Asianet Suvarna News Asianet Suvarna News

Aero India 2023 ಈ ಬಾರಿಯ ಏರ್ ಶೋನಲ್ಲಿತ್ತು ಹಲವು ವಿಶೇಷತೆ, ಸಾಹಸ ಪ್ರದರ್ಶನದ ನಡುವೆ ವಹಿವಾಟು ದಾಖಲೆ!

ಬೆಂಗಳೂರಿನಲ್ಲಿ ನಡೆಯುತ್ತಿರು ಏರೋ ಇಂಡಿಯಾ ಶೋ ಇಂದು ಕೊನೆಯ ದಿನ. ಫೆಬ್ರವರಿ 13 ರಿಂದ ಇಲ್ಲೀವರೆಗೆ ಏರ್ ಶೋನಲ್ಲಿ ನಡೆದ ಸಾಹಸ ಪ್ರದರ್ಶನ, ಕುದುರಿದ ವ್ಯವಹಾರ, ಭಾರತಕ್ಕಾದ ಲಾಭ ಸೇರಿದಂತೆ ಏರ್ ಶೋ ಕುರಿತ ಅನಿಸಿಕೆ ಅಭಿಪ್ರಾಯ ಇಲ್ಲಿದೆ.

Aero India 2023 aircraft and combat helicopter stunning aerobatics to around Rs 80k crore deal Mou Highlights of Air show ckm
Author
First Published Feb 17, 2023, 5:00 PM IST

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಏರೋ ಇಂಡಿಯಾ 2023ರ ಪ್ರದರ್ಶನ ಅತ್ಯಂತ ಸೊಗಸಾಗಿ ಮೂಡಿ ಬಂದಿತು. ಈ ಬಾರಿಯ ಏರೋ ಇಂಡಿಯಾ ಸಮಾರಂಭದಲ್ಲಿ ರಷ್ಯನ್ ಉಪಸ್ಥಿತಿ ಅತ್ಯಂತ ಕನಿಷ್ಠ ಮಟ್ಟದಲ್ಲಿತ್ತು. ಆದರೆ ಅಮೆರಿಕನ್ನರು ತಮ್ಮ ಅತ್ಯಾಧುನಿಕ ಎಫ್-35, ಎಫ್-16, ಎಫ್-21, ಎಫ್-18, ಬಿ-ಐ ಗಳೊಡನೆ ಆಗಮಿಸಿದ್ದರು. ಡಿಆರ್‌ಡಿಓ ಹಾಗೂ ಡಿಪಿಎಸ್‌ಯುಗಳ ಮಳಿಗೆಗಳು ಪ್ರಧಾನವಾಗಿದ್ದವು.

ಮಹತ್ವ ಮತ್ತು ಗಮನ ಸೆಳೆದ ಅಂಶಗಳು
ಆತ್ಮನಿರ್ಭರತೆ
ಮೇಕ್ ಇನ್ ಇಂಡಿಯಾ
ರಕ್ಷಣಾ ಉತ್ಪನ್ನಗಳ ರಫ್ತು
ಜಗತ್ತಿಗಾಗಿ ಭಾರತದಲ್ಲಿ ನಿರ್ಮಾಣ

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ!

ಈ ಬಾರಿ ಏರೋ ಇಂಡಿಯಾ ಪ್ರದರ್ಶನದಲ್ಲಿ ಮನಮೋಹಕ ಏರೋಬ್ಯಾಟಿಕ್ ಹಾಗೂ ವಿಂಗ್ ವಾಕರ್ ಪ್ರದರ್ಶನಗಳ ಉಪಸ್ಥಿತಿ ಇರಲಿಲ್ಲ. ಆದರೆ ಭಾರತದ ಸೂರ್ಯಕಿರಣ್ ಮತ್ತು ಸಾರಂಗ್‌ಗಳ ಪ್ರದರ್ಶನಗಳು ಎಂದಿನಂತೆ ಅತ್ಯದ್ಭುತವಾಗಿದ್ದವು.

ಎಫ್-35 ಪ್ರದರ್ಶನ ಸೊಗಸಾಗಿಯೂ, ಪ್ರಭಾವಿಯಾಗಿಯೂ ಮೂಡಿಬಂದಿದ್ದವು. ಎಫ್-35 ವಿಮಾನದ ಮೇಲ್ವಿಚಾರಣೆಗೆ ಇಬ್ಬರು ಸಿಬ್ಬಂದಿಗಳು ಆಗಮಿಸಿದ್ದರು.

ಹಲವಾರು ವಿಚಾರ ಸಂಕಿರಣಗಳು ಆಯೋಜನೆಗೊಂಡಿದ್ದರೂ, ಅವುಗಳು ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳು ಮತ್ತು ಡಿಪಿಎಸ್‌ಯುಗಳಿಗೆ ಸೀಮಿತವಾಗಿದ್ದವು.

ಸಾಮಾನ್ಯ ಅವಲೋಕನಗಳು
ಸಮಾರಂಭದ ಎಲ್ಲೆಡೆಯೂ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳು ಕಂಡುಬಂದಿದ್ದವು. ಸ್ಥಿರ ಪ್ರದರ್ಶನ ಪ್ರದೇಶವನ್ನು ಈ ವರ್ಷ ವಿಸ್ತರಿಸಲಾಗಿತ್ತು.

ಸಂಪೂರ್ಣ ಸ್ಥಿರ ಪ್ರದರ್ಶನದ ಪ್ರದೇಶ ಸುತ್ತುವರಿಯಲ್ಪಟ್ಟಿದ್ದು, ಸಾಕಷ್ಟು ದೂರದಿಂದಲೂ ವಿಮಾನಗಳನ್ನು ನೋಡಲು ಸಾಧ್ಯವಾಗಿತ್ತು. ಸ್ವತಂತ್ರ ಪ್ರದರ್ಶನ ವೀಕ್ಷಣೆಗೆ ಉತ್ತಮವಾದರೂ, ಅವುಗಳಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಬಹುದು.

LCH: ಭಾರತೀಯ ವಾಯುಪಡೆಗೆ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ ಬಲ, ಹೀಗಿದೆ ಇದರ ಸಾಮರ್ಥ್ಯ!

ಐಎಎಫ್ ಚಾಹ್ಲೆಟ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕಳಿಸಲ್ಪಟ್ಟಿತ್ತು. ಪ್ರದರ್ಶನದ ಕಾರಣದಿಂದ ಟ್ರಾಫಿಕ್ ಜಾಮ್‌ಗಳು ಕಂಡುಬಂದಿದ್ದವು.

ಅದರೊಡನೆ ಪ್ರದರ್ಶನದ ಪ್ರವೇಶ ಮತ್ತು ವಾಹನ ನಿಲುಗಡೆಯ ಕುರಿತಾದ ಸೂಕ್ತ ಮಾಹಿತಿಗಳ ಕೊರತೆ ಎದುರಾಗಿತ್ತು.

ಏರೋ ಇಂಡಿಯಾ ಪ್ರದರ್ಶನದ ವಹಿವಾಟಿನ ನೋಟ
ಏರೋ ಇಂಡಿಯಾ ಪ್ರದರ್ಶನದ ಮೂರು ದಿನಗಳ ಅವಧಿಯಲ್ಲಿ 80 ಸಾವಿರ ಕೋಟಿ ಮೊತ್ತದ ವ್ಯವಹಾರಗಳು ನಡೆದಿದ್ದವು. 226 ಸಹಭಾಗಿತ್ವಗಳು ಸೇರಿದಂತೆ, 201 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಏರೋ ಇಂಡಿಯಾ ಪ್ರದರ್ಶನದ ಸಂದರ್ಭದಲ್ಲಿ ಯುದ್ಧ ವಿಮಾನಗಳ ಖರೀದಿ, ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಂಪನಿಗಳ ನಡುವೆ ಒಪ್ಪಂದಗಳು ನಡೆದವು.

ಆದರೆ ಈ ಎಷ್ಟು ಒಪ್ಪಂದಗಳು, ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios