* ನೆರೆಯ ಅಫ್ಘಾನಿಸ್ತಾನದಿಂದ ಸಾಗಿಸಲಾಗಿದ್ದ ಹೆರಾಯಿನ್‌* ಗುಜರಾತ್‌ ಬಂದರ 19,000 ಕೋಟಿ ಮೌಲ್ಯದ ಹೆರಾಯಿನ್‌ ಜಪ್ತಿ

ಅಹಮದಾಬಾದ್‌(ಸೆ.21): ನೆರೆಯ ಅಫ್ಘಾನಿಸ್ತಾನದಿಂದ ಸಾಗಿಸಲಾಗಿದ್ದ ಸುಮಾರು 19 ಸಾವಿರ ಕೋಟಿ ರು.ಗೂ ಹೆಚ್ಚು ಮೌಲ್ಯದ 3 ಟನ್‌ನಷ್ಟುಹೆರಾಯಿನ್‌ ಅನ್ನು ಗುಜರಾತ್‌ ಬಂದರು ಪ್ರದೇಶದಲ್ಲಿ ಜಪ್ತಿ ಮಾಡಲಾಗಿದೆ. ಅಲ್ಲದೆ ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಬಗ್ಗೆ ಸೋಮವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಷ್ಘಾನಿಸ್ತಾನದಿಂದ ಇರಾನ್‌ ಮೂಲ​ಕ​ ಬಂದ 2 ಕಂಟೇನರ್‌ಗಳಲ್ಲಿ ಕ್ರಮವಾಗಿ 1000 ಕೇಜಿ ಮತ್ತು 2000 ಕೇಜಿಯಷ್ಟು ಹೆರಾಯಿನ್‌ ಅನ್ನು ಗುಜರಾತ್‌ನ ಮುಂದ್ರಾ ಬಂದರು ಪ್ರದೇಶದಲ್ಲಿ ವಶಕ್ಕೆ ಪಡೆದರು. ಅಲ್ಲದೆ ಅಹಮದಾಬಾದ್‌, ದೆಹಲಿ, ಚೆನ್ನೈ, ಗಾಂಧಿಧಾಮ ಮತ್ತು ಮಾಂಡ್ವಿಯಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು.

ವಿಶ್ವಕ್ಕೆ ಪೂರೈಕೆಯಾಗುವ ಒಟ್ಟಾರೆ ಹೆರಾಯಿನ್‌ ಪೈಕಿ ಶೇ.80-90ರಷ್ಟುಹೆರಾಯಿನ್‌ ಆಫ್ಘನ್‌ನಲ್ಲೇ ಉತ್ಪಾದಿಸಲಾಗುತ್ತದೆ. ಜೊತೆಗೆ ಇತ್ತೀಚೆಗಷ್ಟೇ ಪ್ರಜಾಪ್ರಭುತ್ವ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರ ಸ್ಥಾಪಿಸಿದ ತಾಲಿಬಾನ್‌ ಉಗ್ರರಿಗೂ ಹೆರಾಯಿನ್‌ ಪ್ರಮುಖ ಆದಾಯದ ಮೂಲವಾಗಿದೆ.