ಕೇರಳದಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೇವಿಷ್ (ಯಹೂದಿ) ಸಮುದಾಯದ ವಿವಾಹವೊಂದು ಅದ್ದೂರಿಯಾಗಿ ನಡೆದಿದ್ದು, ಇದು ದೇವರ ನಾಡಲ್ಲಿ ಯಹೂದಿ ಮದುವೆ ಸಂಪ್ರದಾಯದ ಘಮಲನ್ನು ಪಸರಿಸಿತ್ತು.

ಕೊಚ್ಚಿ: ಕೇರಳದಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೇವಿಷ್ (ಯಹೂದಿ) ಸಮುದಾಯದ ವಿವಾಹವೊಂದು ಅದ್ದೂರಿಯಾಗಿ ನಡೆದಿದ್ದು, ಇದು ದೇವರ ನಾಡಲ್ಲಿ ಯಹೂದಿ ಮದುವೆ ಸಂಪ್ರದಾಯದ ಘಮಲನ್ನು ಪಸರಿಸಿತ್ತು. ಕೊಚ್ಚಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವರರ ಕುಟುಂಬದವರು, ಸ್ನೇಹಿತರು, ಬಂಧುಗಳು, ಸಮುದಾಯದ ಸದಸ್ಯರು ಭಾಗಿಯಾಗಿದ್ದರು. ಈ ವಿವಾಹಕ್ಕಾಗಿ ಇಸ್ರೇಲ್‌ನಿಂದ ಓರ್ವ ರಬ್ಬಿಯನ್ನು ಕರೆಸಲಾಗಿತ್ತು. (ರಬ್ಬಿ ಎಂದರೆ ಜೇವಿಶ್‌ ಸ್ಕಾಲರ್ ಆಗಿದ್ದು, ಆ ಧರ್ಮದ ಸಂಪ್ರದಾಯ ವಿಚಾರಗಳನ್ನು ಧಾರೆ ಎರೆಯುವವರು)

ಅಪರಾಧ ವಿಭಾಗದ ಮಾಜಿ ಎಸ್‌ಪಿ ಬಿನೋಯ್ ಮಲಖೈ ( Benoy Malakhai) ಅವರ ಪುತ್ರಿ ಅಮೆರಿಕಾದಲ್ಲಿ ಡಾಟಾ ಸೈಂಟಿಸ್ಟ್ ಆಗಿದ್ದ ವಧು ರಾಚೆಲ್ ಮಲಖೈ (Rachel Malakhai) ಅವರು ಅಮೆರಿಕಾದ ಪ್ರಜೆ ಹಾಗೂ ನಾಗರಿಕನಾಗಿರುವ ಹಾಗೂ ನಾಸಾದಲ್ಲಿ ಉದ್ಯೋಗಿಯಾಗಿರುವ ರಿಚರ್ಡ್ ಝಛರಿ ರೊವೆ (Richard Zachary Rowe) ಅವರೊಂದಿಗೆ ಸಪ್ತಪದಿ ತುಳಿದರು. ಇಸ್ರೇಲ್‌ನಿಂದ ಬಂದಿದ್ದ ರಬ್ಬಿ, ಏರಿಯಲ್ ಟೈಸನ್ (Ariel Tyson) ಈ ವಿವಾಹವನ್ನು ಜೇವಿಷ್ ಸಂಪ್ರದಾಯದಂತೆ ನಡೆಸಿಕೊಟ್ಟಿದ್ದಾರೆ. 

ಜೆರುಸಲೆಂ ಮಸೀದಿಗೆ ಪೊಲೀಸರ ಪ್ರವೇಶ: ಭುಗಿಲೆದ್ದ ಸಂಘರ್ಷ

ಈ ವಿವಾಹ ಸಮಾರಂಭವೂ ಮನೆಯನ್ನು ಸಾಂಕೇತಿಸುವ ಹುಪ್ಪಾದ ( ಜೇವಿಷ್ ಸಮುದಾಯದಲ್ಲಿ ವಿವಾಹದ ವೇಳ ವಧು ವರರು ಈ ಹುಪ್ಪಾ ಎಂದು ಕರೆಯಲ್ಪಡುವ ಬಟ್ಟೆಯ ಚಪ್ಪರದ ಕೆಳಗೆ ನಿಲ್ಲುತ್ತಾರೆ) ಕೆಳಗೆ ನಡೆಯಿತು. ಇದು ಕೇರಳದಲ್ಲಿ ನಡೆದ ಮೊದಲ ಜೇವಿಷ್ ಸಮುದಾಯದ ವಿವಾಹವಾಗಿದೆ ಎಂದು ಜೇವಿಷ್ ಸಮುದಾಯದ ಮೂಲಗಳು ಹೇಳಿವೆ. ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ವಿವಾಹ ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಕೊನೆಯ ಯಹೂದಿ ವಿವಾಹವು 2008 ರಲ್ಲಿ ಸುಮಾರು ಎರಡು ದಶಕಗಳ ಹಿಂದೆ ಮಟ್ಟಂಚೇರಿಯ (Mattancherry) ತೆಕ್ಕುಂಭಾಗಂ (Thekkumbhagam) ಸಿನಗಾಗ್‌ನಲ್ಲಿ ನಡೆದಿತ್ತು.

ಸಿನಗಾಗ್‌ನೊಳಗೆ (synagogue)(ಸಿನಗಾಗ್‌ ಎಂದರೆ ಧಾರ್ಮಿಕ ಆರಾಧನೆ ಮತ್ತು ಸೂಚನೆಗಾಗಿ ಯಹೂದಿ ಸಮುದಾಯ ಒಟ್ಟು ಸೇರುವ ಕಟ್ಟಡ ಧಾರ್ಮಿಕ ಸ್ಥಳ ) .ಭಾಗವಹಿಸುವವರ ಸಂಖ್ಯೆ ಸೀಮಿತವಾಗಿದ್ದರಿಂದ, ಇತರ ಕುಟುಂಬ ಸದಸ್ಯರಿಗೂ ಆಚರಣೆಗಳಲ್ಲಿ ಸಾಕ್ಷಿಯಾಗಲು ಅವಕಾಶ ನೀಡುವ ಸಲುವಾಗಿ ಖಾಸಗಿ ರೆಸಾರ್ಟ್‌ನಲ್ಲಿ ಈ ಸಮಾರಂಭವನ್ನು ನಡೆಸಲು ಕುಟುಂಬಗಳು ನಿರ್ಧರಿಸಿದವು. ಈ ಅಪರೂಪದ ವಿವಾಹೋತ್ಸವ ವೀಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

Texas hostage case ಪಾಕ್ ಸುಂದರಿಗೆ 86 ವರ್ಷ ಜೈಲು ಶಿಕ್ಷೆ, ಈಕೆಯ ಬಿಡುಗಡೆಗಾಗಿ ಅಮೆರಿಕ ಚರ್ಚ್ ಮೇಲೆ ಉಗ್ರರ ದಾಳಿ!

ಕೆಲವು ಇತಿಹಾಸಕಾರರ (historians) ಪ್ರಕಾರ, ಕೇರಳವನ್ನು ತಲುಪಿದ ಮೊದಲ ಯಹೂದಿಗಳು ವ್ಯಾಪಾರಿಗಳಾಗಿದ್ದರು ಮತ್ತು ಅವರು 2,000 ವರ್ಷಗಳ ಹಿಂದೆ ರಾಜ ಸೊಲೊಮೋನನ ಕಾಲದಲ್ಲಿ ಬಂದಿದ್ದರು. ಪ್ರಸ್ತುತ ರಾಜ್ಯದಲ್ಲಿ ಕೆಲವೇ ಕೆಲವು ಯಹೂದಿ ಕುಟುಂಬಗಳು ಉಳಿದಿವೆ.

Scroll to load tweet…