ಬೆಂಗಳೂರು(ಜ.30):  ಏರೋ ಇಂಡಿಯಾ ಶೋಗೆ ಬೆಂಗಳೂರು ಸಜ್ಜಾಗಿದೆ. ಈ ಬಾರಿಯ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಡಚಣೆ ಇಲ್ಲದೆ ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಏರ್ ಶೋ ಹಿನ್ನಲೆಯಲ್ಲಿ ಫೆಬ್ರವರಿ 1 ರಿಂದ ಫೆಬ್ರವರಿ 8 ರವರೆಗೆ ಆಗಸದಲ್ಲಿ ವೈಮಾನಿಕ ಹಾರಾಟಕ್ಕೆ ನಿಷೇಧ ಹೇರಲಾಗಿದೆ.

ಏರ್‌ ಶೋ ಹಿನ್ನೆಲೆ: ವಿಮಾನಗಳ ಹಾರಾಟ ಸಮಯದಲ್ಲಿ ವ್ಯತ್ಯಯ.

ವೈಮಾನಿಕ ಹಾರಾಟ ನಿಷೇಧ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಡ್ರೋಣ್ ,ಪ್ಯಾರಾ ಶೂಟ್, ಮೈಕ್ರೋ ಲೈಟ್ಸ್, ಸಣ್ಣ ಪ್ರಮಾಣದ ಏರ್ ಕ್ರಾಪ್ಟ್, ಬಲೂನ್, ಏರಿಯಲ್ ವೆಹಿಕಲ್ಸ್, ರೊಬೊಟಿಕ್ ಆಟೋಮಷಿನ್ ಗಳಿಗೆ ನಿಷೇಧ ಹೇರಲಾಗಿದೆ. 

ಗಾಳಿಪಟ ಹಾರಿಸುವುದು ಹಾಗೂ ಪಾರಿವಾಳಗಳ ಹಾರಾಟ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 3 ರಿಂದ 5ರ ವರೆಗೆ ಏರ್ ಶೋ ನಡೆಯಲಿದೆ. ಆದರೆ ಕೆಲ ಅಭ್ಯಾಸ, ಕಸರತ್ತುಗಳು ಫೆಬ್ರವರಿ 1 ರಿಂದ ಆರಂಭಗೊಳ್ಳಲಿದೆ. ಹೀಗಾಗಿ ಏರ್ ಶೋ ವೇಳೆ ವಿಮಾನ ಹಾರಟಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.