಣದಲ್ಲಿ, ಕುಪ್ವಾರದ ಕೇರಾನ್ ಪ್ರದೇಶದ ಕುಂಡಿಯನ್ ಮತ್ತು ಪತ್ರೂ ಗ್ರಾಮಗಳ ನಿವಾಸಿಗಳು ಜಿಲ್ಲೆಯು 75 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂತೋಷವನ್ನು ಕಂಡಿದ್ದಾರೆ' ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಸಮೃದ್ಧ್ ಸೀಮಾ ಯೋಜನೆಯಡಿ ಸ್ಥಾಪಿಸಲಾದ ಎರಡು 250-ಕೆವಿ ಉಪ ಕೇಂದ್ರಗಳನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಉದ್ಘಾಟಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಆಡಳಿತಕ್ಕೆ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಹೊಸ ಗ್ರಿಡ್‌ ಸಂಪರ್ಕದೊಂದಿಗೆ ಈ ಎರಡೂ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ.

"ದೀಪಗಳು ಅವರ ಮನೆಗಳನ್ನು ಬೆಳಗಿಸುತ್ತಿದ್ದಂತೆ ಹರ್ಷೋದ್ಗಾರಗಳುಇಡೀ ಹಳ್ಳಿಯಲ್ಲಿ ತುಂಬಿತ್ತು. ಇದು ದಶಕಗಳ ಕಾಲ ಕಾಯುವಿಕೆಯ ಅಂತ್ಯವನ್ನು ಸೂಚಿಸುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ ಕಾಶ್ಮೀರ ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಡಿಸಿಎಲ್) ಎಲೆಕ್ಟ್ರಿಕ್ ವಿಭಾಗ, ಕುಪ್ವಾರದಿಂದ ಎರಡು ತಿಂಗಳಲ್ಲಿ ವಿದ್ಯುದ್ದೀಕರಣ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಎರಡೂ ಹಳ್ಳಿಗಳಲ್ಲಿ ಅಂದಾಜು 1300 ಮಂದಿ ವಾಸವಿದ್ದಾರೆ. ಸ್ಥಳೀಯರೊಂದಿಗೆ ಸಂವಾದ ನಡೆಸಲು ಈ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ.

ಬದಲಾವಣೆಗೆ ಸಾಕ್ಷಿಯಾದ ಕಾಶ್ಮೀರ, ಲಾಲ್‌ಚೌಕ್‌ನಲ್ಲಿ ಹಿಂದೆಂದೂ ಕಂಡಿರದ ಹೊಸ ವರ್ಷದ ಸಂಭ್ರಮ!

ಪತ್ರೂ ಮತ್ತು ಕುಂಡಿಯನ್ ತಲುಪಿದ ಜಿಲ್ಲಾಧಿಕಾರಿ ಆಯುಷಿ ಸುದನ್‌ ಅವರು ಮೊದಲ ಬಾರಿಗೆ ಗ್ರಿಡ್ ಸಂಪರ್ಕವನ್ನು ಪಡೆದ ಜನರು ಮತ್ತು ಪಿಆರ್‌ಐಗಳನ್ನು ಅಭಿನಂದಿಸಿದರು. ಅದ್ಭುತವಾಗಿ ಕೆಲಸ ಮಾಡಲಾಗಿದೆ. ಎಲ್ಲವನ್ನೂ ಮಿಷನ್‌ ಮೋಡ್‌ನಲ್ಲಿ ಕಾರ್ಯನಿರ್ವಹಿಸಲಾಗಿದೆ. ಎರಡು ತಿಂಗಳ ಅವಧಿಯ ಒಳಗೆ ಈ ಹಳ್ಳಿಗಳಿಗೆ ವಿದ್ಯುತ್‌ ನೀಡಲಾಗಿದೆ. ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಂದ ಪಿಡಿಡಿಯ ಲೈನ್ ಮೆನ್, ಸ್ಥಳೀಯ ಪಿಆರ್‌ಐಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರು ಎಲ್ಲರೂ ಕೊಡುಗೆ ನೀಡಿದ್ದಾರೆ. ಎರಡು ತಿಂಗಳ ಹಿಂದೆಯೇ ಈ ಯೋಜನೆಗೆ ಅನುಮೋದನೆ ಮತ್ತು ಹಂಚಿಕೆ ಮಾಡಿದ್ದರಿಂದ ಇದು ತಳಮಟ್ಟದಲ್ಲಿ ಪರಿವರ್ತನೆಯ ದೊಡ್ಡ ಸಾಧನೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕೇಂದ್ರದಿಂದ ಮತ್ತೊಂದು ಸ್ಟ್ರೋಕ್, ಕಾಶ್ಮೀರದ ತೆಹ್ರೀಕ್ ಇ ಹುರಿಯತ್ ಸಂಘಟನೆ ನಿಷೇಧ!

ದತ್ತ ಸೇತುವೆಯಿಂದ ಕೇರನ್‌ವರೆಗಿನ ರಸ್ತೆಯನ್ನು ಬೀಕನ್‌ಗೆ ಹಸ್ತಾಂತರಿಸಲಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಕೆರಾನ್‌ನ ಎಲ್ಲಾ ಗ್ರಾಮಗಳು ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್‌ ಪಡೆದುಕೊಳ್ಳಲಿದೆ ಎಂದಿದ್ದಾರೆ. ಪ್ರದೇಶಕ್ಕೆ ಸೆಲ್ ಫೋನ್ ಸಂಪರ್ಕವನ್ನು ಒದಗಿಸಲು ಮತ್ತು ಹೆಚ್ಚಿಸಲು ಏರ್‌ಟೆಲ್ ಮತ್ತು ಜಿಯೋ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ.