Asianet Suvarna News Asianet Suvarna News

63 ವರ್ಷಗಳ ಬಳಿಕ ಗುಜರಾತಲ್ಲಿ ಸಾರಾಯಿ ನಿಷೇಧಕ್ಕೆ ಕೊಂಚ ಸಡಿಲ

ಪಾನ್ ನಿಷೇಧ ಇರುವ ಗುಜರಾತ್‌ನಲ್ಲಿ ನಿಯಮವನ್ನು ಕೊಂಚ ಸಡಿಲಿಸಲಾಗಿದೆ. ಗಾಂಧಿನಗರದ ಬಳಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಔದ್ಯಮಿಕ ನಗರವಾದ 'ಗಿಫ್ಟ್‌ಸಿಟಿ'ಯಲ್ಲಿ (ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ) ಮದ್ಯಸೇವನೆಗೆ ಅನುಮತಿ ನೀಡಲಾಗಿದೆ.

After 63 years drinking ban removed in Gujarat Consumption of alcohol is allowed in Gift City akb
Author
First Published Dec 24, 2023, 9:27 AM IST

ಅಹಮದಾಬಾದ್: ಪಾನ್ ನಿಷೇಧ ಇರುವ ಗುಜರಾತ್‌ನಲ್ಲಿ ನಿಯಮವನ್ನು ಕೊಂಚ ಸಡಿಲಿಸಲಾಗಿದೆ. ಗಾಂಧಿನಗರದ ಬಳಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಔದ್ಯಮಿಕ ನಗರವಾದ 'ಗಿಫ್ಟ್‌ಸಿಟಿ'ಯಲ್ಲಿ (ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ) ಮದ್ಯಸೇವನೆಗೆ ಅನುಮತಿ ನೀಡಲಾಗಿದೆ. ಗಿಫ್ಟ್‌ ಸಿಟಿಯಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಜಾಗತಿಕ ಪರಿಸರವನ್ನು ಸೃಷ್ಟಿ ಮಾಡುವುದಕ್ಕಾಗಿ ಈ ಅನುಮತಿ ನೀಡಲಾಗಿದೆ. ಆದರೆ ಈ ನಗರದ ಹೊರಭಾಗದಲ್ಲಿ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗಿದೆ.

ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮಾತ್ರ ಗಿಫ್ಟ್‌ ಸಿಟಿಯ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಲಬ್‌ಗಳಲ್ಲಿ ಮದ್ಯ ಸೇವಿಸಬಹುದಾಗಿದೆ. ಒಂದು ಹೊರ ರಾಜ್ಯದ ಉದ್ಯೋಗಿಗಳು/ ಉದ್ಯಮಪತಿಗಳು ಗಿಫ್ಟ್‌ ಸಿಟಿಗೆ ಭೇಟಿ ನೀಡಿದರೆ ಇಲ್ಲಿರುವ ಉದ್ಯೋಗಿಗಳ ಜೊತೆ ಮಾತ್ರ ಮದ್ಯ ಸೇವನೆಗೆ ಅವಕಾಶ ಒದಗಿಸಲಾಗಿದೆ.

Bengaluru : ಪಾರ್ಟಿಯಲ್ಲಿ ಎಣ್ಣೆ ಜಾಸ್ತಿ ಬೇಡವೆಂದ ಗೆಳೆಯನನ್ನೇ ಕೊಲೆಗೈದ ಸ್ನೇಹಿತ!

ಆಕ್ಷೇಪ-ಸಮರ್ಥನೆ:

ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಗಿಫ್ಟ್‌ ಸಿಟಿಯಲ್ಲಿ ಮದ್ಯ ನಿಷೇಧ ತೆರವು ಮಾಡಿರುವುದಾಗಿ ಘೋಷಿಸಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಏಕತಾ ಪ್ರತಿಮೆಯ ಬಳಿ ಹಾಗೂ ಸೂರತ್‌ನ ಡೈಮಂಡ್‌ ನಗರಗಳ ಬಳಿ ಮದ್ಯ ನಿಷೇಧವನ್ನು ತೆರವು ಮಾಡುತ್ತಾರೆ. ಇದು ರಾಜ್ಯದ ಯುವಕರನ್ನು ಹಾಳು ಮಾಡುತ್ತದೆ ಎಂದು ಕಿಡಿಕಾರಿವೆ.

ಆದರೆ ವಿದೇಶದಿಂದ ಹಾಗೂ ಹೊರರಾಜ್ಯಗಳಿಂದ ಗಿಫ್ಟ್‌ ಸಿಟಿಗೆ ಹೆಚ್ಚು ಜನರು ಬರುತ್ತಾರೆ. ಅವರ ದೇಶ/ರಾಜ್ಯಗಳಲ್ಲಿ ಮದ್ಯ ನಿಷೇಧ ಇರುವುದಿಲ್ಲ ಹಾಗೂ ಅವರು ಮದ್ಯ ಸೇವನೆಗೆ ಒಗ್ಗಿಕೊಂಡಿರುತ್ತಾರೆ. ಹೀಗಾಗಿ ಅವರ ಅನುಕೂಲಕ್ಕೋಸ್ಕರ ಗಿಫ್ಟ್‌ ಸಿಟಿಗೆ ಸೀಮಿತವಾಗಿ ಮದ್ಯ ನಿಷೇಧ ತೆರವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಜರಾತ್ ಸರ್ಕಾರ ಸ್ಪಷ್ಟಪಡಿಸಿದೆ.

ಈ ದಂಪತಿ ಜೀವನದಲ್ಲಿ ಆಲ್ಕೋಹಾಲ್ ವಿಲನ್, ಸಂಸಾರವೇ ನುಚ್ಚು ನೂರು!

Follow Us:
Download App:
  • android
  • ios