ವರದಿ: ಅನೀಶ್ ಕುಮಾರ್

ಬೆಂಗಳೂರು(ಜ.30): ಏರೋ ಇಂಡಿಯಾ 2021 ಆಯೋಜನೆಗೆ ಅಂತಿಮ ತಯಾರಿ ನಡೆಯುತ್ತಿದೆ. ವೈಮಾನಿಕ ಪ್ರದರ್ಶನಕ್ಕೆ ಯಾವುದೇ ಅಡಚಣೆಯಾಗದಂತೆ ಮುನ್ನಚ್ಚೆರಿಕಾ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ. ಇದರಲ್ಲಿ ಪ್ರಮುಖವಾಗಿ ಈ ಬಾರಿಯ ಏರ್ ಶೋದಲ್ಲಿ ಅಮೆರಿಕ ಉಪಸ್ಥಿತಿ ಎದ್ದು ಕಾಣಲಿದೆ.

ಏರೋ ಇಂಡಿಯಾ ಶೋ ಬೆಂಗಳೂರು: ಫೆ.1 ರಿಂದ ಆಗಸದಲ್ಲಿ ವೈಮಾನಿಕ ಹಾರಾಟಕ್ಕೆ ನಿಷೇಧ!.

ಫೆಬ್ರವರಿ 3 ರಿಂದ 5ರ ವರೆಗೆ ನಡೆಯಲಿರುವ ಏರೋ ಇಂಡಿಯಾ ಶೋನಲ್ಲಿ ಬೋಯಿಂಗ್, ಜಿಇ ಎವಿಯೇಶನ್, ಜನರಲ್ ಆಟೋಮಿಕ್ಸ್, ಹೈ ಟೆಕ್ ಇಂಪೋರ್ಟ್-ಎಕ್ಸ್‌ಪೋರ್ಟ್ ಕಾರ್ಪೋರೇಶನ್, L3ಹ್ಯಾರಿಸ್, ಲಾಕ್‌ಹೀಡ್ ಮಾರ್ಟೀನ್,ರೇಥಾನ್, ಟ್ರಕ್ಕಾ ಸಿಸ್ಟಮ್ ಸೇರಿದಂತೆ ಅಮೆರಿಕ ಪ್ರಮುಖ ಏರ್‌ಕ್ರಾಫ್ಟ್ ಕಂಪನಿಗಳು ವಿವಿಧ ಏರ್‌ಕ್ರಾಫ್ಟ್‌ಗಳು ಪ್ರದರ್ಶನಗೊಳ್ಳಲಿದೆ.

ಏರೋ ಇಂಡಿಯಾ; ಕೆಲ ವಿಮಾನ ಬಂದ್, ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ಯುಎಸ್ ಚಾರ್ಜ್ ಅಫೈರ್ಸ್‌ನ ಡಾನ್ ಹೆಫ್ಲನ್ ಉನ್ನತ ಮಟ್ಟದ ನಿಯೋಗ, ಏರೋ ಇಂಡಿಯಾ ಶೋ ಪ್ರತಿನಿಧಿಸಲಿದೆ. ಪ್ರತಿಷ್ಠಿತ ಏರೋ ಇಂಡಿಯಾ ಶೋದಲ್ಲಿ ಈ ಬಾರಿ ಅಮೆರಿಕ ನಿಯೋಗ ಮುನ್ನಡೆಸುತ್ತಿರುವುದಕ್ಕೆ ಅತೀವ ಸಂತಸವಿದೆ. ಅಮೆರಿಕ-ಭಾರತ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆ ಮುಂದುವರಿಯಲಿದೆ. ಇಷ್ಟೇ ಅಲ್ಲ ಭಾರತ ನಮ್ಮ ಅತೀ ದೊಡ್ಡ ರಕ್ಷಣಾ ಪಾಲುದಾರ ಎಂದು ಡಾನ್ ಹೆಫ್ಲನ್ ಹೇಳಿದ್ದಾರೆ.

“ಏರೋ ಇಂಡಿಯಾ 2021 ನಮ್ಮ ದೇಶಗಳ ನಡುವಿನ ಅತ್ಯಂತ ಅಪ್ತ ದ್ವಿಪಕ್ಷೀಯ ರಕ್ಷಣಾ ಸಂಬಂಧದ ಮುಂದುವರಿಕೆಯ ಪ್ರತೀಕವಾಗಿದ್ದು ಮುಕ್ತ ಹಾಗೂ ಸ್ವತಂತ್ರ ಇಂಡೊ ಪೆಸಿಫಿಕ್ ಪ್ರದೇಶದ ಬಗ್ಗೆ ಇರುವ ದೂರದೃಷ್ಟಿಯ ಭಾಗವಾಗಿದೆ ಎಂದು ಡಾನ್ ಹೆಫ್ಲನ್ ಹೇಳಿದ್ದಾರೆ.
 
ಏರೋ ಇಂಡಿಯಾ 2021 ರಲ್ಲಿ ಅಮೆರಿಕದ ಭಾಗವಹಿಸುವಿಕೆಯು ಅಮೆರಿಕದ ಉದ್ಯಮಗಳು ಹಾಗೂ ಅಮೆರಿಕನ್ ರಕ್ಷಣಾ ಸೇವೆಗಳಿಗೆ ಭಾರತದೊಂದಿಗೆ ಹೆಚ್ಚಿನ ’ಮಿಲಿಟರಿಯಿಂದ-ಮಿಲಿಟರಿಗೆ’ ರಕ್ಷಣಾ ಸಂಬಂಧಗಳನ್ನು ಹೊಂದಲು ಅವಕಾಶವಾಗುತ್ತದೆ.  ಎರಡೂ ಸೇನೆಗಳು ಇಂಡೋ ಪೆಸಿಫಿಕ್ ನಲ್ಲಿ ನಿಯಮಾಧಾರವಾದ ಅಂತರ್ರಾಷ್ಟ್ರೀಯ ವ್ಯವಸ್ಥೆಯನ್ನು ಮುಂದುವರೆಸಲು ಕಾರ್ಯನಿರ್ವಹಿಸುತ್ತವೆ. ಏರೋ ಇಂಡಿಯಾ 2021 ರಲ್ಲಿ ಅಮೆರಿಕದ ಸಾರ್ವಜನಿಕ ಹಾಗೂ ಖಾಸಗೀ ಭಾಗವಹಿಸುವಿಕೆಯು ಕಾರ್ಯತಂತ್ರ ಸಹಭಾಗಿಯಾಗಿ ಭಾರತಕ್ಕೆ ಇರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. 
 
ಅಮೆರಿಕದ ಪ್ರಮುಖ ರಕ್ಷಣಾ ಕಂಪನಿಗಳು ಸೇರಿದಂತೆ ಏರೋ ಇಂಡಿಯಾ 2021 ನಲ್ಲಿ ಏರೋಸ್ಪೇಸ್ ಕ್ವಾಲಿಟಿ ರೀಸರ್ಚ್ ಅಂಡ್ ಡೆವಲಪ್ಮೆಂಟ್ ಎಲ್ ಎಲ್ ಸಿ ಏರ್ ಬಾರ್ನ ಇಂಕ್, ಬೋಯಿಂಗ್, IE ಎಚ್ ಕಾರ್ಪೋರೇಷನ್, GE ಏವಿಯೇಷನ್, ಜನರಲ್ ಆಟೊಮಿಕ್ಸ್, ಹೈ ಟೆಕ್ ಇಂಪೋರ್ಟ್ ಎಕ್ಸ್ಪೋರ್ಟ್ ಕಾರ್ಪೋರೇಷನ್, ಎಲ್ ಥ್ರೀ ಹ್ಯಾರಿಸ್, ಲಾವೆರ್ಸಬ್ ಇಂಡಿಯಾ, ಲಾಕ್ ಹೀಡ್ ಮಾರ್ಟಿನ್, ರೇದಿಯಾನ್, ಹಾಗೂ ತ್ರಾಕಾ ಸಿಸ್ಟಂಸ್ ಭಾಗವಹಿಸುತ್ತಿವೆ.  
 
ಈ ಪ್ರದರ್ಶನದ ಅತಿ ಮುಖ್ಯ ಆಕರ್ಷಣೆ ಎಂದರೆ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ನೀಡಲಿರುವ ’ಫ್ಲೈ ಬೈ’ ಪ್ರದರ್ಶನ. 28ನೇ ಬಾಂಬ್ ವಿಂಗ್ ಗೆ ಸೇರಿದ ಎಲ್ಸ್ ವರ್ತ್ ವಾಯು ನೆಲೆ ಬೇಸ್, ದಕ್ಷಿಣ ಡಕೋಟಾದಲ್ಲಿರುವ ಲ್ಯಾನ್ಸರ್ ಹೆವಿ ಬಾಂಬರ್ ಆಗಿದ್ದು, ಅಮೆರಿಕದ ನೆಲೆಗಳಿಂದ ಉದ್ದೇಶಿತ ಮಿಶನ್ ಗಳನ್ನು ಹಾಗೂ ಫಾರ್ವರ್ಡ್ ಡಿಪ್ಲಾಯ್ ಆಗಿರುವ ಸ್ಥಳಗಳಿಂದ ಮಿಷನ್ ಗಳನ್ನು ಪೂರೈಸಿದೆ. ಅಮೆರಿಕದಲ್ಲೇ ಅತ್ಯಂತ ಹೆಚ್ಚು ಸಾಂಪ್ರದಾಯಿಕ ಪೇ ಲೋಡ್ ಹೊತ್ತು ನಿರ್ದೇಶಿತ ಮತ್ತು ಅನಿರ್ದೇಶಿತ ವೆಪನ್ ಗಳನ್ನು ಸಾಗಿಸುತ್ತದೆ. ಇದು ಅಮೆರಿಕದ ಲಾಂಗ್-ರೇಂಜ್ ಬಾಂಬರ್ ಫೋರ್ಸ್ ಗೆ  ಇರುವ ಬೆನ್ನೆಲುಬು ಎಂದೇ ಹೇಳಲಾಗುತ್ತದೆ.     

ಅಮೆರಿಕ ಸರ್ಕಾರದ ನಿಯೋಗದ ವಿವರ:
ಡಾನ್ ಹೆಫ್ಲಿನ್ ಛಾರ್ಜೆ ಡಿ ಆಫೇರ್ಸ್, AI
ಮಿಸ್. ಕೆಲ್ಲಿ ಎಲ್, ಸೇಯ್ಬಾಲ್ಟ್ ಏರ್ ಫೋರ್ಸ್, ಉಪ ಅಧೀನಾಧಿಕಾರಿಗಳು, ಅಂತರಾಷ್ಟ್ರೀಯ ವ್ಯವಹಾರ 
ಲೆಫ್ಟಿನೆಂಟ್ ಜನರಲ್ ಡೇವಿಡ್ A ಕ್ರಮ್, 11ನೆ ವಾಯುಸೇನಾ ಕಮಾಂಡರ್
ಮೇಜರ್ ಜನರಲ್ ಮಾರ್ಕ್ ಈ ವೆದರಿಂಗ್ಟನ್, 8ನೇ ವಾಯುಸೇನಾ  ಕಮಾಂಡರ್
ಬ್ರಿಗೇಡಿಯರ್ ಜನರಲ್ ಬ್ರಯನ್ ಬ್ರಕ್ಬಾರ್, ನಿರ್ದೇಶಕರು - ವಾಯುಸೇನಾ ರಕ್ಷಣಾ ಸಹಕಾರ ಮತ್ತು ಸಹಯೋಗ ನಿರ್ದೇಶನಾಲಯ 
ಜುಡಿತ್ ರವಿನ್, ಕೌನ್ಸಲ್ ಜನರಲ್, ಅಮೆರಿಕ ದೂತಾವಾಸ, ಚೆನ್ನೈ
ಐಲೀನ್ ನಂದಿ, ವಾಣಿಜ್ಯ ವ್ಯವಹಾರ ಆಪ್ತ ಸಚಿವರು. ಅಮೆರಿಕ ವಾಣಿಜ್ಯ ಸೇವೆ, 
ರೇರ್ ಅಡ್ಮಿರಲ್ ಐಲೀನ್ ಲೌಬಾಷರ್, ಡಿಫೆನ್ಸ್ ಅಟಾಚೆ, ಅಮೆರಿಕ ದೂತಾವಾಸ, ನವ ದೆಹಲಿ